ಚಿಕ್ಕಬಳ್ಳಾಪುರ ನವ ಜೀವನ ಸೇವಾ ಸಂಸ್ಥೆ, ರೋಟರಿ ಅಲಸೂರು ಬೆಂಗಳೂರು ಮತ್ತು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಇ ಪ್ರೊಜೆಕ್ಟರ್, ಟ್ಯಾಬ್ ಮತ್ತು ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು
ತಾಲ್ಲೂಕಿನ ದೊಡ್ಡತೇಕಹಳ್ಳಿ ಪ್ರೌಢಶಾಲೆಗೆ ಒಂದು ಇ ಪ್ರೊಜೆಕ್ಟರ್ ಮತ್ತು 5 ಟ್ಯಾಬ್ ಗಳನ್ನು, ಬೆಳ್ಳೂಟಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಸ್ಟೇಷನರಿ ವಸ್ತುಗಳನ್ನು, ಮೇಲೂರಿನ ಪ್ರೌಢ ಶಾಲಾ ಮಕ್ಕಳಿಗೆ 3 ಟ್ಯಾಬ್ ಮತ್ತು ಪುಸ್ತಕ ಹಾಗೂ ಸ್ಟೇಷನರಿ ವಸ್ತುಗಳನ್ನು ವಿತರಣೆ ಮಾಡಲಾಯಿತು
ರೋಟರಿ ಕ್ಲಬ್ಬಿನ ಅಧ್ಯಕ್ಷ ಆರ್.ಪಿ. ಶೆಟ್ಟಿ, ನವಜೀವನ ಸೇವಾ ಸಂಸ್ಥೆ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಕಾರ್ಯದರ್ಶಿ ಕೆ.ಪಿ.ರವಿ, ಖಜಾಂಚಿ ರಾಮಚಂದ್ರ ಹಾಗೂ ವಿ.ಆರ್. ಡಬ್ಲ್ಯು ನಾಗೇಶ್, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಎಸ್ ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಬೆಳ್ಳೂಟಿ ಗ್ರಾಮ ಪಂಚಾಯಿತಿಯ ಸದಸ್ಯ ಸಂತೋಷ್, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಹಾಜರಿದ್ದರು