Chowdasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ಪೂಜೆ, ಹೋಮ, ಹವನ, ಕಾರ್ತಿಕ ದೀಪೋತ್ಸವ, ಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಸೇವೆ ನಡೆಯಿತು ಹಾಗು ತೀರ್ಥ, ಪ್ರಸಾದಗಳನ್ನು ವಿನಿಯೋಗಿಸಲಾಯಿತು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಶ್ರೀ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಅಮಾವಾಸ್ಯೆ ಹಾಗು ಕಾರ್ತಿಕ ಮಾಸದ ಪ್ರಯುಕ್ತ ಮಂಗಳವಾರ ಬೆಳಿಗ್ಗೆಯಿಂದ ಪೂಜೆ, ಹೋಮ, ಹವನ, ತೀರ್ಥ,ಪ್ರಸಾದಗಳು, ಮಧ್ಯಾಹ್ನ ಭಜನೆ ಹಾಗು ರಾತ್ರಿ ಕಾರ್ತಿಕ ದೀಪೋತ್ಸವವು ಭಕ್ತಾದಿಗಳಿಂದ ಏರ್ಪಡಿಸಲಾಗಿತ್ತು.