ನಮ್ಮ ಸಾಂಪ್ರದಾಯಿಕ ಕಲೆಯಾದ ಭರತನಾಟ್ಯವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಶಾಸ್ತ್ರಬದ್ದ ಹಾಗು ಸಮಕಾಲೀನ ಪದ್ದತಿಯಲ್ಲಿ ಕಲಿಸುವ ಮೂಲಕ ಇದು ಪ್ರವೃತ್ತಿಯಷ್ಟೇ ಅಲ್ಲ ವೃತ್ತಿಯನ್ನಾಗಿಯೂ ಮಾಡಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿರುವ ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದು ವಿದ್ವಾನ್ ಚೇತನ್ ಗಂಗಟ್ಕರ್ ಅಭಿಪ್ರಾಯಪಟ್ಟರು.
ನಗರದ ಶ್ರೀಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ವತಿಯಿಂದ ಮೇ 02 ಮತ್ತು 03 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೇವಾಸದನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ನೃತ್ಯೋತ್ಸವ-12 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಐದು ವರ್ಷಗಳ ಹಿಂದೆ ಶಿಡ್ಲಘಟ್ಟದಲ್ಲಿ ಶುರುವಾದ ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ಇದೀಗ ಜಿಲ್ಲೆಯ ಚಿಕ್ಕಬಳ್ಳಾಪುರ ಸೇರಿದಂತೆ ಮುದ್ದೇನಹಳ್ಳಿ, ಗೌರಿಬಿದನೂರು, ಗುಡಿಬಂಡೆ ಹಾಗು ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದವರೆಗೂ ಚಾಚಿ ಸುಮಾರು 400 ಕ್ಕೂ ಹೆಚ್ಚು ಮಕ್ಕಳಿಗೆ ಭರತನಾಟ್ಯ ನೃತ್ಯತರಬೇತಿ ನೀಡುತ್ತಿದೆ ಎಂದರು.
ನಿವೃತ್ತ ಜಿಲ್ಲಾ ಮತ್ತು ಅಧಿವೇಶನ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಡಿ ಕಿಣಿಕೇರಿ ಮಾತನಾಡಿ ಭರತನಾಟ್ಯ ಹಾಗೂ ಕೊರಿಯೋಗ್ರಫಿ (ನೃತ್ಯ ಸಂಯೋಜನೆ) ಯಲ್ಲಿ ಸ್ನಾತಕೋತ್ತರ ಪದವೀಧರರಾದ ಪವನ್‍ಕುಮಾರ್ ನೃತ್ಯವನ್ನೇ ತಮ್ಮ ಉಸಿರಾಗಿಸಿಕೊಂಡು, ಅದನ್ನು ತನ್ನ ಹುಟ್ಟೂರು ಹಾಗು ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಕುಂಜದ 60 ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯದ ವಿವಿಧ ನೃತ್ಯಗಳನ್ನು ಮಾಡುವುದರೊಂದಿಗೆ ಭಾಗವಹಿಸಿದ್ದ ಪೋಷಕರು ಹಾಗು ಗಣ್ಯರನ್ನು ಸಂತೃಪ್ತಗೊಳಿಸಿದರು.
ಕಾರ್ಯಕ್ರಮದಲ್ಲಿ ವಿದೂಷಿ ಚಂದ್ರಪ್ರಭಾ ಚೇತನ್, ವಿದ್ವಾನ್ ಶ್ರೀ ಸೋಮಶೇಖರ್ ಚೂಡಾನಾಥ್, ಸೌಮ್ಯ ಸೋಮಶೇಖರ್, ಟಿ.ಎಸ್.ಮುರಳೀಧರ್, ಶ್ರೀ ಕೃಷ್ಣ ಕಲಾಕುಂಜದ ನಿರ್ದೇಶಕ ಜಿ.ಪವನ್‍ಕುಮಾರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -