ಶಿಡ್ಲಘಟ್ಟದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ತಾಲ್ಲೂಕು ಪದ್ಮಶಾಲಿ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾವನಾ ಮಹರ್ಷಿ ಜಯಂತ್ಯುತ್ಸವದ ಅಂಗವಾಗಿ ಚಿಂತಾಮಣಿ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಕಳಶಗಳಿಗೆ ಗಂಗಾಜಲವನ್ನು ತುಂಬಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಸ್ಥಾನಕ್ಕೆ ಬಂದು ಕಳಶಸ್ಥಾಪಿಸಿದರು. ನಂತರ ಭಾವನಾ ಮಹರ್ಷಿ ಮತ್ತು ಭದ್ರಾದೇವಿಯ ಕಲ್ಯಾಣೋತ್ಸವ ನಡೆಸಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಅನಂತರಾಮಯ್ಯ, ಬಿ.ಲಕ್ಷ್ಮೀನಾರಾಯಣಪ್ಪ, ಎ.ತಿಪ್ಪಯ್ಯ, ಎನ್.ಲಕ್ಷ್ಮೀನಾರಾಯಣ, ನಾಗರಾಜ್, ರಮೇಶ್, ಮೂರ್ತಿ, ವೆಂಕಟನಾರಾಯಣಯ್ಯ, ಅರ್ಚಕ ಬಿ.ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -