Plastic ಕವರ್‌ಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

0
552
Sidlaghatta Plastic Fine

Sidlaghatta : ಶಿಡ್ಲಘಟ್ಟ ನಗರದಲ್ಲಿ ಸೋಮವಾರ ನಡೆದ ವಾರದಸಂತೆಯಲ್ಲಿ Plastic ಕವರ್ ಹಾಗೂ ಪ್ಲಾಸ್ಟಿಕ್ ವಸ್ತುಗಳ ಮೇಲೆ ಕಣ್ಣಿಟ್ಟಿದ್ದ ನಗರಸಭೆ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ಅವುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ (Fine) ವಿಧಿಸಿದರು.

ಶಿಡ್ಲಘಟ್ಟ ನಗರಸಭೆಯ ಆರೋಗ್ಯ ನಿರೀಕ್ಷಕ ಮುರಳಿ, ಕಂದಾಯ ಅಧಿಕಾರಿ ನಾಗರಾಜ್, ಎಫ್‌ಡಿಎ ರಾಜೇಶ್ ಹಾಗೂ ಸಿಬ್ಬಂದಿಯು ವಾರದ ಸಂತೆಗೆ ತೆರಳಿ ಪರಿಶೀಲಿಸಿದರು.

ನಿಷೇಧಿತ ಪ್ಲಾಸ್ಟಿಕ್ ಕವರ್ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡದಂತೆ ಅರಿವು ಮೂಡಿಸುವ ಜತೆಗೆ ಮಾರಾಟ ಮಾಡುತ್ತಿದ್ದ ಸುಮಾರು 10 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು 7 ಸಾವಿರ ರೂ ದಂಡ ವಿಧಿಸಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!