ತಾಲ್ಲೂಕಿನ ಎಲ್ಲಾ ಹೋಬಳಿಗಳ ಮಟ್ಟದಲ್ಲಿ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಆಯೋಜಿಸಲಾಗಿದೆ. ಪಹಣಿಗಳ ತಿದ್ದುಪಡಿ, ಪಡಿತರ ಚೀಟಿ ಸಮಸ್ಯೆ, ಪಿಂಚಣಿದಾರರ ಬ್ಯಾಂಕ್ ಖಾತೆ ಆಧಾರ್ ನಂಬರ್‌ಗಳನ್ನು ತಾಲ್ಲೂಕು ಆಡಳಿತಕ್ಕೆ ನೀಡಿ ಪಿಂಚಣಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಅನುಕೂಲತೆಯನ್ನು ಪಡೆಯಬೇಕೆಂದು ತಹಶೀಲ್ದಾರ್ ಮನೋರಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ವೇಳಾಪಟ್ಟಿ: ಆಗಸ್ಟ್ 2 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಬಶೆಟ್ಟಹಳ್ಳಿ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಶೆಟ್ಟಿಗೆರೆ, ಆಗಸ್ಟ್ 4 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಬ್ಲೂಡು, ಆಗಸ್ಟ್ 6ರ ಶನಿವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಜಂಗನಕೋಟೆ, ಆಗಸ್ಟ್ 9 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಗಂಜಿಗುಂಟೆ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಈ ತಿಮ್ಮಸಂದ್ರ, ಆಗಸ್ಟ್ 11 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಆನೂರು, ಆಗಸ್ಟ್ 12ರ ಶುಕ್ರವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಕುಮಬಿಗಾನಹಳ್ಳಿ, ಆಗಸ್ಟ್ 15 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಪ್ಪೇಗೌಡನಹಳ್ಳಿ, ಆಗಸ್ಟ್ 16 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ದೊಡ್ಡತೇಕಹಳ್ಳಿ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಎಸ್.ದೇವಗಾನಹಳ್ಳಿ, ಆಗಸ್ಟ್ 18 ರ ಗುರುವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಬೋದಗೂರು, ಆಗಸ್ಟ್ 20 ರ ಶನಿವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಹೊಸಪೇಟೆ, ಆಗಸ್ಟ್ 23 ರ ಮಂಗಳವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಅಮ್ಮಗಾರಹಳ್ಳಿ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಗಡಿಮಿಂಚೇನಹಳ್ಳಿ, ಆಗಸ್ಟ್ 27 ರ ಶನಿವಾರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಭಕ್ತರಹಳ್ಳಿ.
- Advertisement -
- Advertisement -
- Advertisement -
- Advertisement -