Sidlaghatta : JDS BJPಯ ಬಿಟೀಮ್ ಅಂದ್ರು. ಆದ್ರೆ JDS ಬಿಜೆಪಿ ಬಿ ಟೀಮ್ ಅಲ್ಲ. ಕಾಂಗ್ರೆಸ್ BJPಯ ಬಿ ಟೀಮ್. ಇದನ್ನ ಮುಸ್ಲಿಂ ಬಾಂದವರು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಆದ್ರೆ ಅದನ್ನ ಒಡೆಯುವ ಕೆಲಸ ಮಾಡಲಾಗುತ್ತಿದೆ. ನಿಮ್ಮ ಜೀವನದ ಉತ್ತಮ ಭವಿಷ್ಯ ಬೆಳಗಬೇಕು. ರೈತ, ಮುಸ್ಲಿಂ, ಹಿಂದೂಗಳ ಕುಟುಂಬದ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಉತ್ತಮ ಆಗಬೇಕು. ಅದನ್ನ ಜೆಡಿಎಸ್‌ಗೆ ಮತ ನೀಡುವ ಮೂಲಕ ಕಾರ್ಯಗತಗೊಳಿಸಲು ಸಹಕಾರ ನೀಡಿ ಎಂದರು.
ಎಲ್ಲಾ ಸಮಸ್ಯೆ ಬಗೆಹರಿಸಬೇಕು ಅನ್ನೋದೆ ನಮ್ಮ ಪಕ್ಷದ ಉದ್ದೇಶ. 2018ರಲ್ಲಿ ಸಾಲ ಮನ್ನ ಮಾಡುವ ಕೆಲಸ ಮಾಡಿದೆ. ಅಧಿಕಾರದಲ್ಲಿದ್ದ ಕೇವಲ 14 ತಿಂಗಳಲ್ಲಿ ರೈತರ ಸಾಲ ಮನ್ನ ಮಾಡಿದ್ದೇವೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಮೇಲೂರು ಬಿ.ಎನ್.ರವಿಕುಮಾರ್ ನಮ್ಮ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ. ರವಿಯನ್ನು ನಿಮ್ಮ ಮನೆಯ ಅಣ್ಣ, ತಮ್ಮನಾಗಿ ನೋಡಿ ಅವರಿಗೆ ಮತ ನೀಡಿ ಎಂದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮರೆಯಾಗುತ್ತಿದೆ. ಇಂದು ಶಿಡ್ಲಘಟ್ಟದಲ್ಲಿ ಹಬ್ಬದ ವಾತಾವರಣ ಮೂಡಿದೆ. ಪಂಚರತ್ನ ಯೋಜನೆ ಐದು ವರ್ಷಗಳಲ್ಲಿ ಮಾಡದಿದ್ರೆ ನಿಮ್ಮ ಬಳಿ ಬಂದು ಮತ್ತೆ ಮತ ಕೇಳಲ್ಲ. ಸಾಲ ಮನ್ನಾ ಮಾಡಬಾರದು ಅಂತ ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ರು. ಎಲ್ಲಿ ಸಾಲ ಮನ್ನ ಮಾಡಿ ಹೆಸರು ಮಾಡ್ತಾರೆ ಅಂತ ಸಿದ್ದರಾಮಯ್ಯಗೆ ಹೊಟ್ಟೆ ಕಿಚ್ಚು. ರೈತಾಪಿ ವರ್ಗಕ್ಕೆ ದೇವೇಗೌಡರು ನೀಡಿದ ಕೊಡುಗೆ ಅಪಾರ.
