ವಿದ್ಯೆ ವಿಕಾಸಕ್ಕೆ ಮಾರ್ಗದರ್ಶಿ. ಗ್ರಾಮೀಣ ಭಾಗದಲ್ಲಿ ಕಡಿಮೆ ವೆಚ್ಚದ ಶಿಕ್ಷಣ, ಮೂಲಸೌಕರ್ಯ ನೀಡುತ್ತಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹೊಣೆಯನ್ನು ಹೊತ್ತಿರುವುದಾಗಿ ಲೋಕಮಾತಾ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಎನ್.ಆರ್.ಕೃಷ್ಣಮೂರ್ತಿ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಸಂಸ್ಥೆ ಹಾಗೂ ಕಪಿಲಮ್ಮ ಸಂಯುಕ್ತ ಕಾಲೇಜಿನ ದಶಮಾನೋತ್ಸವ, ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಕಾಳಜಿ ವಹಿಸಬೇಕು, ಈಚೆಗೆ ಗ್ರಾಮಸ್ಥರ ಆಸಕ್ತಿಯಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ. ಯಾವುದೇ ಸಾಧನೆ ಕೇವಲ ಮಕ್ಕಳನ್ನು ಮಾತ್ರ ಅವಲಂಬಿಸಿರುವುದಿಲ್ಲ. ಶಾಲೆಯ ಪ್ರತಿಯೊಂದು ವಿಭಾಗದಲ್ಲಿನ ಸಿಬ್ಬಂದಿಯ ಸತತ ಪರಿಶ್ರಮ, ದೈಹಿಕ ಮಾನಸಿಕ ಸೇವೆ, ಮಕ್ಕಳ ಏಕಾಗ್ರತೆ ಸಾಧನೆಗೆ ದಾರಿಯಾಗುತ್ತದೆ ಎಂದರು.
ಶಾಲಾ ವಾರ್ಷಿಕೋತ್ಸವ ಮತ್ತು ಕಾಲೇಜಿನ ದಶಮಾನೋತ್ಸವದ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ವಿಭಾಗಗಳ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು.
ವಿವಿಧ ಪಠ್ಯೇತರ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದಯಾನಂದ ಸಾಗರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೈಹಿಕ ಶಿಕ್ಷಣ ನಿರೀಕ್ಷಕ ಕೆ.ಎ.ಅಶೋಕ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎ.ನಾಗಪ್ರಕಾಶ್, ಲೋಕಮಾತಾ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಎನ್.ಆರ್.ಲಲಿತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಕೆ.ಜಿ.ಇಂದಿರಾ, ಗಿರಿಜಾ ರಮೇಶ್, ವನರಾಜಲಕ್ಷ್ಮಿ, ಎಚ್.ಎಸ್.ಶ್ರೀಕಾಂತ್, ಪ್ರೊ.ಶಶಿಧರ್, ಎನ್.ಆರ್.ನಾಗರಾಜರಾವ್, ಡಿ.ಎಲ್.ಜನಾರ್ಧನರಾವ್, ಆರ್.ಮಧು, ಮುಖ್ಯ ಶಿಕ್ಷಕ ಸತ್ಯನಾರಾಯಣ್, ಪ್ರಾಂಶುಪಾಲ ಸುದರ್ಶನ್, ಶಿಕ್ಷಕರಾದ ಸುಮಾ, ಪ್ರಕಾಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -