101 ಸಹಕಾರಿಗಳಲ್ಲಿ ಇಬ್ಬರು: ಚಂದ್ರೇಗೌಡ, ಎನ್.ಆರ್. ನಿರಂಜನ್ಗೆ ಸಹಕಾರ ರತ್ನ ಪ್ರಶಸ್ತಿ

Sidlaghatta : ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ, ಹಾಪ್ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಂಡಳಿ ನಿರ್ದೇಶಕ ಎನ್.ಆರ್. ನಿರಂಜನ್ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಸಹಕಾರ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ರಾಜ್ಯದ 101 ಸಹಕಾರಿಗಳಲ್ಲಿ ಇಬ್ಬರು
ಬೆಂಗಳೂರಿನಲ್ಲಿ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ನಡೆದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ರಾಜ್ಯದ 101 ಸಹಕಾರಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ತಾಲ್ಲೂಕಿನ ಮುತ್ತೂರು ಗ್ರಾಮದ ಚಂದ್ರೇಗೌಡ ಮತ್ತು ಎನ್.ಆರ್. ನಿರಂಜನ್ ಸ್ಥಾನ ಪಡೆದಿದ್ದಾರೆ.
ಇಬ್ಬರ ಸೇವೆ
ಮುತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಸಹಕಾರ ಕ್ಷೇತ್ರ ಪ್ರವೇಶಿಸಿದ ಚಂದ್ರೇಗೌಡ ಅವರು ಕಳೆದ ಮೂರು ದಶಕಗಳಿಂದ ವಿವಿಧ ಹಂತಗಳಲ್ಲಿ ಸಹಕಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸುದೀರ್ಘ ಸೇವೆಯನ್ನು ಗುರುತಿಸಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಂಡಳಿಯ ನಿರ್ದೇಶಕರಾಗಿರುವ ಎನ್.ಆರ್. ನಿರಂಜನ್ ಅವರು ಕಳೆದ ಎರಡು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರಿಗೂ ‘ಸಹಕಾರ ರತ್ನ’ ಪ್ರಶಸ್ತಿ ಒಲಿದಿದೆ.
ಸಂಬಂಧಿತ ಸುದ್ದಿ: 73ನೇ ಸಹಕಾರ ಸಪ್ತಾಹ: ಠೇವಣಿ, ವ್ಯವಹಾರ ಸಹಕಾರ ಬ್ಯಾಂಕ್ನಲ್ಲೇ ಇರಲಿ ಎಂದು ರೈತರಿಗೆ ಮನವಿ | ದಿನಕ್ಕೆ 750 ಲೀಟರ್ ಹಾಲು: ಹಾಲು ಉತ್ಪಾದಕರ ಸಂಘಕ್ಕೆ ಹೊಸ ಮೇಲಂತಸ್ತಿನ ಕಟ್ಟಡ

For Daily Updates WhatsApp ‘HI’ to 7406303366
Summary in English
HOPCOMS president Muttur Chandregowda and Karnataka State Cooperative Housing Board director N.R. Niranjan have been honoured with the 2026 state-level ‘Sahakara Ratna’ award for their significant service to the cooperative sector. Chief Minister D.K. Shivakumar presented the awards at the 73rd All India Cooperative Week programme organised by the State Cooperative Federation in Bengaluru. A total of 101 cooperators from across the state were selected, including both men from the taluk. Chandregowda began as a director of the Muttur Milk Producers Cooperative Society and has been active in cooperative work for three decades, while Niranjan has served the sector for two decades.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



