ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನ ಕೊಲೆ ಪ್ರಕರಣ – 8 ಜನರ ಬಂಧನ


ಶಿಡ್ಲಘಟ್ಟ ನಗರದ ಪೊಲೀಸ್ ಠಾಣೆಯ ಬಳಿ ಶನಿವಾರ ಮಾರಕಾಸ್ತ್ರಗಳಿಂದ ಹತ್ಯೆಗೀಡಾದ ತಾಲ್ಲೂಕಿನ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಅಮ್ಜದ್ ಖಾನ್ (45) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾದ ಒಟ್ಟು 8 ಜನರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.


ಕೊಲೆ ಘಟನಾ ಸ್ಥಳದಲ್ಲಿದ್ದರೆನ್ನಲಾದ ರಘು ಅಲಿಯಾಸ್ ರಾಘವೇಂದ್ರ, ಗೂಳಿ ಅಲಿಯಾಸ್ ಅಕ್ಷಯ್, ಶ್ರೀನಾಥ್, ಪವನ್ (ಓಮ್ನಿ ಚಾಲಕ) ಹಾಗೂ ಹತ್ಯೆಯಾದ ವ್ಯಕ್ತಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರೆನ್ನಲಾದ ಅಮಿತ್, ಚವಾಣ್ ಅಲಿಯಾಸ್ ರೋಷನ್, ಕಲ್ಲು ಅಲಿಯಾಸ್ ಕಲಂದರ್, ಡಾಂಬರ್ ಮೌಲಾ ರನ್ನು ಪೊಲೀಸರು ಬಂಧಿಸಿದ್ದಾರೆ.