ಕೆಂಪೇಗೌಡರ ಪುತ್ಥಳಿ ಏರ್ಪೋರ್ಟ್‌ನಲ್ಲಿ ಅಲ್ಲ, ವಿಧಾನಸೌಧದ ಮುಂಭಾಗದಲ್ಲಿ ಮಾಡುತ್ತೇವೆ. ಕೆಂಪೇಗೌಡ ಯೂನಿವರ್ಸಿಟಿ ಹಾಗೂ ಟಿಪ್ಪು ಯೂನಿವರ್ಸಿಟಿ ಮಾಡುತ್ತೇವೆ. ಈ ಮೂಲಕ ಸರ್ವಜನಾಂಗದ ಶಾಂತಿಯ ತೋಟ ಮಾಡ್ತೀವಿ ಎಂದರು.
ಸಾಬ್ರು, ಗೌಡ್ರು, ದಲಿತರ ಹೆಸರು ಓಟರ್ ಲೀಸ್ಟ್ ನಿಂದ ತೆಗೆದಿದ್ದಾರೆ. 23ಲಕ್ಷ ಮತದಾರರ ಹೆಸರು ಡೆಲಿಟ್ ಮಾಡಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದರು.
ರೈತರ ನೆರವಿಗೆ ಬರುವ ಕುಮಾರಣ್ಣ
ರೈತರ ಸಂಕಷ್ಟ ಕಾಲದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳು ರೈತರ ನೆರವಿಗೆ ಬರಲಿಲ್ಲ.ಬಂದಿದ್ದು ಕುಮಾರಣ್ಣ ಮಾತ್ರ. 50 ಸಾವಿರ ಪರಿಹಾರ ಕೊಡುವ ಮೂಲಕ ಸಾಂತ್ವಾನ ಹೇಳುವ ಕೆಲಸ ಮಾಡಿದ್ರು. 14 ತಿಂಗಳು ಅಧಿಕಾರದಲ್ಲಿ ಇದ್ದಾಗ 23 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ್ರು. ಹೆಚ್ಚಿನ ಪ್ರಗತಿಪರ ರೈತರಿರುವ ಶಿಡ್ಲಘಟ್ಟ ಸಿಲ್ಕ್ ಮತ್ತು ಮಿಲ್ಕ್ ಎರಡಕ್ಕೇ ಫೇಮಸ್. ರಾಜ್ಯದಲ್ಲಿಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಹೋರಾಟ ಮಾಡುತ್ತಿದ್ದಾರೆಯೇ ಹೊರತು ಇವರಿಗೆ ಯಾವುದೇ ಸ್ಪಷ್ಟ ಗುರಿಯಿಲ್ಲ. ಆದ್ರೆ ಕುಮಾರಣ್ಣ ಮಾತ್ರ ನಾನು ಅಧಿಕಾರಕ್ಕೆ ಬಂದ್ರೆ ಈ ಕೆಲಸ ಮಾಡ್ತೀನಿ ಅಂತ ಹೇಳ್ತಿದ್ದಾರೆ. 2023ಕ್ಕೆ ಕುಮಾರಣ್ಣಂಗೆ ಶಕ್ತಿ ತುಂಬಿ ಸಿಎಂ ಆಗಿ ಮಾಡಿ. ಕ್ಷೇತ್ರದಲ್ಲಿ ಮಾತ್ರವಲ್ಲದೇ ವಿಧಾನಸೌಧದಲ್ಲೂ ಜೆಡಿಎಸ್ ಧ್ವಜ ಹಾರಿಸುವಂತೆ ಯುವಕರು ನಮಗೆ ಶಕ್ತಿ ತುಂಬುವ ಕೆಲಸ ಮಾಡಬೇಕುಪ್ರಜ್ವಲ್ ರೇವಣ್ಣ. ಸಂಸದ
ಕಾಂಗ್ರೆಸ್ ಹಾಗೂ ಬಿಜೆಪಿ ಜನರಿಗಾಗಿ ಏನೂ ಮಾಡಿಲ್ಲ
ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದು ರಾಜ್ಯದಲ್ಲಿ ಈವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ಜನರಿಗಾಗಿ ಏನೂ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಕಾಂಗ್ರೆಸ್. ಇಂದು ಹಲಾಲ್, ಹಿಜಾಬ್, ಆಜಾನ್ ಅಂತ ಗಲಾಟೆ ಮಾಡೋಕೆ ಕಾರಣವಾದರು. 40% ಕಮೀಷನ್ ಆರೋಪಕ್ಕೆ ಕಾರಣವಾಗಿದ್ದಾರೆ. ಐದು ವರ್ಷ ನೀವೇ ಸಿಎಂ ಆಗಿ ಅಂತ ಕುಮಾರಣ್ಣರ ಮನೆ ಬಳಿ ಬಂದ ಕಾಂಗ್ರೆಸ್‌ನವರು ನಂತರ ದಿನನಿತ್ಯ ಕಿರುಕುಳ ನೀಡಲು ಮುಂದಾದರು. ಇಷ್ಟಾದರೂ ಕೊಟ್ಟ ಮಾತಿನಂತೆ 23 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆಯಾದರೂ ಈ ಬಗ್ಗೆ ಅಧಿಕಾರ ನಡೆಸುವ ಸರ್ಕಾರ ಮೌನವಾಗಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಲಾಟರಿ ನಿಷೇಧ, ಸಾರಾಯಿ ನಿಷೇಧ ಮಾಡಿದ್ದರು. ರೈತರಿಗಾಗಿ 23 ಸಾವಿರ ಕೋಟಿ ಸಾಲ ತೀರಿಸಿದ ಯಾವುದಾದ್ರೂ ಪಕ್ಷ ಇದ್ರೆ ತೋರಿಸಿ. ರೈತರಿಗೆ ಮಾತು ಕೊಟ್ಟಿದ್ದೇನೆ, ಸಾಲ ಮನ್ನ ಮಾಡೇ ಮಾಡ್ತೀನಿ ಅಂತ ಹೇಳಿ ಮಾಡಿದ್ರು. ಇದೊಂದು ಬಾರಿ ಕುಮಾರಣ್ಣಗೆ ಒಂದು ಅವಕಾಶ ಕೊಡಿನಿಖಿಲ್ ಕುಮಾರಸ್ವಾಮಿ, ಜೆಡಿಸ್ ಯುವ ಘಟಕದ ಅಧ್ಯಕ್ಷ
ಬೃಹತ್ ಸಂಖ್ಯೆಯಲ್ಲಿ ಭಾಗಿಯಾದ ಜನ
ಜೆಡಿಎಸ್ ಜನರ ಪಕ್ಷ. ಜನಸೇವೆಯೇ ಪಕ್ಷದ ಗುರಿ. ಜನರ ಶಕ್ತಿ ಎಂಥಹುದು ಎನ್ನುವುದನ್ನು ಈ ದಿನ ಬೃಹತ್ ಸಂಖ್ಯೆಯಲ್ಲಿ ಜನರು ರಥಯಾತ್ರೆಯಲ್ಲಿ ಭಾಗಿಯಾಗುವುದರ ಮೂಲಕ ತೋರಿಸಿಕೊಟ್ಟಿದ್ದಾರೆ. ಜನಾದೇಶಕ್ಕೆ ಯಾರಾದರೂ ತಲೆಬಾಗಲೇ ಬೇಕು. ಕುಮಾರಣ್ಣನವರನ್ನು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹಗಲೂ ರಾತ್ರಿ ಶ್ರಮಿಸುತ್ತೇವೆ. ಅವರನ್ನು ಮುಖ್ಯಮಂತ್ರಿಯಾಗಿ ನೋಡುವವರೆಗೆ ನಾವು ವಿಶ್ರಮಿಸುವುದಿಲ್ಲಮೇಲೂರು ಬಿ.ಎನ್.ರವಿಕುಮಾರ್, ಜೆಡಿಎಸ್ ಮುಖಂಡ, ಶಿಡ್ಲಘಟ್ಟ