31.1 C
Sidlaghatta
Friday, March 1, 2024

ಯುವಪೀಳಿಗೆಯಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ, ದೇಶ ಸೇವೆ ಕಲಿಸಬೇಕು

- Advertisement -
- Advertisement -

Sugaturu, Sidlaghatta : ಚಿಕ್ಕವಯಸ್ಸಿನಿಂದಲೇ ದೇಶಪ್ರೇಮ, ರಾಷ್ಟ್ರಭಕ್ತಿ, ಪ್ರಜಾಪ್ರಭುತ್ವದ ಅಂಶಗಳ ಅರಿವು ಮಕ್ಕಳಲ್ಲಿ ಬೆಳೆಸಬೇಕು. ಯುವಪೀಳಿಗೆಯೇ ದೇಶದ ಆಸ್ತಿ. ಸಮಗ್ರ ಭಾರತದಲ್ಲಿ ದೇಶವ್ಯಾಪಿ ಅನ್ವಯವಾಗಬಹುದಾದ, ರಾಷ್ಟ್ರಕ್ಕಿರುವ ಏಕರೂಪದ ಕಾನೂನನ್ನು ಎಲ್ಲರೂ ಗೌರವಿಸಬೇಕು, ದೇಶ ಭಕ್ತಿ, ಭಾವೈಕ್ಯತೆಯಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಬೆಳೆಯಬೇಕು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಂವಿಧಾನಜಾಗೃತಿ, ಲೇಖನ ಪರಿಕರಗಳ ಮತ್ತು ಬಹುಮಾನ ವಿತರಣಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬ ನಾಗರಿಕನಲ್ಲಿಯೂ ಸಂವಿಧಾನದಡಿ ನಿಗದಿಯಾಗಿರುವ ಮೂಲಹಕ್ಕು ಮತ್ತು ಕರ್ತವ್ಯಗಳ ಅರಿವು ಇರಬೇಕು. ಯುವಪೀಳಿಗೆಯಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ, ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಹ ಗುಣಗಳನ್ನು ಕಲಿಸಬೇಕಿದೆ. ಭಾರತದ ಲಿಖಿತ ಸಂವಿಧಾನವು ಇಡೀ ಪ್ರಪಂಚದಲ್ಲಿಯೇ ಅಪೂರ್ವವಾದುದಾಗಿದೆ. ಅದ್ಬುತವಾದ ಪ್ರಜಾತಂತ್ರ ವ್ಯವಸ್ಥೆ, ವಿವಿಧತೆಯಲ್ಲಿ ಏಕತೆಯ, ಭಾತೃತ್ವದ ರಾಷ್ಟ್ರವೆಂಬುದೇ ನಮ್ಮ ಹೆಮ್ಮೆ ಎಂದರು.

ವಿದ್ಯಾರ್ಥಿನಿ ಎಸ್.ಎನ್.ವಿದ್ಯಾಶ್ರೀ ಮಾತನಾಡಿ, ಸಂವಿಧಾನವೆಂಬುದು ರಾಜಕೀಯ ಕ್ರಾಂತಿಯ ಉತ್ಪನ್ನವಲ್ಲ. ಅದು ಪ್ರಜಾಪ್ರತಿನಿಧಿಗಳ ಸಂಶೋಧನಾತ್ಮಕ ಮತ್ತು ಪ್ರಚಲನಾತ್ಮ ಸೃಷ್ಟಿಯಾಗಿತ್ತು ಎಂದರು.

ವಿದ್ಯಾರ್ಥಿನಿ ಮೇಘನಾ ಮಾತನಾಡಿ, ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಸಂಶೋಧಿಸಿ ಪ್ರಚುರಪಡಿಸಿದ ನಿಯಮಗಳ ಸಂಹಿತೆಯೇ ಸಂವಿಧಾನ ಎಂದರು.

ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ, ವಿವಿಧ ಸ್ಪರ್ಧಾವಿಜೇತರಿಗೆ ಪ್ರಶಸ್ತಿಪತ್ರ, ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ವರ್ಣಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಧ್ವಜಾರೋಹಣ, ಧ್ವಜವಂದನೆ, ಪಥಸಂಚಲನ, ಗ್ರಾಮದಲ್ಲಿ ಪ್ರಭಾತ್‌ಭೇರಿ, ಮೆರವಣಿಗೆ ನಡೆಯಿತು.

ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಪಂಚಾಯಿತಿ ಸದಸ್ಯ ಎಸ್.ಎ.ಸತೀಶ್‌ಕುಮಾರ್, ಎಂ.ನಾಗರಾಜು, ಶಿವಶಂಕರಪ್ಪ, ದೇವರಾಜು, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಭಾಗ್ಯಮ್ಮ ಅರುಣ್‌ಕುಮಾರ್, ಎಸ್‌.ಡಿ.ಎಂ.ಸಿ ಸದಸ್ಯ ನಾಗರಾಜು, ಎಸ್.ಎಲ್.ನಾರಾಯಣಸ್ವಾಮಿ, ನಾಗೇಂದ್ರ, ನಾಗೇಶ್, ಸಂತೋಷ್, ಸದಸ್ಯೆ ಬಿ.ಎನ್.ಮಂಜುಳಾ, ಆರತಿ, ನಾಗವೇಣಿ, ಮಾಜಿ ಸದಸ್ಯ ಎಸ್.ಆರ್.ನಾಗೇಶ್, ಚಿಕ್ಕಮುನಿವೆಂಕಟಶೆಟ್ಟಿ, ನಾರಾಯಣಸ್ವಾಮಿ, ಗ್ರಾಮಸ್ಥರು, ಶಿಕ್ಷಕವರ್ಗದವರು ಹಾಜರಿದ್ದರು.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!