25.1 C
Sidlaghatta
Friday, June 2, 2023

ಏ. 17 ರಂದು ನಾಮಪತ್ರ ಸಲ್ಲಿಕೆ : ಬಿ.ಎನ್.ರವಿಕುಮಾರ್

Ravikumar emphasizes solving basic issues before elections and seeks the blessings of voters and party workers

- Advertisement -
- Advertisement -

Melur, Sidlaghatta : ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನ ಮೇಲೆ ನಂಬಿಕೆಯಿಟ್ಟು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಂತೆ ಬಿ ಫಾರಂ ನೀಡಿದ್ದಾರೆ. ಕಾರ್ಯಕರ್ತರ ಒಮ್ಮತದ ಅಭಿಪ್ರಾಯದ ಮೇರೆಗೆ ಸೋಮವಾರ ಏಪ್ರಿಲ್ 17 ರಂದು ಮಧ್ಯಹ್ನ 1.30 ಕ್ಕೆ ನಾಮಪತ್ರವನ್ನು ಸಲ್ಲಿಸುವುದಾಗಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಅವರ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಸ್ ನಿಲ್ದಾಣದ ಬಳಿಯ ಅಂಜನಿ ಕಾಂಪ್ಲೆಕ್ಸ್ ಹತ್ತಿರದ ಪೆಟ್ರೋಲ್ ಬಂಕ್ ಬಳಿ ಬೆಳಗ್ಗೆ 11 ಗಂಟೆಗೆ ಸೇರಿ, ಕ್ಷೇತ್ರದ ಸ್ವಾಭಿಮಾನಿ ಮತದಾರರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಆಶೀರ್ವಾದ ಪಡೆದು ಸೋಮವಾರ ನಾಮಪತ್ರ ಸಲ್ಲಿಸುವೆ ಎಂದರು.

ಶಿಡ್ಲಘಟ್ಟ ಕ್ಷೇತ್ರದ ಜನರು ಸ್ವಾಭಿಮಾನಿಗಳು. ಅವರು ಯಾರ ಮನೆ ಬಳಿಯೂ ಹೋಗಿ ಸಹಾಯವನ್ನು ಯಾಚಿಸಿಲ್ಲ. ಸಮಾಜ ಸೇವೆಯ ನೆಪದಲ್ಲಿ ಎಲ್ಲೋ ಹೊರಗಿನಿಂದ ಬಂದವರಿಗೆ ಮತದಾರರು ಮಣೆ ಹಾಕುವುದಿಲ್ಲ. ಇದುವರೆಗೂ ಏಳು ಮಂದಿ ಶಾಸಕರಾಗಿದ್ದಾರೆ. ಮತದಾರರೇ ಹಣದ ಭಿಕ್ಷೆ ಮತ್ತು ಮತ ನೀಡಿ ಗೆಲ್ಲಿಸಿದ ದಾಖಲೆ ಹೊಂದಿದ ಕ್ಷೇತ್ರವಿದು. ಸ್ವಾಭಿಮಾನಿ ಮತದಾರರಿಗೆ ಹಣದ ನೀಡಿ ಎಂ.ಎಲ್.ಎ ಆಗುವುದು ಇಲ್ಲಿ ತಿರುಕನ ಕನಸು ಎಂದು ಹೇಳಿದರು.

ನಮ್ಮ ಶಿಡ್ಲಘಟ್ಟ ಕ್ಷೇತ್ರದಲ್ಲಿ ಏಳೆಂಟು ಸಾವಿರ ಬಡ ಮಕ್ಕಳು ವಿದ್ಯಾಭ್ಯಾಸಕ್ಕೆ ಬೇರೆಡೆ ಹೋಗಬೇಕಾದ ಸಮಸ್ಯೆಯಿದೆ. 15-20 ಸಾವಿರ ಜನ ಕೆಲಸಕ್ಕಾಗಿ ಪ್ರತಿದಿನ ಹೊರ ಊರುಗಳಿಗೆ ಹೋಗುತ್ತಾರೆ. ಕುಡಿಯುವ ನೀರು, ರಸ್ತೆ, ಬಸ್ ವ್ಯವಸ್ಥೆ ಮೊದಲಾದ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿರುವುದನ್ನು ಮೊದಲು ಪರಿಹರಿಸಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆಯ ಸರಿಸಮಾಜವನ್ನು ಧಿಕ್ಕರಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅರಿತವರು ಯಾರೂ ಮತ ಹಾಕುವುದಿಲ್ಲ. ನಮ್ಮ ಕ್ಷೇತ್ರದ ಕಾಂಗ್ರೆಸ್ ನಲ್ಲಿ ನೋವುಂಡ ಜನರು ಈ ಬಾರಿ ನಮಗೆ ಸಹಾಯ ಮಾಡುವರೆಂಬ ನಂಬಿಕೆಯಿದೆ ಎಂದು ನುಡಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಮುಖಂಡರಾದ ಡಿ.ಬಿ.ವೆಂಕಟೇಶ್, ಹುಜಗೂರು ರಾಮಣ್ಣ, ಡಾ.ಧನಂಜಯರೆಡ್ಡಿ, ಶಿವಾರೆಡ್ಡಿ, ನಂದನವನಂ ಶ್ರೀರಾಮರೆಡ್ಡಿ, ರಘುನಾಥರೆಡ್ಡಿ, ಲಕ್ಷ್ಮಿನಾರಾಯಣರೆಡ್ಡಿ,ಗಂಜಿಗುಂಟೆ ಮೂರ್ತಿ, ಲಕ್ಷ್ಮಿನಾರಾಯಣ ಲಚ್ಚಿ, ಬಿ.ವಿ.ನಾರಾಯಣಸ್ವಾಮಿ, ಮುಗಲಡಿಪಿ ನಂಜಪ್ಪ ಹಾಜರಿದ್ದರು.


JDS Leader Ravikumar to Submit Nomination Papers from Sidlaghatta Assembly Constituency

Melur, Sidlaghatta : JDS National President HD Deve Gowda and former Chief Minister Kumaraswamy have given their trust to me and provided Form B to submit nomination papers as a JDS party candidate from the Sidlaghatta Assembly Constituency. JDS leader Meluru BN Ravikumar stated that he will submit the nomination papers on Monday, April 17 at 1.30 pm based on the consensus opinion of the workers.

During a press conference at his home in Melur village of Shidlaghatta taluk, Ravikumar declared that he will gather at the petrol station near Anjani Complex, close to the bus stand, at 11 am to seek the blessings of the self-respecting voters of the constituency and JDS party workers before submitting the nomination papers on Monday.

Ravikumar stated that the voters of Shidlaghatta constituency are self-respecting and will not accept someone who comes from outside on the pretext of social service. He also noted that this constituency has a history of candidates winning by begging money and votes, and Thiruka’s dream of becoming an MLA by giving money to self-respecting voters will not be accepted.

Ravikumar further added that the constituency faces various problems such as poor access to education and basic facilities like drinking water, roads, and public transportation. He emphasized the need to solve these issues first and mentioned that Congress, who has rejected Dr. BR Ambedkar’s concept of an egalitarian society, will not receive the votes of people who follow Ambedkar’s ideology.

Present at the press conference were former district panchayat member Bunk Muniappa, and JDS leaders DB Venkatesh, Hujaguru Ramanna, Dr. Dhananjayareddy, Shivareddy, Nandanavanam Sriramareddy, Raghunathreddy, Lakshminarayanareddy, Ganjigunte Murthy, Lakshminarayana Lacchi, B.V. Narayanaswamy, and Mugaladipi Nanjappa.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!