Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ (Bashattihalli) ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ (Sri Sai International School) ಬುಧವಾರ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ, ಶಾಲಾಸಂಸ್ಥಾಪಕರ ದಿನಾಚರಣೆಯಲ್ಲಿ (Founders Day) ಶಾಲೆಯ ಕಾರ್ಯದರ್ಶಿ ಎಂ.ಮಂಜುನಾಥ್ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಸಮಾಜದ ಮೇರು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳನ್ನು, ಗುಣಾತ್ಮಕ ಭಾವನೆ ಮೈಗೂಡಿಸಿ ವಿಶಿಷ್ಟ ಸಾಧನೆ ಮಾಡಬಲ್ಲ ಮನೋಬಲ ಹಾಗೂ ಸಹಕಾರವನ್ನು ಮಕ್ಕಳಿಗೆ ಒದಗಿಸಬೇಕೆಂದು ಪೋಷಕರಿಗೆ ಮನವಿ ಮಾಡಿದರು.
ಶಾಲೆಯಲ್ಲಿ ನೀಡುವ ಶಿಕ್ಷಣ ಮಕ್ಕಳಲ್ಲಿಯೇ ಜೀವನ ನಿರ್ವಹಿಸುವ ಪಾಠವನ್ನು ಹೇಳಿಕೊಟ್ಟರೆ, ಮನೆಗಳಲ್ಲಿ ನೀಡುವ ಶಿಕ್ಷಣವು ಮಕ್ಕಳ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸುವ ವ್ಯಕ್ತಿಗಳನ್ನಾಗಿ ರೂಪಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ವಿಶೇಷ ಪೂಜೆ, ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಕ್ಷರಾಭ್ಯಾಸದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಇನ್ನೂರಕ್ಕೂ ಹೆಚ್ಚಿನ ಪೋಷಕರು ತಮ್ಮ ನರ್ಸರಿ ಹಾಗೂ ಒಂದನೇ ತರಗತಿಯ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
ಸಂಸ್ಥೆಯ ಅಧ್ಯಕ್ಷೆ ಜೆ.ದೀಪ, ಮುಖ್ಯ ಶಿಕ್ಷಕ ಹರ್ಷಕುಮಾರ್, ಶಿಕ್ಷಕರಾದ ಶ್ರೀಕಾಂತ್, ಚಿಕ್ಕಣ್ಣ, ಶಶಿಕಲಾ, ರಘು, ನಂದಿನಿ, ಕಿರಿಜಾ, ಸೋರೆಫಿ ಜಿಮಿಕ್, ಲೆಶಿಯೋ ರಾಮರ, ಮಂಜುವಾಣಿ, ಅಂಜುಮ್, ಮೋನಿಕಾ, ಸಿಬ್ಬಂದಿಯಾದ ಸೌಮ್ಯ, ನಾಗಮಣಿ ಹಾಜರಿದ್ದರು.