ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು 110ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಭಕ್ತಸಮೂಹ ಈ ಸಂತೋಷಕ್ಕೆ ಸಾಕ್ಷಿಯಾಗಿ ಏಪ್ರಿಲ್ 1 ರಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಗುರುವಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭಕ್ಕೆ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಗಳವರ ವಿವಿಧ ಭಾವಚಿತ್ರಗಳನ್ನೊಳಗೊಂಡು ಸಿಂಗರಿಸಿದ ಶೋಭಾಯಾತ್ರೆಯನ್ನು ಕಳುಹಿಸಲಾಗುತ್ತಿದೆ.
ಈ ಶೋಭಾಯಾತ್ರೆಯ ರಥವು ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಬರಲಿದೆ. ಶನಿವಾರ ಬೆಳಿಗ್ಗೆ ಕುಂಬಿಗಾನಹಳ್ಳಿ ಗ್ರಾಮದಲ್ಲಿ ಶಿವಪೂಜೆ ಮತ್ತು ಪ್ರಸಾದವನ್ನು ಮಾಡಿಕೊಂಡು ತಾಲ್ಲೂಕಿನ ಚೀಮಂಗಲ ಗ್ರಾಮಕ್ಕೆ ಶನಿವಾರ 11 ಗಂಟೆಗೆ ಆಗಮಿಸಲಿದೆ. ಅಲ್ಲಿ ಪ್ರಸಾದದ ವ್ಯವಸ್ಥೆಯ ನಂತೆ ಶಿಡ್ಲಘಟ್ಟಕ್ಕೆ ಮಧ್ಯಾಹ್ನ 3 ಗಂಟೆಗೆ ನಗರದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬರುತ್ತದೆ. ದೇವಾಲಯದಲ್ಲಿ ಪೂಜೆ, ಪಾನಕ, ಸಿಹಿ ಮತ್ತು ಪ್ರಸಾದವನ್ನು ವಿತರಿಸಲಾಗುವುದು. ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಪೂಜ್ಯರ ರಥಕ್ಕೆ ಶ್ರದ್ಧಾಪೂರ್ವಕವಾಗಿ ಗೌರವ ಸಲ್ಲಿಸಲಾಗುವುದು.
- Advertisement -
- Advertisement -
- Advertisement -