23.1 C
Sidlaghatta
Tuesday, December 2, 2025

ಜೇನು ಕೃಷಿ ತರಬೇತಿ ಕಾರ್ಯಕ್ರಮ

- Advertisement -
- Advertisement -

Sidlaghatta : ಜೇನು ಕೃಷಿಯನ್ನು ಕೃಷಿ, ರೇಷ್ಮೆ,ತೋಟಗಾರಿಕೆಯೊಂದಿಗೆ ಉಪ ಕಸುಬನ್ನಾಗಿ ಕೈಗೊಂಡು ಹಣಗಳಿಸುವುದಷ್ಟೆ ಅಲ್ಲ ಪರಿಸರ ಸಂರಕ್ಷಣೆಗೂ ಅತ್ಯಂತ ಪೂರಕವಾಗಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳ ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ತೋಟಗಾರಿಕೆ ಇಲಾಖೆಯಿಂದ ಸಂಜೀವಿನಿ ಡೇ ಎನ್‌.ಆರ್‌.ಎಲ್‌.ಎಂ ನ ಸಂಘಗಳ, ಶ್ರೀಮಹರ್ಷಿ ವಾಲ್ಮೀಕಿ ವನಧನ್ ವಿಕಾಸ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳಿಗೆ ನಡೆದ ನಡೆದ ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೇನು ಕೃಷಿಯನ್ನು ಸಂಪೂರ್ಣ ಉದ್ಯೋಗವನ್ನಾಗಿ ಅಥವಾ ಉಪ ಕಸುಬನ್ನಾಗಿಯಾದರೂ ಕೈಗೊಳ್ಳಬಹುದು, ಇದರಿಂದ ಬದುಕಿನ ನಿರ್ವಹಣೆಗೆ ಹಣ ಸಿಗಲಿದೆ. ಸ್ವಂತಕ್ಕೆ ಉಪಯೋಗಿಸಲು ಪರಿಶುದ್ಧ ಜೇನು ತುಪ್ಪ ಸಿಗಲಿದೆ. ಎಲ್ಲದಕ್ಕೂ ಮಿಗಿಲಾಗಿ ಜೇನು ನೊಣಗಳಿಂದ ಪರಾಗಸ್ಪರ್ಷ ಕ್ರಿಯೆ ನಡೆದು ಪರಿಸರ ಸಂರಕ್ಷಣೆ ಕಾರ್ಯ ಉತ್ತಮವಾಗಿ ನಡೆಯಲಿದೆ ಎಂದರು.

ಈ ಪ್ರಕೃತಿಯಲ್ಲಿ ಜೇನು ನೊಣಗಳ ಪ್ರಾಮುಖ್ಯತೆ ಎಷ್ಟು ಇದೆ ಎಂದರೆ ಜೇನು ನೊಣಗಳ ಸಂತತಿ ಇಲ್ಲವಾದರೆ ಈ ಭೂಮಿ ಮೇಲೆ ಮನುಷ್ಯ ಕುಲವೇ ಇಲ್ಲದಂತೆ ನಾಶವಾಗುತ್ತದೆ. ಅದು ಅಕ್ಷರಶಃ ಸತ್ಯ ಸಹ ಹೌದೆಂದು ವಿವರಿಸಿದರು.

ಜೇನು ಕೃಷಿ ಮಾಡಲು ಮುಂದಾಗುವ ಆಸಕ್ತರಿಗೆ ಸರ್ಕಾರವು ರಿಯಾಯಿತಿ ಧರದಲ್ಲಿ ಜೇನು ಪೆಟ್ಟಿಗೆ ಮತ್ತು ಸಲಕರಣೆಗಳನ್ನು ನೀಡಲಿದೆ. ಜತೆಗೆ ತರಬೇತಿಯನ್ನು ಸಹ ನೀಡಲಿದೆ. ಆಸಕ್ತರು ಮತ್ತು ಅಗತ್ಯ ಇರುವವರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ನೆಲಮಂಗಲ ತಾಲ್ಲೂಕು ಮಧುರೆಯ ತಪೋವನ ಮಧು ಕೇಂದ್ರದ ಸಂಪನ್ಮೂಲ ವ್ಯಕ್ತಿ ನಿತಿನ್ ಅವರು ಜೇನು ಪೆಟ್ಟಿಗೆಯ ಬಳಕೆ, ರಾಣಿ ಜೇನು ಹುಳುವಿನ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.

ಪರಿಶುದ್ಧ ಜೇನು ತಪ್ಪು ಹಾಗೂ ಅದರ ಪದಾರ್ಥಗಳ ವಸ್ತು ಪ್ರದರ್ಶನ ನಡೆಯಿತು. ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜು, ಎನ್‌.ಆರ್‌.ಎಲ್‌.ಎಂ ನ ಜಿಲ್ಲಾ ವ್ಯವಸ್ಥಾಪಕ ಮುನಿರಾಜು, ಬಾಲರಾಜು, ವಿಜಯ್‌ಕುಮಾರ್, ನರಸಿಂಹ, ವೈ.ಪಿ.ಆನಂದ್, ಪೂಜಾ, ಅಮರಾವತಿ, ಭಾಗ್ಯ, ನಳಿನ ಹಾಜರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

Namma Sidlaghatta Telegram channel

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!