Malamachanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ದ್ಯಾವಪ್ಪ ಹಾಗೂ ಉಪಾಧ್ಯಕ್ಷರಾಗಿ ವೆಂಕಟಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 13 ಸಂಖ್ಯಾ ಬಲವಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಎಂ.ಮಂಜುನಾಥ್ ಕಾರ್ಯನಿರ್ವಹಿಸಿದರು.
ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ದೇವರಾಜ್, ಆರ್.ಸತೀಶ್, ನಿರ್ದೇಶಕರಾದ ರಾಮಚಂದ್ರಾಚಾರಿ, ಎಂ.ಎಸ್.ಕೃಷ್ಣಪ್ಪ, ಎಂ.ಸಿ.ಅಶೋಕ್, ಎಂ.ಎನ್.ವೆಂಕಟೇಗೌಡ, ಎಂ.ಮನೋಹರ್, ತಿನಕಲ್ ಶ್ರೀನಿವಾಸ್, ಡಿಶ್‌ವೆಂಕಟೇಶ್, ಪ್ರಮಿಳಮ್ಮ, ಸವಿತಾ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಸಿ.ರಾಜಶೇಖರ್, ಎಂ.ಆರ್.ನಟರಾಜ್, ಜೆಡಿಎಸ್ ಮುಖಂಡರಾದ ಎಂ.ಸಿ.ಜಗದೀಶ್, ಎಂ.ಜಿ.ನವೀನ್‌ಕುಮಾರ್, ಸಂಘದ ಕಾರ್ಯದರ್ಶಿ ಎಂ.ವಿನಯ್‌ಕುಮಾರ್, ಸೇರಿದಂತೆ ಡೇರಿ ಸಿಬ್ಬಂದಿ ಹಾಜರಿದ್ದರು.








