15.1 C
Sidlaghatta
Monday, November 10, 2025

ತಪ್ಪಿದ ಬೆಂಕಿ ಅವಘಡ

- Advertisement -
- Advertisement -

ನಗರದ ಉಲ್ಲೂರುಪೇಟೆಯಲ್ಲಿ ಶನಿವಾರ ಬೆಳಿಗ್ಗೆ ಅಗ್ನಿ ಆಕಸ್ಮಿಕವೊಂದು ಸಂಭವಿಸಿದ್ದು, ಸೂಕ್ತ ಸಮಯದಲ್ಲಿ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿದ್ದರಿಂದ ಅಪಾಯವು ತಪ್ಪಿದೆ.
ಉಲ್ಲೂರುಪೇಟೆಯ ನಿವಾಸಿ ಟೈಲರ್‌ ಕೆಂಪಣ್ಣ ಅವರ ಮನೆಯ ಮಹಡಿಯ ಮೇಲೆ ಬಾಯ್ಲರಿಗೆ ಬಳಸಲು ಒಣ ಸೌದೆ, ಸೊಪ್ಪು, ಸುರುಗನ್ನು ಹರಡಿದ್ದರು. ಬಾಯ್ಲರಿನ ಪೈಪಿನಿಂದ ಹಾರಿದ ಕಿಡಿಯು ಒನ ಎಲೆಗಳಿಗೆ ತಗುಲಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳದವರಿಗೆ ದೂರವಾಣಿ ಕರೆ ಮಾಡಿದ್ದರಿಂದ ಬಂದು ನಂದಿಸಿ ಆಗುತ್ತಿದ್ದ ಅಪಾಯವನ್ನು ತಪ್ಪಿಸಿದ್ದಾರೆ.
ನಗರದಲ್ಲಿ ತಾಲ್ಲೂಕು ಕಚೇರಿಯ ಬಳಿ ಅಗ್ನಿಶಾಮಕ ದಳಕ್ಕೆ ಸ್ಥಳವನ್ನು ನೀಡಿರುವುದರಿಂದ ಸಮಯಕ್ಕೆ ಸರಿಯಾಗಿ ಬಂದರು. ಇದರಿಂದ ಅಗ್ನಿ ಅವಘಡವು ತಪ್ಪಿದೆ. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಆವರಿಸುವ ಸಂಭವವು ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!