
Sidlaghatta : ಶಿಡ್ಲಘಟ್ಟ ನಗರದ ಸಿದ್ದಾರ್ಥನಗರದಲ್ಲಿ ಊರ ಜಾತ್ರೆ ನಡೆಯಿತು. ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಊರ ಪ್ರದಕ್ಷಿಣೆ ನಡೆಸಿ ಕೊನೆಗೆ ಗ್ರಾಮ ದೇವತೆ ಶ್ರೀಪೂಜಮ್ಮ ದೇವಿ, ಶ್ರೀನಾಗಲಮುದ್ದಮ್ಮ ದೇವಿ ಹಾಗೂ ಕೋಟೆ ಶ್ರೀಸೋಮೇಶ್ವರ ಸ್ವಾಮಿಗೆ ತಂಬಿಟ್ಟು ದೀಪದಾರತಿ ಬೆಳಗಿದರು.
ಊರ ಜಾತ್ರೆಗಾಗಿ ಇಡೀ ಸಿದ್ದಾರ್ಥ ನಗರವು ಸಿಂಗಾರಗೊಂಡಿತು. ಜಾತ್ರೆಯ ಕಳೆ ಕಟ್ಟಿತ್ತು. ಊರ ದೇವತೆಗಳಾದ ಶ್ರೀಗಂಗಮ್ಮ ಮತ್ತು ಶ್ರೀಪೂಜಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ತಲೆ ಮೇಲೆ ತಂಬಿಟ್ಟು ದೀಪಗಳನ್ನೊತ್ತ ಮಹಿಳೆಯರು, ಹೆಣ್ಣು ಮಕ್ಕಳು ಊರ ಪ್ರಮುಖ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕಿದರು.
ಡೋಲು ತಮಟೆ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಕೋಟೆ ವೃತ್ತಕ್ಕೆ ತೆರಳಿ ಅಲ್ಲಿ ಕೋಟೆ ಶ್ರೀಸೋಮೇಶ್ವರ ದೇವಾಲಯದಲ್ಲಿ ತಂಬಿಟ್ಟಿನ ದೀಪದ ಆರತಿ ಬೆಳಗಲಾಯಿತು.