23.1 C
Sidlaghatta
Friday, March 29, 2024

ವಿಕಲಚೇತನರಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಾಧನೆ ಸಲಕರಣೆ ವಿತರಣೆ

- Advertisement -
- Advertisement -

Sidlaghatta : ವಿಶೇಷಚೇತನರಿಗೆ ಸಂಬಂಧಿಸಿದಂತೆ ಕುಂದುಕೊರತೆ ಸಭೆಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು. ವಿಕಲಚೇತರಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಇಲಾಖೆಗೆ ನೇರವಾಗಿ ಭೇಟಿ ಮಾಡಿ ಪರಿಹರಿಸಿಕೊಳ್ಳಿ ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.

 ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಎಸ್.ಸಿ.ಐ.ನವಜೀವನ ಸೇವಾ ಸಂಘ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಹಯೋಗದಲ್ಲಿ ವಿಕಲಚೇತನರಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಾಧನೆ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ವಿಶೇಷಚೇತನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿವೆ. ವಿಶೇಷಚೇತನರು ಯಾವುದೇ ಕಾರಣಕ್ಕೂ ಕೀಳರಿಮೆಯನ್ನು ಹೊಂದಬಾರದು. ವಿಶೇಷಚೇತನರು ಸಾಧನೆ ಮಾಡಲು ಸಾಕಷ್ಟಿದೆ. ವಿಕಲಚೇತನರಿಗೆ ಸಮಾಜದ ಅನುಕಂಪ, ಸಹಾನುಭೂತಿಗಿಂತ ಮುಖ್ಯವಾಗಿ ಅವಕಾಶಗಳುಬೇಕು. ಇವರನ್ನು ಸಮಾನದೃಷ್ಟಿಯಿಂದ ಗೌರವಿಸುವ ಮನೋಭಾವವನ್ನು ಸಮಾಜ ಬೆಳೆಸಿಕೊಳ್ಳಬೇಕು ಎಂದರು.

 ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ಮಾತನಾಡಿ, ತಾಲ್ಲೂಕು ಪಂಚಾಯಿತಿಯಿಂದ ವಿಕಲಚೇತನರಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ಕಲ್ಪಿಸಲು ಮಾಡುವ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು ಎಂದರು.

 ಎಸ್.ಸಿ.ಐ.ನವಜೀವನ ಸೇವಾ ಸಂಘದ ಅಧ್ಯಕ್ಷ ಎನ್.ಮುನಿರಾಜು ಮಾತನಾಡಿ, ವಿಶೇಷಚೇತನರಿಗೆ ವ್ಯಾಯಾಮ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ತಾಲ್ಲೂಕಿನ ಹೃದಯಭಾಗದಲ್ಲಿ ಭವನವೊಂದನ್ನು ನಿರ್ಮಿಸಿಕೊಡಬೇಕು, ಕನಿಷ್ಠ ಮೂರು ತಿಂಗಳಿಗೊಮ್ಮೆ ವಿಶೇಷಚೇತನರ ಕುಂದುಕೊರತೆ ಸಭೆ ನಡೆಸಬೇಕು, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಮಿಸುವ ರ್ಯಾಂಪ್ ಮತ್ತು ಶೌಚಾಲಯ ವಿಶೇಷಚೇತನರಿಗೆ ಅನುಕೂಲವಾಗುವ ಹಾಗೆ ವೈಜ್ಞಾನಿಕವಾಗಿರಲಿ ಎಂದು ಹೇಳಿದರು.

 ವಿಕಲಚೇತನ ಮಕ್ಕಳಿಗೆ 25 ಸ್ಪೆಷಲ್ ವೀಲ್ ಚೇರ್, 15 ಮಂದಿ ವಿಕಲಚೇತನರಿಗೆ ವೀಲ್ ಚೇರ್, ಹಿರಿಯ ನಾಗರಿಕರಿಗೆ 12 ಸ್ಟಿಕ್, ಕ್ಲಚ್ಚರ್ ಗಳನ್ನು ನೀಡಲಾಯಿತು.

 ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಸಿ.ಡಿ.ಪಿ.ಒ ನವತಾಜ್, ಎಸ್.ಸಿ.ಐ.ನವಜೀವನ ಸೇವಾ ಸಂಘದ ಅಧ್ಯಕ್ಷ ಎನ್.ಮುನಿರಾಜು, ಕಾರ್ಯದರ್ಶಿ ಕೆ.ಪಿ.ರವಿ, ಶಿಕ್ಷಣ ಇಲಾಖೆಯ ರಾಧ, ಜಗದೀಶ್, ಸುಬ್ರಮಣಿ ಹಾಜರಿದ್ದರು.


People with disabilities received performance equipment

Sidlaghatta : In a recent event held at Streeshakti Bhavan in the town, Tehsildar B.N. Swami announced the organization of grievance meetings regarding special needs in the coming days. The announcement was made in the presence of several dignitaries, including the Municipal Commissioner R. Srikanth, CDPO Navtaj, and President of SCI Navjeevan Seva Sangh N. Muniraju.

During the event, Swami highlighted the various schemes launched by the Central and State Governments for the welfare and development of differently-abled individuals. He emphasized that they should not feel inferior for any reason and deserve equal respect and opportunities to achieve their goals.

Taluk Panchayat EO Muniraju announced that the grant earmarked for the disabled by the Taluk Panchayat will be utilized to create a disabled-friendly environment in government departments. Additionally, President of SCI Navjeevan Seva Sangh N. Muniraju proposed the establishment of an exercise training center for differently-abled individuals, construction of a building in the heart of the taluk, and holding of grievance meetings for them at least once in three months. He also stressed the need for scientific ramps and toilets in the taluk and village panchayats to facilitate the differently-abled.

The event also saw the distribution of performance equipment to differently-abled and differently-abled children, including 25 special wheelchairs, 15 wheelchairs for disabled children, 12 sticks, and clutches for senior citizens.

Overall, the event aimed to create awareness and promote equal opportunities for differently-abled individuals, stressing the importance of their inclusion in society.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!