30.1 C
Sidlaghatta
Saturday, April 1, 2023

ಅರಣ್ಯ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಎಚ್ಚರ ವಹಿಸಿ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮುನಿರಾಜ ಅವರು ಮಾತನಾಡಿದರು.

ಅರಣ್ಯ ಪ್ರದೇಶದಲ್ಲಿ ಜೀವರಾಶಿಗಳು ನಾಶವಾಗುವುದನ್ನು ತಡೆಯುವುದು ಹಾಗೂ ಸಸಿ ಸಂಕುಲಗಳ ನಾಶವಾಗದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಬೇಸಿಗೆ ಕಾಲಕ್ಕೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಜಾಗ್ರತೆ ವಹಿಸಿ. ಆಕಸ್ಮಿಕ ಬೆಂಕಿಬಿದ್ದರೆ ತಕ್ಷಣ ಅರಣ್ಯಾಧಿಕಾರಿಗಳಿಗೆ ಅಥವಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಎಂದು ತಿಳಿಸಿದರು. ಕೆಲವು ಭಾಗದಲ್ಲಿ ನೀರು ಸಾಗಾಣಿಕೆ ಸಹ ಮಾಡಲಾಗುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಕೈ ಜೊಡಿಸಿ ಹಸಿರು ರೆಂಬೆಗಳ ಮೂಲಕ ಬೆಂಕಿ ನಂದಿಸುವ ಕೆಲಸ ಮಾಡಬೇಕಾಗಿದೆ ಮತ್ತು ಬೆಂಕಿ ಸಣ್ಣ ಪ್ರಮಾಣದಲ್ಲಿರುವಾಗಲೆ ನಂದಿಸುವ ಕೆಲಸ ಮಾಡಿ ಎಂದು ಹೇಳಿದರು.

ಕೃಷಿ ಇಲಾಖೆಯಲ್ಲಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ನೀಡುತ್ತಿರುವ 2 ಸಾವಿರ ಹಣ ಬರದೇ ಇರುವವರು ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಮರು ನೋಂದಣಿ ಮಾಡಿಸಲು ತಿಳಿಸಿದರು.

ವರ್ಷದ ಕೊನೆಯ ಸಾಮಾನ್ಯ ಸಭೆಯಾಗಿರುವುದರಿಂದ ಎಲ್ಲಾ ಇಲಾಖೆಗಳಿಗೆ ಬಂದಿರುವ ಅನುದಾನ, ಮತ್ತು ಪಲಾನುಭವಿಗಳಿಗಾಗಿ ಬಂದಿರುವ ಸವಲತ್ತುಗಳನ್ನು ಮತ್ತು ಉಳಿಕೆಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಲು ತಿಳಿಸಿದರು.

ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಕಾರ್ಯವಾಗಬೇಕಿದೆ, ಸ್ವಚ್ಚತೆ ಹಾಗೂ ತಾಮ್ರದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಮಕ್ಕಳ ಅರೋಗ್ಯದ ಮೇಲೆ ಪರಿಣಾಮ ಬೀರಿದರೆ ಮುಂದೆ ಅಧಿಕಾರಿಗಳೆ ಜವಾಬ್ದಾರಿಯಾಗಬೇಕಾಗುತ್ತದೆ. ಆದ್ದರಿಂದ ಪರೀಕ್ಷೆ ಸಮಯದ ಒಳಗೆ ಆರೋಗ್ಯ ತಪಾಸಣೆ ನಡೆಯಲಿ. ನಾನು ಜೊತೆಯಲ್ಲಿ ಬರುತ್ತೇನೆ ಎಂದರು.

ಸರ್ಕಾರಿ ಆಸ್ಪತ್ರೆಯ ದೇವರಾಜು ಮಾತನಾಡಿ,ಕಳೆದ ವರ್ಷದಲ್ಲಿ ತೀವ್ರ ನೆಗಡಿ ಕೆಮ್ಮು ತರಹದ 45 ಪ್ರಕರಣ ಕಂಡುಬಂದಿತ್ತು. ಈ ವರ್ಷದ ಈ ತಿಂಗಳಲ್ಲಿ ಮುತ್ತಕದಹಳ್ಳಿ, ಜಂಗಮಕೋಟೆ ಮತ್ತು ಬಸೆಟ್ಟಹಳ್ಳಿ ಗ್ರಾಮದಲ್ಲಿ ಒಟ್ಟು ಮೂರು ಜನಕ್ಕೆ ಸೋಂಕಿನ ಅಂಶ ಕಂಡುಬಂದಿದ್ದು ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


Taluk Panchayat Executive Officer Urges Protection of Vegetation and Prevention of Forest Fires

Sidlaghatta : Taluk Panchayat Executive Officer Muniraja recently addressed a general meeting at the Taluk Panchayat Hall in Sidlaghatta Town. During the meeting, he stressed the importance of protecting vegetation and preventing the destruction of bio-masses in forest areas. He also advised villagers to be careful not to start fires in forest areas during the summer season and to immediately inform forest officials or the fire brigade in case of accidental fires.

Muniraja also reminded farmers who have not received the Rs. 2,000 granted to them under the Kisan Samman Nidhi Scheme in the Agriculture Department to re-register with the Taluk Agriculture Department.

In addition, Muniraja called for the completion of all departmental grants, beneficiary benefits, and pending work before the end of the year. He also urged for health inspections to be conducted in hostels and for authorities to be held responsible for any adverse health effects caused by unhygienic conditions or cooking in non-copper utensils.

During the meeting, Devaraju of the government hospital shared that there were 45 cases of severe cold and cough last year. This month, a total of three people were found to be infected in Muttakahalli, Jangamakote, and Basettahalli villages, and were sent to the district hospital for examination.

Various officials from different departments attended the meeting.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!