ಶಾಶ್ವತ ನೀರಾವರಿ ಹೋರಾಟವು 120ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರ ತಾಲ್ಲೂಕಿನ ನಾಗಮಂಗಲ, ನಡಿಪಿನಾಯಕನಹಳ್ಳಿ, ಹೊಸಹಳ್ಳಿ ಮತ್ತು ನಲ್ಲೇನಹಳ್ಳಿ ಗ್ರಾಮಸ್ಥರು ಭಜನೆ ಮಾಡುತ್ತಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಸೋಮೇಶ್ವರಸ್ವಾಮಿ ಭಜನಾ ಮಂಡಳಿ, ನಾಗಮಂಗಲ, ನಡಿಪಿನಾಯಕನಹಳ್ಳಿ, ಹೊಸಹಳ್ಳಿ ಮತ್ತು ನಲ್ಲೇನಹಳ್ಳಿ ಗ್ರಾಮಗಳ ಸ್ತ್ರೀಶಕ್ತಿ ಸಂಘದ ಸದಸ್ಯರು, ಯುವಕರು, ರೈತ ಸಂಘದ ಸದಸ್ಯರು ಬೈಕುಗಳು ಹಾಗೂ ಟೆಂಪೂಗಳ ಮೂಲಕ ಶಿಡ್ಲಘಟ್ಟಕ್ಕೆ ಬಂದರು. ಬಸ್ ನಿಲ್ದಾಣದ ಬಳಿ ಕೆಲ ಹೊತ್ತು ಶಾಶ್ವತ ನೀರಾವರಿ ಜಾರಿಗಾಗಿ ಘೋಷಣೆಗಳನ್ನು ಕೂಗುತ್ತಾ ಒತ್ತಾಯಿಸಿ ನಂತರ ಚಿಕ್ಕಬಳ್ಳಾಪುರದ ಚದಲಪುರ ಗೇಟ್ ಬಳಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ತೆರಳಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಸದಸ್ಯ ಶ್ರೀನಿವಾಸಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ವೆಂಕಟೇಶಪ್ಪ, ಶಿವಕುಮಾರ್, ಆಂಜಿನಪ್ಪ, ಮುನಿರಾಜು, ಮಂಜುನಾಥ, ರಾಮಣ್ಣ, ಸೋಮನಾಥ್, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -