Chowdasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ಐದು ವರ್ಷಗಳ ಅವಧಿಗೆ ಭಾನುವಾರ ಚುನಾವಣೆ ನಡೆಯಿತು.
ಒಟ್ಟು 13 ಸಂಖ್ಯಾ ಬಲದ ಡೇರಿಯಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿತರು, 5 ಮಂದಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ ಡೇರಿ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಬೆಂಬಲಿಗರು ಪಡೆದಂತಾಗಿದೆ.
ಸಾಮಾನ್ಯ ಸ್ಥಾನದಿಂದ ಸಿ.ಆರ್.ನಾಗೇಶ್, ಸಿ.ಆರ್.ರಾಜಣ್ಣ, ಸಿ.ಕೆ.ಶಿವಾನಂದ, ಸಿ.ಎ.ನಾಗೇಂದ್ರ, ಸಿ.ಎಚ್.ಜಯರಾಮ, ಸಿ.ಎಂ.ಲಕ್ಷ್ಮಣಗೌಡ, ಸತೀಶ್, ಪ.ಜಾತಿ ಮೀಸಲುಕ್ಷೇತ್ರದಿಂದ ಕೆ.ನಾರಾಯಣಸ್ವಾಮಿ, ಪ.ಪಂಗಡ ಮೀಸಲು ಕ್ಷೇತ್ರದಿಂದ ಸಿ.ಎನ್.ಮುನಿಕೃಷ್ಣಪ್ಪ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸಿ.ಕೆ.ಮಂಜುನಾಥ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಕೆ.ಎಚ್.ಮಂಜುನಾಥ್, ಮಹಿಳಾ ಮೀಸಲು ಕ್ಷೇತ್ರದಿಂದ ಅಶ್ವತ್ಥಮ್ಮ, ಅನುಸೂಯಮ್ಮ ಚುನಾಯಿತರಾಗಿದ್ದಾರೆ. ರಾಮಕೃಷ್ಣಪ್ಪ ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದರು.