BJP ನೂತನ ಜಿಲ್ಲಾ ಅಧ್ಯಕ್ಷರ ಮೆರವಣಿಗೆ ಮತ್ತು ಅಭಿನಂದನಾ ಕಾರ್ಯಕ್ರಮ

0
5
Chikkaballapur District BJP President Felicitation

Sidlaghatta : ಇನ್ನು ಮುಂದೆ ಪಕ್ಷದ ಒಳಕ್ಕೆ ಬರಲು ಅಡ್ಡಿಯಾಗಿ ಯಾವುದೇ ಕೋಟೆ ಕಂದಕಗಳಿರುವುದಿಲ್ಲ. ಸ್ವಾರ್ಥವಿಲ್ಲದೆ, ತನು ಮನ ಧನ ಅರ್ಪಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಬರುವವರು ಅನೇಕರಿದ್ದಾರೆ. ಸಕ್ರಿಯರಾಗಿಲ್ಲದ ಹಲವು ಹಿರಿಯ ಕಾರ್ಯಕರ್ತರು ಮತ್ತು ಪಕ್ಷ ಪ್ರೀತಿ ಇರುವ ಎಲ್ಲ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಕರೆ ತರುವ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ಬಿಜೆಪಿಯ ಜಿಲ್ಲಾಧ್ಯಕ್ಷರಾದ ನಂತರ ಬಿಜೆಪಿ ಕಾರ್ಯಕರ್ತರು ಶಿಡ್ಲಘಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಗರದಲ್ಲಿ ಮೆರವಣಿಗೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷವನ್ನು ಈ ನಾಡಿನ, ಈ ಜಿಲ್ಲೆಯ ಅನೇಕರು ಕಟ್ಟಿ ಬೆಳೆಸಿದ್ದಾರೆ. ಇಂದು ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚು ಸದಸ್ಯತ್ವವುಳ್ಳ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷ ಸಂಘಟನೆಯ ಹಿಂದೆ ಅನೇಕರ ತನು ಮನ ಧನದ ಅರ್ಪಣೆ ಅಡಗಿದೆ. ಪಕ್ಷದ ಆಂತರಿಕ ಗೊಂದಲಗಳ ನಿವಾರಣೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಆಶಯ ನಮ್ಮದು ಎಂದರು.

ಪಕ್ಷಕ್ಕೆ ನೆಲೆ ಇಲ್ಲದ ಶಿಡ್ಲಘಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸಕ್ಕೆ ಬಂದಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಕೆಲಸವನ್ನ ಮಾಡಿದ್ದೇನೆ, ಹೆಚ್ಚಿನ ಸದಸ್ಯತ್ವವನ್ನು ಮಾಡಿದ್ದೇನೆ. ಇದೆಲ್ಲವನ್ನೂ ಗಮನಿಸಿದ ರಾಷ್ಟ್ರ, ರಾಜ್ಯ, ಜಿಲ್ಲಾ ನಾಯಕರು ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಇದು ಪದವಿ ಎಂದು ಭಾವಿಸದೆ ಪಕ್ಷವನ್ನು ಕಟ್ಟುವ ಕೆಲಸ ಎಂದು ಭಾವಿಸಿ ಜಿಲ್ಲೆಯಲ್ಲಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಬಣಗಳು ಇಲ್ಲದ ವಾತಾವರಣ ನಿರ್ಮಿಸಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ, ನಿಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಜಿಲ್ಲಾಧ್ಯಕ್ಷ ಸ್ಥಾನ ದೊರೆತಿದ್ದು ನಿಮ್ಮೆಲ್ಲರಿಂದ ಈ ಶ್ರೇಯಸ್ಸು ನಿಮಗೆ ಸಲ್ಲಬೇಕು ಎಂದರು.

ಶಿಡ್ಲಘಟ್ಟದ ಇತಿಹಾಸದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷಸ್ಥಾನ ಇದೆ ಮೊದಲ ಬಾರಿಗೆ ದೊರೆತಿದೆ. ಇಷ್ಟಕ್ಕೆ ತೃಪ್ತಿ ಪಡದೆ ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟದಲ್ಲಿ ಬಿಜೆಪಿ ಬಾವುಟ ಹಾರಾಡುವಂತೆ ಮಾಡಬೇಕೆಂದು ಹೇಳಿದರು.

ಶಿಡ್ಲಘಟ್ಟದ ಗಡಿಭಾಗ ಹಂಡಿಗನಾಳದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸೀಕಲ್ ರಾಮಚಂದ್ರಗೌಡ ಅವರನ್ನು ಭಾರಿ ಗಾತ್ರದ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದೊಂದಿಗೆ ಸ್ವಾಗತಿಸಿದರು. ನಂತರ ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತದ ಮೂಲಕ ಬಿಜೆಪಿ ಸೇವಾಸೌಧ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಕೋಟೆ ಆಂಜನೇಯಸ್ವಾಮಿ, ವಾಸವಿ ರಸ್ತೆಯ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಅಭಿನಂದಿಸಿದರು.

ಬಿಜೆಪಿ ಮಾಜಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ನಗರ ಘಟಕದ ಅಧ್ಯಕ್ಷ ನರೇಶ್, ಅನೆಮಡಗು ಮುರಳಿ, ಅರಿಕೆರೆ ಮುನಿರಾಜು, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಆಂಜನೇಯಗೌಡ, ಸೋಮಶೇಖರ್, ಕನ್ನಪನಹಳ್ಳಿ ಲಕ್ಷ್ಮೀನಾರಾಯಣ್, ಡಾ.ಸತ್ಯನಾರಾಯಣರಾವ್, ನರ್ಮದಾರೆಡ್ಡಿ, ಚಾತುರ್ಯ ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!