20.1 C
Sidlaghatta
Thursday, December 12, 2024

ರೇಷ್ಮೆ ಬೆಳೆಗಾರರು ಹೆಚ್ಚು ಲಾಭ ಪಡೆಯಲು ಊಜಿ ನಿರ್ವಹಣೆ ಅನಿವಾರ್ಯ

- Advertisement -
- Advertisement -

ತಾಲ್ಲೂಕಿನ ಬೋದಗೂರಿನಲ್ಲಿ ಕುರುಬೂರಿನ ರೇಷ್ಮೆ ಕೃಷಿ ವಿಜ್ಞಾನ ಕಾಲೇಜು, ಕೆ.ವಿ.ಕೆ, ರೇಷ್ಮೆ ಇಲಾಖೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಗಳ ಸಂಯುಕ್ತಾಶ್ರಯದಲ್ಲಿ ನಾಗೇಶ್ ಕುಮಾರ್‌ರವರ ರೇಷ್ಮೆಹುಳು ಸಾಕಣೆ ಮನೆಯಲ್ಲಿ ನಡೆದ ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ರೇಷ್ಮೆಕೃಷಿ ವಿಜ್ಞಾನಿ ಡಾ.ವಿನೋದಾ ಮಾತನಾಡಿದರು.

 ರೇಷ್ಮೆಕೃಷಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಕಡಿಮೆ ನೀರಿರುವ ಪ್ರದೇಶದಲ್ಲಿ ಬೆಳೆಯಲೂ ಸಹ ಅನುಕೂಲಕರವಾಗಿದೆ. ಕೋವಿಡ್-19ರ ನಂತರದಲ್ಲಿ ಲಾಕ್‌ಡೌನ್ ತೆರವುಗೊಳಿಸಿದಾಗಿನಿಂದ ಏರುಗತಿಯಲ್ಲಿರುವ ಗೂಡಿನ ಬೆಲೆಯು ರೈತರ ಮುಖದಲ್ಲಿ ಮಂದಹಾಸವನ್ನು ತಂದಿದೆ. ರೇಷ್ಮೆಹುಳು ಸಾಕಾಣಿಕೆಯಲ್ಲಿ ಪ್ರಮುಖ ಪೀಡೆಯಾದ ಊಜಿ ನಿರ್ವಹಣೆ ಸಮರ್ಪಕವಾಗಿ ಮಾಡಿದಲ್ಲಿ ರೇಷ್ಮೆ ಬೆಳೆಗಾರರಿಗೆ ಹೆಚ್ಚು ಲಾಭ ಬರುತ್ತದೆ ಎಂದು ಅವರು ತಿಳಿಸಿದರು.

 ಊಜಿನೊಣದ ಜೀವನಚಕ್ರ, ಊಜಿನಿರ್ವಹಣೆಯ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿ, ನೈಲಾನ್ ಪರದೆಯ ಜೊತೆಗೆ ಇತರೆ ತಾಂತ್ರಿಕತೆಗಳಾದ ಊಜಿಟ್ರ್ಯಾಪ್ ದ್ರಾವಣ, ಊಜಿಪೌಡರ್, ಹಳದಿ ಅಂಟುಪಟ್ಟಿ, ಪರತಂತ್ರ ಜೀವಿಯಾದ ನಿಸೋಲಿಂಕ್ಸ್ ಥೈಮಸ್‌ನ ಬಳಕೆಯ ಜೊತೆಗೆ ಹೊಸ ತಂತ್ರಜ್ಞಾನವಾದ ಲಿಂಗಾಕರ್ಷಕ ಬಲೆಯನ್ನು ಅಳವಡಿಸಿಕೊಳ್ಳುವುದರಿಂದ ಊಜಿಯ ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗುತ್ತದೆ. ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆಯಿಂದ ರೈತನ ಲಾಭ ಮಾತ್ರವಲ್ಲ ಪರಿಸರ ಸಂರಕ್ಷಣೆಯೂ ಆಗುವುದೆಂದು ಹೇಳಿದರು.

 ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಮಾತನಾಡಿ, ತಮ್ಮ ಹುಳುಮನೆಯಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುಮಾರು ಶೇ 10 ರಷ್ಟು ಅಧಿಕ ಇಳುವರಿ ಪಡೆದುದ್ದಲ್ಲದೆ ಪ್ರತಿ ಕೆಜಿ ಗೂಡಿಗೆ ಸುಮಾರು 30 ರೂಗಳಷ್ಟು ಹೆಚ್ಚಿನ ದರ ದೊರೆತಿದ್ದಾಗಿ ಹೇಳಿದರು.

 ರೇಷ್ಮೆ ಉಪನಿರ್ದೇಶಕ ಭೈರಪ್ಪ ಮಾತನಾಡೀ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆಕೃಷಿಯಲ್ಲಿ ಮಂಚೂಣಿಯಲ್ಲಿದ್ದರೂ ದ್ವಿತಳಿ ಬೆಳೆಯಲ್ಲಿ ಬಹಳ ಹಿಂದುಳಿದಿದೆ. ಎಲ್ಲಾ ರೈತಬಾಂಧವರೂ ಇತ್ತ ಗಮನ ಹರಿಸಬೇಕಾಗಿ ಸೂಚಿಸಿದರು.

 ರೇಷ್ಮೆ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ದ್ವಿತಳಿಯಲ್ಲಿ ಈಗಿರುವ ಡಬಲ್ ಹೈಬ್ರಿಡ್ ತಳಿಗಳು ನಮ್ಮ ಸಾಂಪ್ರದಾಯಕ ತಳಿಗಳಿಗಿಂತ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಶ್ರಮವಿಲ್ಲದೆ ಬೆಳೆಯಬಹುದು. ಪ್ರತಿ ನೂರು ಮೊಟ್ಟೆಗೆ ಸುಮಾರು 15 ಸಾವಿದಷ್ಟು ಅಧಿಕ ಲಾಭ ಗಳಿಸಬಹುದು ಮತ್ತು ಮೊದಲಿನಂತೆ ಬೆಳೆ ಕಳೆದುಕೊಳ್ಳುತ್ತೇವೆಂದು ಭಯ ಪಡಬೇಕಾದ ಅಗತ್ಯವಿಲ್ಲ. ದ್ವಿತಳಿ ಬೆಳೆಗಾರರಿಗೆ ಸರ್ಕಾರದಿಂದ ಚಾಕಿಗೆ ಸಬ್ಸಿಡಿಯಂತಹ ಸಾಕಷ್ಟು ಕಾರ್ಯಕ್ರಮಗಳಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ತಿಳಿಹೇಳಿದರು.

 ಕೃಷಿಯಲ್ಲಿ ಮಣ್ಣು ಪರೀಕ್ಷೆಯ ಮಹತ್ವವನ್ನು ರೇಷ್ಮೆಕೃಷಿ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಡಾ. ನಳಿನ ತಿಳಿಸಿದರೆ, ಹಿಪ್ಪುನೇರಳೆ ತೋಟದಲ್ಲಿ ಹಸಿರೆಲೆ ಗೊಬ್ಬರವನ್ನು ಬೆಳೆದು ರಾಸಾಯನಿಕಗಳ ಶೇ 50 ರಷ್ಟು ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಬೇಸಾಯ ಶಾಸ್ತ್ರಜ್ಞೆ ಅಮೃತ ತಿಳಿಸಿದರು.

ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿಇಒ ಜನಾರ್ಧನಮೂರ್ತಿ, ಬೋದಗೂರು, ಹಿತ್ತಲಹಳ್ಳಿ, ಮಳಮಾಚನಹಳ್ಳಿ, ಗಿಡ್ನಹಳ್ಳಿ ಮೊದಲಾದ ಗ್ರಾಮಗಳ ಸುಮಾರು 50 ಜನ ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!