23.3 C
Sidlaghatta
Sunday, October 12, 2025

ಬುಸುಗುಡುವ ಮಿಡಿನಾಗರನ ರಕ್ಷಣೆ

- Advertisement -
- Advertisement -

ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಕೆ.ವಿ.ಮಂಜುನಾಥ್ ಅವರ ತೋಟದ ಸಂಪಿನಲ್ಲಿ ಬಿದ್ದಿದ್ದ ಮಿಡಿನಾಗರವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ಭಾನುವಾರ ರಕ್ಷಿಸಿದ್ದಾರೆ.

ಹೆಡೆಯೆತ್ತಿ ಬುಸುಗುಡುತ್ತಿರುವ ಮಿಡಿನಾಗರ

ನೀರಿನ ಸಂಪಿನಲ್ಲಿದ್ದ ವಿಪರೀತ ಚಟುವಟಿಕೆಯುಳ್ಳ ಮರಿ ನಾಗರವನ್ನು ರಕ್ಷಿಸಿ ಸ್ನೇಕ್ ನಾಗರಾಜ್ ಅದನ್ನು ಕೊತ್ತನೂರಿನ ಹೊರವಲಯದ ಕಾಡಿನಲ್ಲಿ ಬಿಟ್ಟರು.
ನಾಗರ ಹಾವಿನ ಮರಿಯನ್ನು ಮಿಡಿನಾಗರ, ಎನ್ನಾಗರ, ನಿನ್ನಾಗು ಎಂದು ಕರೆಯುವರು. ಮರಿನಾಗರಗಳಲ್ಲಿ ಚೆನ್ನಾಗಿ ರೂಪುಗೊಂಡ ಹೆಡೆಯುಂಟು. ಇವು ತಮ್ಮ ತಂದೆತಾಯಿಗಳಿಗಿಂತ ಹೆಚ್ಚು ಆಕ್ರಮಣ ಪ್ರವೃತ್ತಿಯುಳ್ಳವು. ವಿಷಪೂರಿತವಾದ ಈ ಹಾವು ಉದ್ರೇಕಗೊಂಡು ಕತ್ತಿನ ಭಾಗದ ಪಕ್ಕೆಲಬುಗಳನ್ನು ಮೇಲಕ್ಕೆ ಎತ್ತುವ ಮೂಲಕ ಕತ್ತಿನ ಸುತ್ತ ಸಡಿಲವಾಗಿ ಅಂಟಿಕೊಂಡಿರುವ ಚರ್ಮವನ್ನು ಅಗಲವಾದ ಹೆಡೆಯಾಗಿ ಹರಡುತ್ತಾ ಬುಸುಗುಡುತ್ತಿತ್ತು.
ಹೆಡೆಯೆತ್ತಿ ಬುಸುಗುಡುತ್ತಿರುವ ಮಿಡಿನಾಗರ

‘ನಾಗರಹಾವು ವಿಷಪೂರಿತವಾದರೂ ರೈತನಿಗೆ ಮಾರಕವಾದ ಇಲಿ, ಹೆಗ್ಗಣಗಳನ್ನು ಬೇಟೆಯಾಡಿ ಉಪಕಾರಿಯಾಗಿದೆ. ಇದು ನೀರಿನಲ್ಲಿ ಚೆನ್ನಾಗಿ ಈಜಬಲ್ಲದು. ಆದರೆ ಸಂಪಿನಿಂದ ಹೊರಬರಲಾಗುತ್ತಿರಲಿಲ್ಲ. ಆಹಾರವಿಲ್ಲದೆ ಸಾಯುತ್ತಿತ್ತು. ಅದಕ್ಕಾಗಿ ಅದನ್ನು ಅಲ್ಲಿಂದ ತೆಗೆದು ಸುರಕ್ಷಿತ ಸ್ಥಳದಲ್ಲಿ ಬಿಟ್ಟೆ’ ಎಂದು ಸ್ನೇಕ್‌ ನಾಗರಾಜ್‌ ತಿಳಿಸಿದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!