Home News ಚರ್ಮ ಗಂಟು ರೋಗ ನಿಯಂತ್ರಿಸಲು ರಾಸುಗಳಿಗೆ ಲಸಿಕೆ

ಚರ್ಮ ಗಂಟು ರೋಗ ನಿಯಂತ್ರಿಸಲು ರಾಸುಗಳಿಗೆ ಲಸಿಕೆ

0
Sidlaghatta Lumpy Skin Disease Vaccination

Bodaguru, sidlaghatta : ಜಾನುವಾರುಗಳ ಕೊರೊನಾ ಎಂದು ಬಿಂಬಿತವಾಗಿರುವ ಚರ್ಮ ಗಂಟು ರೋಗ (Lumpy skin disease) ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ನಮ್ಮ ತಾಲ್ಲೂಕಿನಲ್ಲಿಯೂ ಕಂಡುಬಂದಿದೆ. ಸಕಾಲಿಕ ಕ್ರಮಗಳಿಂದಾಗಿ ಹೆಚ್ಚಿನ ಅನಾಹುತಗಳು ಆಗಿಲ್ಲ ಅನ್ನುವುದು ಸಮಾಧಾನದ ಸಂಗತಿ. ಆದರೂ, ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳ ಜೊತೆಗೆ ರೈತರು ಎಚ್ಚರಿಕೆ ವಹಿಸಬೇಕಿದೆ ಎಂದು ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ತಿಳಿಸಿದರು.

ಮನುಷ್ಯರಲ್ಲಿ ಕೊರೊನಾ ಹರಡುವ ರೀತಿಯಲ್ಲಿ ಜಾನುವಾರುಗಳಿಗೆ ಹರಡುವ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಪಶುಸಂಗೋಪಾನಾ ಇಲಾಖೆ ಲಸಿಕೆಯ (Vaccination) ಅಸ್ತ್ರ ಬಳಸುತ್ತಿದೆ. ಸಮರೋಪಾದಿಯಲ್ಲಿ ಲಸಿಕೆ ಅಭಿಯಾನ ನಡೆಸುತ್ತಿದೆ. ಚರ್ಮ ಗಂಟು ರೋಗ ಬಹುತೇಕ ತಗ್ಗಿದೆ. ಇದರ ಹೊರತಾಗಿಯೂ ಜಾನುವಾರುಗಳಿಗೆ ಲಸಿಕೆ ಹಾಕುವುದು ಸೇರಿದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ 5000 ಚರ್ಮಗಂಟು ರೋಗದ ಲಸಿಕೆ ದಾಸ್ತಾನು ಮಾಡಿದ್ದು, ಲಸಿಕೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಜೊತೆಗೆ ಜನರಲ್ಲಿ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಾಯಿಲೆ ಕಾಣಿಸಿದ ರಾಸುಗಳನ್ನು ಬೇರ್ಪಡಿಸಿ ಅಗತ್ಯ ಚಿಕಿತ್ಸೆಗಳನ್ನ ಮಾಡಲಾಗುತ್ತಿದೆ. ಇವತ್ತಿನವರೆಗೆ 25 ರಾಸುಗಳಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದು ಸೂಕ್ತ ಚಿಕಿತ್ಸೆಯ ನಂತರ 13 ರಾಸುಗಳು ಗುಣಮುಖವಾಗಿರುತ್ತವೆ ಎಂದು ಮಾಹಿತಿ ನೀಡಿದರು.

ಈ ವೈರಾಣುವಿನ ಕಾಯಿಲೆ ಮನುಷ್ಯನಿಗೆ ಹರಡುವುದಿಲ್ಲ. ಹಾಲನ್ನು ಕಾಯಿಸಿ ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುವುದು. ರಾಸುಗಳನ್ನು ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡಿ, ಸೊಳ್ಳೆ, ನೊಣ, ಪಿಡದೆಗಳ ಹತೋಟಿ ಮಾಡಿದಾಗ ಈ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ತಾಲ್ಲೂಕಿನ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾಯಿಲೆಯ ನಿಯಂತ್ರಣಕ್ಕೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. 5000 ಲಸಿಕೆಗಳನ್ನು ಅತ್ತಿಗಾನಹಳ್ಳಿ, ಬಳುವನಹಳ್ಳಿ, ಈ ತಿಮ್ಮಸಂದ್ರ, ಬೋದಗೂರು, ಕಾಳನಾಯಕನಹಳ್ಳಿ, ಕೊಮ್ಮಸಂದ್ರ, ಹಳೆಹಳ್ಳಿ, ಮಳಮಾಚನಹಳ್ಳಿ ಗ್ರಾಮಗಳಲ್ಲಿ ಹಾಕಲಾಗಿದೆ. ಇನ್ನು ಹೆಚ್ಚಿನ ಬೇಡಿಕೆಗಾಗಿ ಮೇಲಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version