28.8 C
Sidlaghatta
Tuesday, July 8, 2025

ಗ್ರಾಮೀಣ ಯುವಕರಿಗೆ ಕ್ರೀಡಾ ಪರಿಕರ ವಿತರಣೆ

- Advertisement -
- Advertisement -

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ವತಿಯಿಂದ ಅಪ್ಪೇಗೌಡನಹಳ್ಳಿ ಶ್ರೀರಾಮ ಯುವಕರ ಸಂಘಕ್ಕೆ ನೀಡಿರುವ ಕ್ರೀಡಾ ಪರಿಗಳನ್ನು ವಿತರಿಸಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿದರು.

ಗ್ರಾಮಗಳಲ್ಲಿ ಯುವಕರು ಆಟೋಟಗಳಲ್ಲಿ ತೊಡಗಿಸಿಕೊಂಡು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆರೋಗ್ಯವಂತ ಸದೃಢ ಯುವಕರು ನಾಡಿನ ಆಸ್ತಿಯಿದ್ದಂತೆ ಎಂದು ಅವರು ತಿಳಿಸಿದರು.

 ವಾಲಿಬಾಲ್, ವಾಲಿಬಾಲ್ ನೆಟ್, ಫುಟ್ ಬಾಲ್, ಕ್ರಿಕೆಟ್ ಆಟದ ಸಾಮಗ್ರಿಗಳು, ಸ್ಕಿಪ್ಪಿಂಗ್, ಭಾರ ಎತ್ತುವ ಡೆಂಬಲ್ ಮುಂತಾದ ಕ್ರೀಡಾ ಪರಿಕರಗಳನ್ನು ಕ್ರೀಡಾ ಇಲಾಖೆ ನೀಡಿದೆ. ದೈಹಿಕ ಕ್ಷಮತೆಗೆ ಆಟೋಟಗಳು ಅನಿವಾರ್ಯ. ಮೊಬೈಲ್ ಕೈಯಲ್ಲಿ ಹಿಡಿದು ಆಟೋಟಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ತಾಣಗಳಲ್ಲಿ ಸಮಯ ಕಳೆಯುವುದೇ ಇತ್ತೀಚೆಗೆ ಹೆಚ್ಚಾಗಿ ಹೋಗಿದೆ. ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸಿರುತ್ತದೆ ಎಂದು ಹೇಳಿದರು.

 ಶ್ರೀರಾಮ ಯುವಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!