ನಗರದ ಸರಸ್ವತಿ ಕಾನ್ವೆಂಟ್ ನಲ್ಲಿ ಸೋಮವಾರ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಶಾಲೆಯ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ವಚನ ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ದೇಶದ ಪ್ರಗತಿಗೆ ಪೂರಕವಾದ ಭ್ರಾತೃತ್ವ , ಸಹಕಾರ ಕಾಯಕ ದಾಸೋಹ ಜೀವನ ಮೌಲ್ಯಗಳನ್ನು ಸಾಹಿತ್ಯ ತಿಳಿಸುತ್ತದೆ ಎಂದು ಅವರು ತಿಳಿಸಿದರು.
ವಚನಗಳು ಸಮಾನತೆಯ ಮೂಲ ಮಂತ್ರವಾಗಿಸಿಕೊಂಡು ರಚನೆಯಾದವು. ಜಾತಿ, ಲಿಂಗ, ಧರ್ಮದ ಆಚರಣೆಗಳಿಗೆ ಹೊಸ ಅರ್ಥ ಹೊಸ ದಿಕ್ಕು ತೋರಿಸಿದ್ದು ವಚನಗಳು. ದಬ್ಬಾಳಿಕೆ, ಕಂದಾಚಾರಗಳಿಂದ ನಲುಗಿದ ಜನತೆಗೆ ಹೊಸ ಬದುಕನ್ನು ತೋರಿಸಿದ ಕಾರ್ಯ ವಚನಗಳು ಮಾಡಿವೆ ಎಂದರು.
ಶಾಲೆಯ ವಿದ್ಯಾರ್ಥಿಗಳು ವಚನಗಳನ್ನು ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ವಿದ್ಯಾರ್ಥಿಗಳಾದ ಕಾವ್ಯ, ಕೃತಿಕಾ, ಚಿತ್ರ, ವರ್ಷಿನಿ, ಭಾವನಾ, ಲಿಖಿತ, ಗಂಗೋತ್ರಿ, ವರ್ಷ, ಮೋಹನ್, ಪುನೀತ್ ಕುಮಾರ್ ವಚನಗಳನ್ನು ವಾಚಿಸಿದರು.
ಪಶುಸಂಗೋಪನಾ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ಬೆಳ್ಳೂಟಿ ಬಿಂದುಜಾ, ೩೬ ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ ಸೋಮಶೇಖರ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಿ.ಎನ್.ಶಿವಣ್ಣ, ಸ್ಕೌಟ್ ಮತ್ತು ಗೈಡ್ಸ್ ನ ಶೈಲಜಾ ಅವರನ್ನು ಸನ್ಮಾನಿಸಲಾಯಿತು.
ವಸಾಪ ರಾಜ್ಯ ಘಟಕದ ಅಧ್ಯಕ್ಷ ತ್ಯಾಗರಾಜ್, ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಶ್ರೀಕಾಂತ್, ಕಾರ್ಯದರ್ಶಿ ನಾಗಲಕ್ಷ್ಮಿ, ಬಿ.ಟಿ.ಮುನಿಯಪ್ಪ, ವಿ.ಸುಬ್ರಮಣಿ, ಕೆ.ವಿ.ನವಮೋಹನ್, ದೇವರಾಜ್, ಬೆಳ್ಳೂಟಿ ಸಂತೋಷ್, ವಕೀಲ ಯೋಗಾನಂದ, ಬಿ.ನಾರಾಯಣಸ್ವಾಮಿ, ಸೋಮಶೇಖರ್, ಮುಖ್ಯಶಿಕ್ಷಕ ಅಗಜಾನನಮೂರ್ತಿ, ವಿ.ಕೃಷ್ಣ ಹಾಜರಿದ್ದರು.
- Advertisement -
- Advertisement -
- Advertisement -