32.1 C
Sidlaghatta
Monday, March 27, 2023

ಗರ್ಭಿಣಿ ಸಾವು; ತಪ್ಪಿತಸ್ಥ ವೈದ್ಯರು ಮತ್ತು ದಾದಿಯರ ವಜಾಗೆ ಆಗ್ರಹಿಸಿ ಪ್ರತಿಭಟನೆ

- Advertisement -
- Advertisement -

Sidlaghatta : ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಗರ್ಭಿಣಿ ಮೌನಿಕ ಸಾವಿಗೀಡಾಗಿದ್ದಾಳೆ. ತಪ್ಪಿತಸ್ಥ ವೈದ್ಯರು ಮತ್ತು ದಾದಿಯರ ವಜಾಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರಿಂದ ಪ್ರತಿಭಟನಾ ಮೆರವಣಿಗೆಯನ್ನು ಸೋಮವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಈಧರೆ ಸಮತಾ ಸೇನೆ ಅಧ್ಯಕ್ಷ ಈಧರೆ ತಿರುಮಲ ಪ್ರಕಾಶ್ ಮಾತನಾಡಿ, ಅಬ್ಲೂಡು ನಿವಾಸಿ ಮೌನಿಕ ಜ.13ರಂದು ಹೆರಿಗೆಗೆಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಲು ಮುಂದಾದ ದಾದಿಯರು, ಮೊಬೈಲ್ ಮಾರ್ಗದರ್ಶನದ ಮೂಲಕ ಹೆರಿಗೆ ಮಾಡಲು ಮುಂದಾಗಿದ್ದರಿಂದಲೇ ಮೋನಿಕ ಸಾವಿಗೀಡಾಗಿದ್ದಾರೆ. ವೃತ್ತಿಯ ಬಗ್ಗೆ ಉದಾಸೀನ ತೋರಿ ಅಮಾಯಕ ಜೀವದ ಬಲಿಗೆ ಕಾರಣವಾದ ಆರೋಪಿಗಳನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ ಕಾನೂನಿನಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತಪಾಸಣೆಗೆಂದು ಬಂದ ನಂತರ ಹೆರಿಗೆ ವಾರ್ಡಿಗೆ ದಾಖಲಾದ ಮೌನಿಕ ಆರೋಗ್ಯವಾಗಿಯೇ ಇದ್ದರು.ಅನುಭವ ಇಲ್ಲದ ದಾದಿಯರು ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಲು ಮುಂದಾಗಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ವೇಳೆ ಸರಿಯಾದ ಕ್ರಮಗಳನ್ನು ಅನುಸರಿಸದ ಕಾರಣ ಅಧಿಕ ರಕ್ತಸ್ರಾವವಾಗಿದೆ. ಸಕಾಲದಲ್ಲಿ ಇದನ್ನು ನಿಯಂತ್ರಣಕ್ಕೆ ತರಲಾಗದ ಕಾರಣ ಮೌನಿಕ ನಿತ್ರಾಣಗೊಂಡು ಸಾವುಬದುಕಿನ ನಡುವೆ ಹೋರಾಟ ಮಾಡುವ ಸಂದರ್ಭದಲ್ಲಿ ಗರ್ಭಿಣಿಯ ವಾರಸುದಾರರಿಗೆ ತಪ್ಪು ಮಾಹಿತಿ ನೀಡಿ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ತಾಕೀತು ಮಾಡಿದ್ದಾರೆ. ಅವರ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದರೂ ಕೂಡ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ವೈದ್ಯರ ಅಲಭ್ಯತೆಯ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ನರಳಿ ನರಳಿ ಬಾಣಂತಿ ಮೌನಿಕ ಸಾವನ್ನಪ್ಪಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿಯೇ ವೈದ್ಯರು, ಸಿಬ್ಬಂದಿ ತುರ್ತು ಸೇವೆಗೆ ಲಭ್ಯರಿರದೆ ಉತ್ಸವಕ್ಕೆ ತೆರಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಸಾವಿಗೆ ಸಚಿವ ಡಾ.ಸುಧಾಕರ್ ಕೂಡ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ದೂರಿದರು.

ಮೌನಿಕ ಸಾವಿನ ಬಗ್ಗೆ ಬಂದಿರುವ ತನಿಖಾ ವರದಿಯಲ್ಲಿ ವೈದ್ಯರು, ಸಿಬ್ಬಂದಿಯ ನಿರ್ಲಕ್ಷದಿಂದಲೇ ಸಾವು ಸಂಭವಿಸಿದೆ ಎಂದು ಸ್ಪಷ್ಟವಾಗಿ ನಮೂದಿಸಿದ್ದರೂ, ಇದುವರೆಗೂ ಸಂಬ೦ಧ ಪಟ್ಟವರ ವಿರುದ್ಧ ಡಿ.ಎಚ್‌.ಒ ಆಗಲಿ ಜಿಲ್ಲಾಧಿಕಾರಿಗಳೇ ಆಗಲಿ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಶಿಡ್ಲಘಟ್ಟದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಲಾಗುತ್ತಿದೆ. ಇದಕ್ಕೂ ಮಣಿ ದಯದಿದ್ದರೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೌನಿಕಾ ಸಾವಿಗೆ ಕಾರಣರಾದ ವೈದ್ಯರನ್ನು ಮತ್ತು ಸಂಬಂದಪಟ್ಟ ಸಿಬ್ಬಂದಿಯನ್ನು ಈ ಕೂಡಲೇ ಅಮಾನತ್ತುಗೊಳಿಸಿ ಸೇವೆಯಿಂದ ಅವರನ್ನು ವಜಾಗೊಳಿಸಬೇಕು. ತನಿಖಾ ತಂಡ ಜಿಲ್ಲಾ ಆಸ್ಪತ್ರೆಯ ಕರ್ತವ್ಯ ಲೋಪದ ಬಗ್ಗೆಯೂ ಕ್ರಮ ವಹಿಸಬೇಕು. ಮೃತೆ ಮೌನಿಕಾ ಹೆಸರಿನಲ್ಲಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ತುರ್ತು ರಕ್ತ ನಿಧಿ ಕೇಂದ್ರ ತೆರೆದು ಮತ್ತಷ್ಟು ಜೀವಗಳು ಉಳಿಯುವಂತೆ ಮಾಡಬೇಕು. ಮೃತೆ ಮೌನಿಕಾ ಕುಟುಂಬಕ್ಕೆ 25 ಲಕ್ಷ ರೂ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.

ನರಸಿಂಹಪ್ಪ, ಮುನಿಕೃಷ್ಣಪ್ಪ, ಮಹೇಶ್, ಮಮತಾ, ಮುನಿರಾಜು, ವೆಂಕಟರಮಣಪ್ಪ, ಸ್ವಪ್ನ, ಅಬ್ಲೂಡು ಮಧು, ಈಧರೆ ಸಮತಾ ಸೇನೆ, ರೈತ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮಾನವ ಹಕ್ಕುಗಳು ಮತ್ತು ಸಂಸ್ಕೃತಿ ರಕ್ಷಣಾ ಸಮಿತಿ, ಮೃತೆ ಮೌನಿಕಾ ಕುಟುಂಬದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Protesters Demand Justice for Pregnant Woman Who Died Due to Negligence of Doctors and Staff

Sidlaghatta : A protest march was held in the town on Monday by members of various organizations, demanding justice for Maunika, a pregnant woman who died due to alleged negligence by doctors and staff at Sidlaghatta Government Hospital and District Hospital.

Led by Edhare Samata Sena president Edhare Tirumala Prakash, protesters demanded the dismissal of the guilty doctors and nurses. According to Mr. Prakash, Maunika was admitted to the Sidlaghatta Government Hospital on January 13. Inexperienced nurses tried to deliver the baby in the absence of a doctor, using mobile guidance, which resulted in excessive bleeding. Despite being admitted to the district hospital, Maunika died due to a lack of timely treatment.

The investigation report about Maunika’s death has stated that it occurred due to the negligence of doctors and staff, but no action has been taken against those responsible. The protesters are now demanding the immediate suspension and dismissal of the doctor and staff involved, as well as action against the district hospital for dereliction of duty.

In addition, protesters are calling for an emergency blood fund center to be opened for patients in the Sidlaghatta Government Hospital and for the government to provide compensation of Rs 25 lakh to Maunika’s family.

Various organizations and individuals participated in the protest, including members of the Raita Haak Karnataka State Farmers Association, Green Sena, Human Rights and Culture Defense Committee, and the family of deceased Maunika.

The protesters have warned that if their demands are not met, they will hold an indefinite dharna in the premises of the district administration office. The tragic death of Maunika has sparked outrage and highlighted the need for accountability and reform in the healthcare system.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!