ಕನಕದಾಸ ಜಯಂತಿ: ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ಬಹುಮಾನ

Kanakadasa Jayanti procession in Sidlaghatta led by folk artists with MLA B N Ravikumar and community leaders walking behind

Sidlaghatta : ಶಿಡ್ಲಘಟ್ಟ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕದಾಸ ಜಯಂತಿ ಆಯೋಜಿಸಲಾಗಿತ್ತು. ಕನಕದಾಸರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು. SSLC ಯಲ್ಲಿ ಶೇ 90ಕ್ಕಿಂತ ಹಾಗೂ ದ್ವಿತೀಯ PUC ಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅವರು ವೈಯಕ್ತಿಕವಾಗಿ ತಲಾ ₹5 ಸಾವಿರ ನಗದು ನೀಡಿ ಪುರಸ್ಕರಿಸಿದರು.

ಸುಮಾರು 500 ವರ್ಷಗಳ ಹಿಂದೆ ಬದುಕಿದ್ದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಜಾತಿ ಪದ್ಧತಿ, ಮೂಢನಂಬಿಕೆ ಹಾಗೂ ಅನಿಷ್ಟ ಆಚರಣೆಗಳ ವಿರುದ್ಧ ಜನಜಾಗೃತಿ ಮೂಡಿಸಿದ್ದರು ಎಂದು ಶಾಸಕರು ತಿಳಿಸಿದರು.

‘ಕುಲ ಕುಲ ಎಂದು ಹೊಡೆದಾಡಬೇಡಿ’ ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸದೆ ಎಲ್ಲರೂ ಸಮಾನತೆಯಿಂದ ಬದುಕಬೇಕು. ತಮ್ಮ ವಚನಗಳು ಹಾಗೂ ಕೀರ್ತನೆಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಕನಕದಾಸರ ದೂರದೃಷ್ಟಿಯ ಚಿಂತನೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಎಂದರು.

ಮಹನೀಯರ ಜಯಂತಿಗಳನ್ನು ಕೇವಲ ಆಡಂಬರಕ್ಕೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ಆಚರಿಸಬೇಕು. ಅವರ ಜೀವನದ ಆದರ್ಶಗಳನ್ನು ಅರಿತುಕೊಂಡು ಕನಿಷ್ಠ ಕೆಲವು ತತ್ವಗಳನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ನಾಡಪ್ರಭು ಕೆಂಪೇಗೌಡ, ಮಹರ್ಷಿ ವಾಲ್ಮೀಕಿ ಸೇರಿದಂತೆ ಅನೇಕ ಮಹನೀಯರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗದೆ ಎಲ್ಲ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

Students who scored high marks in SSLC and PUC honoured with shawls, garlands and books at Kanakadasa Jayanti programme in Sidlaghatta

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏನು ಸಿಕ್ಕಿತು?

ಕಾರ್ಯಕ್ರಮದಲ್ಲಿ SSLC ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಹಾಗೂ ದ್ವಿತೀಯ PUC ಪರೀಕ್ಷೆಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕರು ವೈಯಕ್ತಿಕವಾಗಿ ತಲಾ ₹5 ಸಾವಿರ ನಗದು ನೀಡಿ ಪುರಸ್ಕರಿಸಿದರು. ಸಮುದಾಯದ ಹಿರಿಯರಾದ ಸಾಧಲಿ ಮುನಿಕೃಷ್ಣಪ್ಪ ಸೇರಿದಂತೆ ಗಣ್ಯರು ವಿದ್ಯಾರ್ಥಿಗಳಿಗೆ ಶಾಲು, ಹಾರ, ನೆನಪಿನ ಕಾಣಿಕೆ ಹಾಗೂ ಪುಸ್ತಕ ನೀಡಿ ಗೌರವಿಸಿದರು.

Guests felicitating a community elder with a fruit basket and shawl at the Kanakadasa Jayanti programme in Sidlaghatta

ತೆಂಗಿನಕಾಯಿ ಒಡೆಯುವ ಆಚರಣೆ ಗಮನ ಸೆಳೆಯಿತು

ಕಾರ್ಯಕ್ರಮಕ್ಕೂ ಮುನ್ನ ನಗರದ ಕೆಂಪಣ್ಣ ವೃತ್ತದಲ್ಲಿರುವ ಶ್ರೀಕನಕ ಭಜನೆ ಮನೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಹಾಲುಮತ ಕುರುಬ ಸಮುದಾಯದ ಸಾಂಪ್ರದಾಯಿಕ ಆಚರಣೆಯಾದ ತಲೆ ಮೇಲೆ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಗಮನ ಸೆಳೆಯಿತು. ಭಾವಣ್ಣ ಹಾಗೂ ಅವರ ಶಿಷ್ಯರು ನಡೆಸಿಕೊಟ್ಟ ಈ ಆಚರಣೆಯನ್ನು ಭಕ್ತರು ಕುತೂಹಲದಿಂದ ವೀಕ್ಷಿಸಿದರು.

Community leaders offering puja and floral tribute to Kanakadasa portrait at Kanaka Bhajane Mane in Sidlaghatta

ನಂತರ ಕನಕದಾಸರ ಮುತ್ತಿನ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಡೊಳ್ಳು, ತಮಟೆ ಹಾಗೂ ಕೀಲುಕುದುರೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು.

ಕಾವೇರಿ ಹ್ಯಾಂಡ್‌ಲೂಮ್ಸ್ ಅಧ್ಯಕ್ಷ ಬಿ.ಜಿ. ಗಣೇಶ್, ತಹಶೀಲ್ದಾರ್ ಎನ್. ಗಗನಸಿಂಧು, EO ಆರ್. ಹೇಮಾವತಿ, BEO ಪಿ. ಸ್ವಾಮಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಎಂ. ರಾಮಣ್ಣ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾಲ್ಫಿನ್ ಸ್ಕೂಲ್ ನಾಗರಾಜ್, ತಾಲ್ಲೂಕು ಅಧ್ಯಕ್ಷ ಕೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ. ರಾಮಾಂಜಿನಪ್ಪ, ಖಜಾಂಚಿ ಕೆ.ಸಿ. ನಾರಾಯಣಸ್ವಾಮಿ, ಉಪಾಧ್ಯಕ್ಷ ಸಿ. ರಾಮಣ್ಣ, ಮುನಿನಂಜಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಂಬಂಧಿತ ಸುದ್ದಿ: ತಾಲ್ಲೂಕಿನಲ್ಲಿ ಕನಕ ಭವನ ನಿರ್ಮಾಣ: ಶಾಸಕ ಬಿ.ಎನ್. ರವಿಕುಮಾರ್ · ಕನಕದಾಸರ ಆದರ್ಶಗಳು ಸಮಾಜದ ದಾರಿ ಬೆಳಗುವ ಬೆಳಕು

🔔 ಹೊಸ ಸುದ್ದಿ ಫೋನ್‌ನಲ್ಲಿ ಬೇಕಾ?

ನ್ಯೂಸ್ ಬಂದ ತಕ್ಷಣ alert ಬರುತ್ತದೆ

Free ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.

📈 ಇಂದಿನ silk rateCB ₹784 · BV ₹849 per kg🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

⚠️ Report an error in this story

Nearby

📰 ಇದನ್ನೂ ಓದಿ

📸 ನಿಮ್ಮ ಊರಿನ ಸುದ್ದಿ ಇದೆಯೇ?

ಫೋಟೋ ಸಮೇತ ಕಳುಹಿಸಿ

💬 Send news📢 Daily updates: join our WhatsApp channel