ಶಿಡ್ಲಘಟ್ಟ ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದ ಜಮೀನೊಂದರಲ್ಲಿ ರಾತ್ರೋ ರಾತ್ರಿ ಅನುಮಾನಾಸ್ಪದವಾಗಿ ಸುಮಾರು ಆರು ಅಡಿಯ ವೃತ್ತಾಕಾರದ ಗುಂಡಿ ತೋಡಿ ವಾಮಾಚಾರ ಮಾಡಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಶೀಗೇಹಳ್ಳಿ ಗ್ರಾಮದ ಬಳಿ ನಡೆದಿದೆ.
ಶೀಗೆಹಳ್ಳಿ ಗ್ರಾಮದ ನಿವಾಸಿ ಮುನಿರಾಜು ಎಂಬುವರು ರಾಗಿ ಬಿತ್ತನೆ ಮಾಡಿರುವ ತಮ್ಮ ಹೊಲದ ಜಮೀನಿನಲ್ಲಿ ರಾತ್ರೋ ರಾತ್ರಿ ಆಗಂತುಕರು ಅನುಮಾನಾಸ್ಪದವಾಗಿ ಗುಂಡಿ ತೋಡಿದ್ದು, ನಿಂಬೆಹಣ್ಣು, ಅರಿಶಿಣ, ಕುಂಕುಮ ಬಳಸಿ ವಾಮಾಚಾರ ಮಾಟ ಮಂತ್ರ ಮಾಡಿರುವುದು ನಿಧಿಗಳ್ಳರು ನಿಧಿ ಶೋಧ ಮಾಡಿರುವ ಶಂಖೆ ವ್ಯಕ್ತವಾಗುತ್ತಿದೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.