ಕಾರ್ತಿಕ ಮಾಸದ ಮೊದಲ ಸೋಮವಾರ: ಸೋಮೇಶ್ವರನಿಗೆ ರುದ್ರಾಭಿಷೇಕ; 23ರಂದು ಗಿರಿಜಾ ಕಲ್ಯಾಣೋತ್ಸವಕ್ಕೆ ಹೆಸರು ನೋಂದಣಿ

Devotees with folded hands watch a priest show the aarti to the flower-decorated Someshwara deity on the first Monday of Karthika month, with a Nandi statue in the foreground

Sidlaghatta : ಕಾರ್ತಿಕ ಮಾಸದ ಮೊದಲ ಸೋಮವಾರದ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜೆ, ಅಭಿಷೇಕ ಹಾಗೂ ದೀಪಾರಾಧನೆ ಭಕ್ತಿಭಾವದಿಂದ ನಡೆದವು.

ಸೋಮೇಶ್ವರ ದೇವಾಲಯದಲ್ಲಿ ಅಭಿಷೇಕ, ಅಲಂಕಾರ

ನಗರದ ಕೋಟೆ ವೃತ್ತದ ಸಮೀಪದ ಪ್ರಸನ್ನ ಕೋಟೆ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಬರುತ್ತಿದ್ದರು. ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆದು ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಸುಮಂಗಲಿಯರಿಂದ ದೀಪಾರಾಧನೆ

ದೇವಾಲಯದ ಆವರಣದಲ್ಲಿ ಸುಮಂಗಲಿಯರು ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಕುಟುಂಬದ ಒಳಿತು ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೀಪಾರಾಧನೆಯಲ್ಲಿ ಪಾಲ್ಗೊಂಡರು; ಸಂಜೆಯೂ ಹಲವರು ಬಂದು ದೀಪ ಬೆಳಗಿ ಪ್ರಾರ್ಥಿಸಿದರು. ಮೊದಲ ಸೋಮವಾರದ ಪ್ರಯುಕ್ತ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗಿದ್ದು, ಬೆಳಿಗ್ಗೆಯಿಂದಲೇ ಸುಮಂಗಲಿಯರು ದೀಪ ಬೆಳಗಿಸುತ್ತಿದ್ದಾರೆ ಎಂದು ದೇವಾಲಯದ ಅರ್ಚಕ ಸಾಯೀಶ ತಿಳಿಸಿದರು.

ನವೆಂಬರ್ 23ರಂದು ವಾರ್ಷಿಕೋತ್ಸವ, ಗಿರಿಜಾ ಕಲ್ಯಾಣೋತ್ಸವ

ಕಳೆದ ವರ್ಷ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾಪನೆಯಾದ ಈ ದೇವಾಲಯದ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಎರಡನೇ ಕಾರ್ತಿಕ ಸೋಮವಾರವಾದ ನವೆಂಬರ್ 23ರಂದು ಆಯೋಜಿಸಲಾಗಿದೆ. ಅಂದು ಮುಂಜಾನೆ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಹೂವಿನ ಅಲಂಕಾರ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ದೇವಾಲಯದ ಆವರಣದಲ್ಲಿ ಸಾಮೂಹಿಕ ಗಿರಿಜಾ ಕಲ್ಯಾಣೋತ್ಸವ ನಡೆಯಲಿದ್ದು, ಪಾಲ್ಗೊಳ್ಳಲು ಇಚ್ಛಿಸುವ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಬಹುದು. ಸಂಜೆ ಸಂಗೀತೋತ್ಸವ ಕಾರ್ಯಕ್ರಮವೂ ಇದೆ ಎಂದು ಅರ್ಚಕ ಸಾಯೀಶ ತಿಳಿಸಿದರು.

ತಾಲ್ಲೂಕಿನ ಇತರೆ ಶಿವ ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ಅಭಿಷೇಕ ಹಾಗೂ ದೀಪಾರಾಧನೆ ನಡೆದಿದ್ದು, ಭಕ್ತರು ಕುಟುಂಬ ಸಮೇತರಾಗಿ ಬಂದು ಪಾಲ್ಗೊಂಡರು.

ಸಂಬಂಧಿತ ಸುದ್ದಿ: ಸೋಮೇಶ್ವರ ದೇವಾಲಯದಲ್ಲಿ ಸ್ಕಂದ ಷಷ್ಠಿ ವಿಶೇಷ ಪೂಜೆ | ಸೋಮೇಶ್ವರ ದೇವಾಲಯದಲ್ಲಿ ನವರಾತ್ರಿ ಭರತನಾಟ್ಯ ಕಾರ್ಯಕ್ರಮ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.