Home News ಕ್ರೀಡಾ ಪರಿಕರಗಳ ವಿತರಣೆ

ಕ್ರೀಡಾ ಪರಿಕರಗಳ ವಿತರಣೆ

0
Sidlaghatta Sports Equipments Distribution

Sidlaghatta : ವಿದ್ಯಾರ್ಥಿ ಮತ್ತು ಯುವಜನರು ದಿನ ನಿತ್ಯದ ಓದು, ಬರಹ, ಬದುಕಿನ ಚಟುವಟಿಕೆಗಳ ಜತೆಗೆ ಕ್ರೀಡೆಯಂತ ದೈಹಿಕ ಕಸರತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕೆಂದು ರಾಷ್ಟ್ರೀಯ ಕ್ರೀಡಾಪಟು ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಜಯಂತಿಗ್ರಾಮ(ದ್ಯಾವಪ್ಪನಗುಡಿ)ದ ಯುವಕರಿಗೆ ವಾಲೀಬಾಲ್ ಆಟದ ಕಿಟ್ ಸೇರಿದಂತೆ ವಿವಿಧ ಆಟಗಳ ಪರಿಕರಗಳ ಕಿಟ್‌ ನ್ನು ವಿತರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲಸ ಕಾರ್ಯಗಳ ಒತ್ತಡದ ನಡುವೆ ದೈಹಿಕ ಕಸರತ್ತು ಕಡಿಮೆ ಆಗುತ್ತಿದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಿ ನಾನಾ ರೋಗ ರುಜುನಗಳಿಗೆ ತುತ್ತಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಳ್ಳುವಂತೆ ಸಲಹೆ ನೀಡಿದರು.

ಗ್ರಾಮದ ಯುವಕರಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಮುಖಂಡ ಬೈರೇಗೌಡ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version