ನಗರದಲ್ಲಿ ಬುಧವಾರ ನಗರಸಭೆ ಅಧಿಕಾರಿಗಳು ಸುಮಾರು ಒಂದು ಕ್ವಿಂಟಾಲ್‌ನಷ್ಟು ಪ್ಲಾಸ್ಟಿಕ್ ಮತ್ತು ಆರು ಪಿಒಪಿ ಗಣಪನ ಮೂರ್ತಿಗಳನ್ನು ವಶಪಡಿಸಿಕೊಂಡು ಮಾರುತ್ತಿದ್ದವರಿಗೆ ತಲಾ ಒಂದು ಸಾವಿರ ರೂಗಳ ದಂಡ ವಿಧಿಸಿದರು.
ಪಿಒಪಿ ಗಣೇಶ ಮೂರ್ತಿಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧ ಹೇರಿದೆ. ಮುಂಚಿತವಾಗಿಯೇ ತಿಳಿಸಿದ್ದರೂ ಪಿಒಪಿ ಗಣಪ ಮಾರುತ್ತಿದ್ದವರಿಗೆ ದಂಡ ವಿಧಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಚಲಪತಿ ಈ ಸಂದರ್ಭದಲ್ಲಿ ತಿಳಿಸಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳನ್ನು ಮಾರಲೇಬಾರದು. ಬಣ್ಣ ಹಚ್ಚದ ಮಣ್ಣಿನ ಗಣೇಶನ ಮೂರ್ತಿಗಳನ್ನಷ್ಟೇ ಮಾರಬೇಕು. ಮೂರ್ತಿಗಳನ್ನು ಮಾರುವವರು ನಗರಸಭೆಯಿಂದ ಅನುಮತಿ ಪಡೆಯುವುದು ಖಡ್ಡಾಯ ಎಂದು ಹೇಳಿದರು.
ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಹಬ್ಬದ ಆಚರಣೆಯಲ್ಲಿಯೂ ನಾವೆಲ್ಲರೂ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಬೇಕು. ಪ್ಲಾಸ್ಟಿಕ್ ಬಳಕೆ ಹಾಗೂ ಬಣ್ಣಗಳ ಬಳಕೆ ಮಾಡಲೇ ಬಾರದು ಎಂದರು.
ಪರಿಸರ ಅಭಿಯಂತರ ದಿಲೀಪ, ಆರೋಗ್ಯ ಅಧಿಕಾರಿ ಸಯೀದಾ ಹಾಜರಿದ್ದರು
- Advertisement -
- Advertisement -
- Advertisement -