26.1 C
Sidlaghatta
Sunday, December 4, 2022

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಆಚರಣೆ

- Advertisement -
- Advertisement -

ಬಿಜೆಪಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ, ಕೋಟೆ ಶ್ರೀರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಸಿಹಿ ಹಾಗೂ ಲಘು ಉಪಹಾರ ವಿತರಿಸಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಮಾತನಾಡಿದರು.

ಇಡೀ ಪ್ರಪಂಚ ಭಾರತದ ಕಡೆ ಮೆಚ್ಚುಗೆಯಿಂದ ನೋಡುವಂತೆ ಮಾಡಿದವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿಯೂ, ಆರ್ಥಿಕ ಹಿಂಜರಿತವಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ನರೇಂದ್ರ ಮೋದಿಯವರನ್ನು ರಾಯಭಾರಿಯನ್ನಾಗಿ ಮಾಡಿರುವುದು ದೇಶಕ್ಕೆ ಹೆಮ್ಮೆ ಎಂದು ಅವರು ತಿಳಿಸಿದರು.

 ಕೋವಿಡ್ ನಿಂದ ಇಡೀ ಪ್ರಪಂಚವೇ ತೊಂದರೆಗೊಳಗಾದರೂ ನಮ್ಮ ದೇಶ, ಅದರಲ್ಲಿಯೂ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ವಿವಿಧ ರಂಗಗಳಲ್ಲಿ ಆಗಬಹುದಾಗಿದ್ದ ತೊಂದರೆಗಳನ್ನು ತಡೆಗಟ್ಟಲು ನಮ್ಮ ಪ್ರಧಾನಿಯವರು ಸಾಕಷ್ಟು ಶ್ರಮಿಸಿದ್ದಾರೆ. ರೈತರ ಮಣ್ಣಿನಿಂದ ಮಾರುಕಟ್ಟೆಯವರೆಗೂ ನೆರವಾಗಲು ಅವರು ಕೃಷಿ ಸಿಂಚನ ಮುಂತಾದ ಯೋಜನೆಗಳ ಮೂಲಕ ಪರಿಶ್ರಮಿಸುತ್ತಿದ್ದಾರೆ. ಕೃಷಿ ಕ್ಷೇತ್ರದತ್ತ ಜನರ ಒಲವು ಹೆಚ್ಚಾಗಿದೆ. ಕೃಷಿ ಕ್ಷೇತ್ರ ಶೇ  9 ರಷ್ಟು ಬೆಳವಣಿಗೆಯಾದರೆ, ಕೃಷಿ ಉತ್ಪನ್ನಗಳ ಬೆಳವಣಿಗೆಯಲ್ಲಿ ಶೇ  27 ರಷ್ಟು ಬೆಳವಣಿಗೆಯಾಗಿದೆ ಎಂದರು.

 ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಜಂಗಮಕೋಟೆ, ಎಚ್ ಕ್ರಾಸ್ ಹಾಗೂ ಚೀಮಂಗಲ ಕೇಂದ್ರಗಳಲ್ಲಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯರು ಹಾಗೂ ಹಿರಿಯರನ್ನು ಗುರುತಿಸಿ ಹಣ್ಣು-ಹಂಪಲು ಮತ್ತು ಸಿಹಿಯನ್ನು ಹಂಚಲಾಯಿತು. ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

 ಭಾರತೀಯ ಜನತಾ ಪಾರ್ಟಿ ಶಿಡ್ಲಘಟ್ಟ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಗ್ರಾಮಂತರ ಅಧ್ಯಕ್ಷ ಸುರೇಂದ್ರ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ನಂದೀಶ್, ಮಾಜಿ ಶಾಸಕ ಎಂ.ರಾಜಣ್ಣ, ನಗರಸಭಾ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷೆ ಸುಜಾತಮ್ಮ, ದಾಮೋದರ್, ಅರಿಕೆರೆ ಮುನಿರಾಜು, ರಾಮಚಂದ್ರಪ್ಪ, ರಜನಿಕಾಂತ್ ಬಾಬು, ನಟರಾಜ್, ರವಿ ಚಾರಿ, ಅಂಬರೀಶ್, ಮಾದೇನಹಳ್ಳಿ ಮಂಜುನಾಥ್, ಎಚ್ ಕ್ರಾಸ್ ಸುಬ್ರಮಣಿ, ಗೋವಿಂದ, ಶ್ರೀನಿವಾಸ್, ಸಾದಲಿ ನವೀನ್, ಭೈರಾರೆಡ್ಡಿ, ನರೇಂದ್ರ ಮಂಜುನಾಥ್, ಸುಶೀಲಮ್ಮ, ಆದಿನಾರಾಯಣಪ್ಪ, ಶ್ರೀರಾಮ್ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!