Home News ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗಧಿಪಡಿಸಿದ ತಾಲ್ಲೂಕು ಆಡಳಿತ

ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗಧಿಪಡಿಸಿದ ತಾಲ್ಲೂಕು ಆಡಳಿತ

0
Sidlaghatta Taluk Office

ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರ ಭೇಟಿಯ ಸಮಯವನ್ನು ಮದ್ಯಾಹ್ನ 3.30 ರಿಂದ ಸಂಜೆ 5.30ಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದ್ದಾರೆ.

ನಾಗರಿಕರಿಗೆ ಉತ್ತಮ ಸೇವೆಯನ್ನು ಸಕಾಲಕ್ಕೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದ್ದು, ಕಂದಾಯ ಇಲಾಖೆಯು ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಾರ್ವಜನಿಕರು ಅಹವಾಲುಗಳನ್ನು ಸ್ವೀಕರಿಸಲು ಮತ್ತು ಮಾಹಿತಿಯನ್ನು ಪಡೆಯಲು ಸಾರ್ವಜನಿಕರು ನೇರವಾಗಿ ನಿರ್ವಾಹಕರನ್ನು ಮತ್ತು ಅಧಿಕಾರಿಗಳನ್ನು ಭೇಟಿಯಾಗಿ ಅವರ ಸಮಸ್ಯೆಯ ಬಗ್ಗೆ ಚರ್ಚಿಸಲು ಅವಕಾಶವನ್ನು ಕಲ್ಪಿಸುವ ಉದ್ದೆಶದಿಂದ ಪ್ರತಿನಿತ್ಯ ಮದ್ಯಾಹ್ನ 3.30 ರಿಂದ ಸಂಜೆ 5.30 ರವರೆಗೂ ಸಮಯ ನಿಗಧಿಪಡಿಸಲಾಗಿದೆ.

 ದಿನವಿಡೀ ಸಾರ್ವಜನಿಕರು ಕಚೇರಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ತಮ್ಮ ಕಡತದ ಬಗ್ಗೆ ಮಾಹಿತಿಯನ್ನು ಪಡೆಯುವುದರಿಂದ ವಿಷಯ ನಿರ್ವಾಹಕರ ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾಗುತ್ತಿದ್ದು, ಸಾರ್ವಜನಿಕರ ಸೇವೆಯನ್ನು ನಿಗಧಿತ ಸಮಯದಲ್ಲಿ ನೀಡುವುದು ಅಸಾಧ್ಯವಾಗುತ್ತಿದೆ.

 ಉಳಿದಂತೆ ಟಪಾಲು ಶಾಖೆ, ಸಕಾಲ ಅರ್ಜಿ ಸ್ವೀಕೃತಿ, ಭೂಮಿ ಅರ್ಜಿ ಸ್ವೀಕೃತಿ, ಫಹಣಿ ವಿತರಣೆ ಮತ್ತು ನಾಡ ಕಚೇರಿ ಸೇವೆಗಳಿಗೆ ಸಂಬಂಧಿಸಿದಂತೆ ಯತಾಸ್ಥಿತಿಯಂತೆ ಕೌಂಟರ್ ಗಳು ಬೆಳಗ್ಗೆ 10 ರಿಂದ ಸಾಯಂಕಾಲ 5.30 ರವರೆಗೂ ಕಾರ್ಯನಿರ್ವಹಿಸುತ್ತದೆ.

 ಈ ಬದಲಾವಣೆಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಮನವಿ ಮಾಡಿದ್ದಾರೆ.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version