ಶಿಡ್ಲಘಟ್ಟ ತಾಲ್ಲೂಕಿನ H.ಕ್ರಾಸ್(ಕುಂಭಿಗಾನಹಳ್ಳಿ) ಗ್ರಾಮ ಪಂಚಾಯಿತಿಯ ಕಾಳನಾಯಕನಹಳ್ಳಿ ಹಾಗೂ ಮಳ್ಳೂರು-2 ಗ್ರಾಮದ ಗ್ರಾಮ ಪಂಚಾಯಿತಿ ಕ್ಷೇತ್ರದ ತಲಾ ಒಂದೊಂದು ಸ್ಥಾನಕ್ಕೆ ಸೋಮವಾರ ನಡೆದ ಉಪ ಚುನಾವಣೆಯ ಎಣಿಕೆ ಕಾರ್ಯ ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆಯಿತು. ಕಾಳನಾಯಕನಹಳ್ಳಿಯ ರಾಮದಾಸ್ ಹಾಗೂ ಮಳ್ಳೂರಿನ ಚಂದ್ರಕಲಾ ಜಯಶೀಲರಾಗಿದ್ದಾರೆ.
ತಾಲ್ಲೂಕಿನ ಕಾಳನಾಯಕನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್.ರಾಜಣ್ಣ ಅವರು ಕೋವಿಡ್‌ಗೆ ತುತ್ತಾಗಿ ಮೃತಪಟ್ಟಿದ್ದರೆ, ಮಳ್ಳೂರು-2 ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ವಿಜೇತರಾಗಿದ್ದ ರೂಪ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎರಡೂ ಸ್ಥಾನಗಳಿಗೂ ಸೋಮವಾರ ಚುನಾವಣೆ ನಡೆದಿತ್ತು.
ಕಾಳನಾಯಕನಹಳ್ಳಿಯ 499 ಮತದಾರರ ಪೈಕಿ 446 ಮಂದಿ ಮತ ಚಲಾಯಿಸಿದ್ದು ಆನಂದ್ 206 ಮತಗಳನ್ನು ಪಡೆದರೆ ರಾಮದಾಸ್ 215 ಮತಗಳನ್ನು ಪಡೆದು 9 ಮತಗಳ ಅಂತರದಿಂದ ವಿಜೇತರಾಗಿದ್ದಾರೆ.
ತಾಲೂಕಿನ ಮಳ್ಳೂರು ಗ್ರಾಮದ 1273 ಮಂದಿ ಮತದಾರರ ಪೈಕಿ 975 ಮತದಾರರು ಮತ ಚಲಾಯಿಸಿದ್ದು ಮುನಿಲಕ್ಷ್ಮಮ್ಮ 480 ಮತಗಳನ್ನು ಪಡೆದರೆ ಚಂದ್ರಕಲಾ 492 ಮತಗಳನ್ನು ಪಡೆಯುವ ಮೂಲಕ 12 ಮತಗಳ ಅಂತರದಿಂದ ವಿಜೇತರಾಗಿದ್ದಾರೆ.
ಕಾಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕ್ಷೇತ್ರದ ಚುನಾವಣಾಕಾರಿಯಾಗಿ ಎಚ್.ಸಿ.ಮುನಿರಾಜು ಹಾಗೂ ಮಳ್ಳೂರು-2 ಕ್ಷೇತ್ರದ ಚುನಾವಣಾಕಾರಿಯಾಗಿ ಡಿ.ಲಕ್ಷ್ಮಯ್ಯ ಕಾರ್ಯನಿರ್ವಹಿಸಿದ್ದರು. ವಿಜೇತ ಅಭ್ಯರ್ಥಿಗಳಿಗೆ ತಹಶೀಲ್ದಾರ್ ಬಿ.ಎಸ್.ರಾಜೀವ್ ಪ್ರಮಾಣ ಪತ್ರ ವಿತರಿಸಿದರು.