ಶಿಡ್ಲಘಟ್ಟದ ಪುರಸಭೆ ಆವರಣದ್ಲಲಿ ಹತ್ತು ಲಕ್ಷ ರೂಗಳ ವೆಚ್ಚದ್ಲಲಿ ವಾತಾವರಣದ ತೇವಾಂಶದಿಂದ ನೀರನ್ನು ತಯಾರಿಸುವ ಯಂತ್ರವನ್ನು ಸೋಮವಾರ ಸ್ಥಾಪಿಸಲಾಯಿತು. ಪ್ರತಿ ದಿನ 500 ರಿಂದ 1000 ಲೀಟರ್ ನೀರನ್ನಿದು ಉತ್ಪಾದಿಸಬ್ಲಲದು. ಕಡಿಮೆ ವಿದ್ಯುತ್ ಅಂದರೆ ಪ್ರತಿ ದಿನ 8 ಯೂನಿಟ್ ವಿದ್ಯುತ್ ಬಳಸುತ್ತದೆ. ಹಾಗಾಗಿ ಒಂದು ಲೀಟರ್ ನೀರಿಗೆ ಹತ್ತು ಪೈಸೆ ಬೀಳುತ್ತದೆ. ಓಜೋನ್ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧೀಕರಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ಮುಕ್ತವಾಗಿರುತ್ತದೆ. ಯಂತ್ರವನ್ನು ಪ್ರಾರಂಭಮಾಡಿದ ಎರಡು ಗಂಟೆಗ್ಲೆಲಾ ನೀರನ್ನು ಉತ್ಪಾದಿಸತೊಡಗುತ್ತದೆ ಹಾಗೂ ಇದು ಪರಿಸರ ಸ್ನೇಹಿಯಾಗಿದೆ.
- Advertisement -
- Advertisement -