Malamachanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ JDS ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಒಟ್ಟು 13 ಸಂಖ್ಯಾ ಬಲದ ಡೇರಿಯಲ್ಲಿ 13 ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಸಾಮಾನ್ಯ ಸ್ಥಾನದಿಂದ ದ್ಯಾವಪ್ಪ.ಬಿ, ಸತೀಶ.ಆರ್, ತಿನಕಲ್ ಶ್ರೀನಿವಾಸಪ್ಪ, ಅಶೋಕ್.ಎಂ.ಸಿ, ಕೃಷ್ಣಪ್ಪ.ಎಂ.ಎಸ್, ವೆಂಕಟೇಗೌಡ.ಎಂ.ಎನ್, ಮನೋಹರ.ಎಂ, ಪ.ಜಾತಿ ಮೀಸಲು ಕ್ಷೇತ್ರದಿಂದ ವೆಂಕಟಲಕ್ಷ್ಮಮ್ಮ.ಎ.ಕೆ, ಪ.ಪಂಗಡ ಮೀಸಲು ಕ್ಷೇತ್ರದಿಂದ ವೆಂಕಟೇಶಪ್ಪ.ಆರ್, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಾಮಚಂದ್ರಾಚಾರಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರಾಜಶೇಖರ.ಎಂ.ಕೆ, ಮಹಿಳಾ ಮೀಸಲು ಕ್ಷೇತ್ರದಿಂದ ಪ್ರಮೀಳಮ್ಮ, ಸವಿತ.ಎನ್, ಚುನಾಯಿತರಾಗಿದ್ದಾರೆ. ಎಂ.ಮಂಜುನಾಥ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.