ತಾಲ್ಲೂಕಿನ ಮುತ್ತೂರು ಗ್ರಾಮದ ಅವರ ಸ್ವಗೃಹದಲ್ಲಿ ಶುಕ್ರವಾರ ಸಂಜೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಅವರನ್ನು ಗೌರವಿಸಿದ ಸಂದರ್ಭದಲ್ಲಿ ಮೇಜರ್ ಸುನಿಲ್‌ಕುಮಾರ್ ಮಾತನಾಡಿದರು.
ಸಾರ್ವಜನಿಕರು ವ್ಯಕ್ತಪಡಿಸುವ ಸಣ್ಣ ಆದರ, ಗೌರವ, ಪ್ರೀತಿ ವಿಶ್ವಾಸಗಳು ಯೋಧರಿಗೆ ಆತ್ಮಸ್ಥೈರ್ಯ ತುಂಬುತ್ತದೆ ಎಂದು ಅವರು ತಿಳಿಸಿದರು.
‘ಯೋಧರಾದ ನಮಗೆ ಸಿಗುವ ಅತ್ಯಲ್ಪ ರಜೆಯಲ್ಲಿ ಮನೆಗೆ ಬರುತ್ತೇವೆ. ಆಗ ಸಮಾಜ ಬಾಂಧವರು ಆತ್ಮೀಯತೆಯನ್ನು ತೋರಿ ಪ್ರೀತ್ಯಾದರಗಳಿಂದ ನಡೆಸಿಕೊಳ್ಳುವುದು ನಮಗೆ ದೇಶಸೇವೆ ಮಾಡಲು ಸ್ಫೂರ್ತಿ ನೀಡಿದಂತಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕೆಲಸಗಳಾಗಬೇಕು. ಸೈನ್ಯಕ್ಕೆ ಸೇರುವವರ ಸಂಖ್ಯೆ ನಮ್ಮ ಭಾಗದಲ್ಲಿ ಹೆಚ್ಚಬೇಕು. ಹೆಚ್ಚು ರಜೆ ಸಿಕ್ಕಾಗ ನಾನು ಕೂಡ ನಮ್ಮ ಭಾಗದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತೇನೆ’ ಎಂದರು.
ನಿವೃತ್ತ ಬಿಎಸ್‌ಎಫ್ ಯೋಧ ದೊಡ್ಡಕುರುಬರಹಳ್ಳಿ ರವಿಕುಮಾರ್ ಮಾತನಾಡಿ, ‘ನಮ್ಮ ಭಾಗದಲ್ಲಿ ಸೇನೆಯಲ್ಲಿ ಅಧಿಕಾರಿಗಳಾಗಿರುವವರು ವಿರಳ. ಚಿಕ್ಕ ವಯಸ್ಸಿಗೇ ಮೇಜರ್ ಪದವಿಯನ್ನು ಅಲಂಕರಿಸಿ ನಮ್ಮೆಲ್ಲರ ಹೆಮ್ಮೆಯಂತಿದ್ದಾರೆ ಮೇಜರ್ ಸುನಿಲ್‌ಕುಮಾರ್. ಯುವಕರಿಗೆ ಸೇನೆಗೆ ಸೇರಲು ಪ್ರೇರಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡುವ ಅಗತ್ಯವಿದೆ. ಸೇನೆಯವರನ್ನು ಗುರುತಿಸಿ ಗೌರವಿಸುವ ಕೆಲಸ ಈಚೆಗೆ ಸಮಾಜದಲ್ಲಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದರು.
ವೇದಬ್ರಹ್ಮಶ್ರೀ ವೆಂಕಟೇಶಮೂರ್ತಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಜೆ.ವೆಂಕಟಾಪುರ ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಲಕ್ಷ್ಮೀನಾರಾಯಣ್, ಅಜಿತ್‌ಕೌಂಡಿನ್ಯ, ನರಸಿಂಹಮೂರ್ತಿ, ಗಂಗಾಧರ್, ಪವನ್ ಹಾಜರಿದ್ದರು.
- Advertisement -
- Advertisement -
- Advertisement -