Sidlaghatta : ಗುರುವಾರ May 19 SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶಿಡ್ಲಘಟ್ಟ ನಗರದ ಬಿ ಜಿ ಎಸ್ ಶಾಲೆಯ (BGS School) ಹರ್ಷಿತಾ ಜಿ (Harshitha G) 625 ಕ್ಕೆ 625 ಅಂಕಗಳನ್ನು ಪಡೆದು ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆಗಷ್ಟೇ ಅಲ್ಲದೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರಲ್ಲಿ (Topper) ಒಬ್ಬರಾಗಿದ್ದಾರೆ.
ಈ ಬಾರಿ 1268 ಹುಡುಗರು, 1250 ಹುಡುಗಿಯರು ಸೇರಿ ಒಟ್ಟು 2518 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2454 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.