ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನದ ಆಂಗ್ಲ ಭಾಷೆಯ ಪರೀಕ್ಷೆಯನ್ನು 2,398 ವಿದ್ಯಾರ್ಥಿಗಳು ಬರೆದರು. ಅವರಲ್ಲಿ 1,182 ಹೆಣ್ಣುಮಕ್ಕಳು ಮತ್ತು 1,216 ಗಂಡುಮಕ್ಕಳಿದ್ದರು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 2,479 ವಿದ್ಯಾರ್ಥಿಗಳಲ್ಲಿ 81 ಜನ ಗೈರಾಗಿದ್ದರು.
ತಾಲ್ಲೂಕಿನ ಜಂಗಮಕೋಟೆಯ ಕಂಟೈನ್ ಮೆಂಟ್ ಪ್ರದೇಶದಿಂದ ಆರು ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಅವರಿಗೆ ಪರೀಕ್ಷೆಯನ್ನು ಬರೆಯಲು ಬೇರೆಡೆ ಸ್ಥಳಾವಕಾಶ ಮಾಡಿಕೊಡಲಾಗಿತ್ತು. 50 ಮಂದಿ ವಲಸೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು.
ಕೆ.ಪಿ.ಎಸ್.ಬಶೆಟ್ಟಹಳ್ಳಿ, 11 ನೇ ಮೈಲಿಯ ಮೊರಾರ್ಜಿ ದೇಸಾಯಿ ಪ್ರೌಢಶಾಲೆ, ಮೇಲೂರು ಸರ್ಕಾರಿ ಪ್ರೌಢಶಾಲೆ, ಎಚ್.ಕ್ರಾಸ್. ಸುಮುಖ ಪ್ರೌಢಶಾಲೆ, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ, ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆ, ಡಾಲ್ಫಿನ್ ಪ್ರೌಢಶಾಲೆ, ಕದಿರಿನಾಯಕನಹಳ್ಳಿ ಎಸ್.ಆರ್.ಇ.ಟಿ ಪ್ರೌಢಶಾಲೆ, ಬಿ.ಜಿ.ಎಸ್. ಪ್ರೌಢಶಾಲೆ ಮತ್ತು ವಾಸವಿ ಪ್ರೌಢಶಾಲೆ ಸೇರಿದಂತೆ ಒಟ್ಟು ಹತ್ತು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಫೌಜಿಯಾ ತರನ್ನುಮ್ ಅವರು ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರೀಕ್ಷಾ ಸೌಕರ್ಯಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚು ಗಮನ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
- Advertisement -
- Advertisement -
- Advertisement -