ಶಾಲೆಯಲ್ಲಿ ಸಂವಿಧಾನ ದಿನಾಚರಣೆ: 7, 8ನೇ ತರಗತಿ ಮಕ್ಕಳಿಗೆ ‘ಸಂವಿಧಾನ ತಿಳಿಯೋಣ’ ರಸಪ್ರಶ್ನೆ

Students seated at a desk for the Know the Constitution quiz with teachers standing beside them at a government school in Sidlaghatta taluk on Constitution Day 2026

Sidlaghatta : ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಸಂವಿಧಾನದ ಪೀಠಿಕೆಯನ್ನು ಓದಿದರು. ಶಿಕ್ಷಕ ನಾಗರಾಜ್ ಅವರು ಪೀಠಿಕೆಯ ಹಿನ್ನೆಲೆ ಮತ್ತು ಸಂವಿಧಾನದ ಮೌಲ್ಯಗಳನ್ನು ಮಕ್ಕಳಿಗೆ ವಿವರಿಸಿದರು. ಸಹಶಿಕ್ಷಕಿ ಶಾಂತಮ್ಮ ಅವರು ಸಂವಿಧಾನದ ಮಹತ್ವವನ್ನು ತಿಳಿಸಿದರು.

ಸಂವಿಧಾನ ತಿಳಿಯೋಣ ರಸಪ್ರಶ್ನೆಯಲ್ಲಿ ಏನೇನು ಕೇಳಿದರು?

ನಂತರ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಸಂವಿಧಾನ ತಿಳಿಯೋಣ’ ಎಂಬ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಸಂವಿಧಾನದ ಹಿನ್ನೆಲೆ, ರಚನೆ, ವಿಧಿಗಳು ಹಾಗೂ ಅದನ್ನು ರೂಪಿಸುವಾಗ ಅಳವಡಿಸಿಕೊಂಡ ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.

ಶಿಕ್ಷಕರಾದ ಸುದರ್ಶನ್ ಮತ್ತು ಬಾಲರಾಜ್ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಬಹುಮಾನ ವಿತರಿಸಲಾಯಿತು.

ಇದೇ ದಿನ ತಾಲ್ಲೂಕು ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಬಗ್ಗೆಯೂ ಓದಿ. ಇದೇ ಶಾಲೆಯ ಬಗ್ಗೆ ಮಕ್ಕಳಿಗೆ ಪೀಠೋಪಕರಣ ಕೊಡುಗೆ ಸುದ್ದಿಯನ್ನೂ ನೋಡಿ.

🔔 ಹೊಸ ಸುದ್ದಿ ಫೋನ್‌ನಲ್ಲಿ ಬೇಕಾ?

ನ್ಯೂಸ್ ಬಂದ ತಕ್ಷಣ alert ಬರುತ್ತದೆ

Free ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.

📈 ಇಂದಿನ silk rateCB ₹787 · BV ₹943 per kg🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

⚠️ Report an error in this story

📰 ಇದನ್ನೂ ಓದಿ

📸 ನಿಮ್ಮ ಊರಿನ ಸುದ್ದಿ ಇದೆಯೇ?

ಫೋಟೋ ಸಮೇತ ಕಳುಹಿಸಿ

💬 Send news📢 Daily updates: join our WhatsApp channel