25.1 C
Sidlaghatta
Friday, June 2, 2023

ಜೆಡಿಎಸ್ ಸೇರಿದ ಬಿಜೆಪಿ ನಗರ ಮಂಡಲಾದ್ಯಕ್ಷ

- Advertisement -
- Advertisement -

Sidlaghatta : ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ನಮ್ಮನ್ನು ನಂಬಿದ ಹತ್ತು ಜನ ಕಾರ್ಯಕರ್ತರಿಗೆ ಯಾವುದೇ ಕೆಲಸ ಮಾಡಿಕೊಡಲಾಗಲಿಲ್ಲ ಎಂಬ ನೋವಿನಿಂದ ಬಿಜೆಪಿ ಪಕ್ಷ ತೊರೆದು ಇಂದು ಬಿ.ಎನ್.ರವಿಕುಮಾರ್ ನೇತೃತ್ವದ ಜೆಡಿಎಸ್ ಸೇರ್ಪಡೆಯಾಗಿದ್ದೇನೆ ಎಂದು ನಗರಸಭೆ ಸದಸ್ಯ ಎಸ್.ರಾಘವೇಂದ್ರ ಹೇಳಿದರು.

ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಕುರಿತು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕಳೆದ 20 ವರ್ಷಗಳ ಕಾಲ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿ, ಎರಡು ಭಾರಿ ಪಕ್ಷದಿಂದ ಸ್ಪರ್ಧಿಸಿ ನಗರಸಭೆ ಸದಸ್ಯನಾಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಕೇಂದ್ರ ಹಾಗು ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಆಡಳಿತ ನಡೆಸುವ ಸಮಯದಲ್ಲಿಯೂ ಕ್ಷೇತ್ರದ ಯಾವೊಬ್ಬ ಬಿಜೆಪಿ ಕಾರ್ಯಕರ್ತ ಸೇರಿದಂತೆ ಜನತೆಗೆ ಒಂದು ಕೆಲಸ ಮಾಡಲಾಗದ ನೋವು ಕಾಡುತ್ತಿದೆ. ಕ್ಷೇತ್ರದಲ್ಲಿ ಸ್ಥಳೀಯರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್ ನೀಡಬೇಕು ಎಂದು ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೆವಾದರೂ ಇದೀಗ ಅಂತಿಮವಾಗಿ ಎಲ್ಲಿಂದಲೋ ಬಂದ ಹೊರಗಿನ ಹಣವಂತ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಲು ಪಕ್ಷ ಸಿದ್ದವಾಗಿದೆ.

ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಈವರೆಗೂ ಹೊರಗಿನವರಿಗೆ ಮಣೆ ಹಾಕಿರುವ ಉದಾಹರಣೆಗಳಿಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ಪಕ್ಷ ಬಲ ಪಡಿಸಬಹುದು. ಕ್ಷೇತ್ರದ ಪರಿಚಯವೇ ಇಲ್ಲದ, ಕ್ಷೇತ್ರದಲ್ಲಿ ತಮ್ಮ ಸ್ವಂತ ಮತ ಸಹ ಇಲ್ಲದವರಿಗೆ ಕೇವಲ ಹಣ ಬಲದ ಆಧಾರದಲ್ಲಿ ಟಿಕೆಟ್ ನೀಡಿದರೆ ಚುನಾವಣೆ ಮುಗಿದ ತಕ್ಷಣ ಅವರು ಕ್ಷೇತ್ರ ಬಿಟ್ಟು ಹೋಗ್ತಾರೆ. ಹಾಗಾಗಿ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿ.ಎನ್.ರವಿಕುಮಾರ್ ನೇತೃತ್ವದ ಜೆಡಿಎಸ್ ಪಕ್ಷಕ್ಕೆ ಯಾವುದೇ ಶರತ್ತುಗಳಿಲ್ಲದೇ ಸೇರ್ಪಡೆಯಾಗಿದ್ದೇನೆ ಎಂದರು.

ಈ ಸಂದರ್ಬದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್ ಜೆಡಿಎಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಸದಸ್ಯ ವೆಂಕಟಸ್ವಾಮಿ, ಮುಖಂಡರಾದ ಎಸ್.ಎಂ.ರಮೇಶ್, ಲಕ್ಷ್ಮಿನಾರಾಯಣ(ಲಚ್ಚಿ), ನವೀನ್, ಶ್ರೀನಾಥ್, ಮತ್ತಿತರರು ಹಾಜರಿದ್ದರು.


Sidlaghatta BJP Taluk Mandal President Joins JDS Party Citing Local Representation Issues

Sidlaghatta : S. Raghavendra, a member of the city council, has announced his departure from the BJP party and his decision to join the JDS party led by BN Ravikumar. He cited the inability to fulfill promises made to workers who believed in the party, despite the BJP being in power at both the state and central levels. Raghavendra, who has served as an active member of the BJP for 20 years, expressed his disappointment with the party’s decision to field an outsider candidate with no ties to the constituency.

At a press conference held in the town on Monday, Raghavendra who BJP to join the JDS in presence of JDS leader BN Ravikumar, former Prime Minister HD Deve Gowda and former Chief Minister HD Kumaraswamy, highlighted the importance of local representation and stated that the party would benefit from nominating candidates with ties to the constituency.

JDS taluk president DB Venkatesh welcomed Raghavendra to the party by presenting him with the JDS party flag. The announcement was attended by various members of the city council, including Chairperson Sumitra Ramesh and Member Venkataswamy, as well as party leaders SM Ramesh, Laxminarayan (Lacchi), Naveen, and Srinath.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!