28.1 C
Sidlaghatta
Saturday, November 1, 2025

ಕುಂದಲಗುರ್ಕಿ ಬೆಟ್ಟದ ಶ್ರೀ ವರದಾಂಜನೇಯಸ್ವಾಮಿ ದೇವಾಲಯ | Kundalagurki Sri Varadanjaneya Swamy Temple

- Advertisement -
- Advertisement -

Kundalagurki, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಮೇಲಿರುವ ಐತಿಹಾಸಿಕ ಶ್ರೀ ವರದಾಂಜನೇಯಸ್ವಾಮಿ ದೇವಾಲಯವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಈಗ ಅಧಿಕೃತ ಪ್ರವಾಸಿ ತಾಣವಾಗಿ ಗುರುತಿಸಿದೆ. ಇದರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನ ಪ್ರವಾಸಿ ತಾಣಗಳ ಸಂಖ್ಯೆ ಎಂಟಕ್ಕೇರಿದೆ.

ಬೆಟ್ಟದ ಮೇಲಿರುವ ವರದಾಂಜನೇಯಸ್ವಾಮಿ ದೇವಾಲಯಕ್ಕೆ ಪ್ರತಿದಿನವೂ ಅನೇಕ ಭಕ್ತರು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಸುಗಮ ರಸ್ತೆ, ಕುಡಿಯುವ ನೀರು, ನೆರಳು, ವಿದ್ಯುಚ್ಛಕ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿರೀಕ್ಷಿಸಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈಗಾಗಲೇ ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯ, ಬಶೆಟ್ಟಹಳ್ಳಿಯ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯ, ಸಾದಲಿಯ ಸಾದಲಮ್ಮ ದೇವಿ ದೇವಾಲಯ, ಗಂಗಮ್ಮ ದೇವಾಲಯ, ಸಾದಲಿಯ ರಾಮಸಮುದ್ರ ಕೆರೆ, ಒಂಟೂರಿನ ಶ್ರೀ ಅನಂತಪದ್ಮನಾಭ ದೇವಾಲಯವಿರುವ ಒಡೆಯನ ಕೆರೆ ಮುಂತಾದವು ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಈಗ ಕುಂದಲಗುರ್ಕಿ ಬೆಟ್ಟದ ಶ್ರೀ ವರದಾಂಜನೇಯಸ್ವಾಮಿ ದೇವಾಲಯವೂ ಅವುಗಳಲ್ಲಿ ಸ್ಥಾನ ಪಡೆದಿದೆ.

ಸುಂದರ ಪರಿಸರದ ಮಧ್ಯೆ ಬೆಟ್ಟದ ದೇವಾಲಯ

Sidlaghatta Kundalagurki Hill Sri Varadanjaneya Swamy Temple

ಕುಂದಲಗುರ್ಕಿ ಗ್ರಾಮಕ್ಕೆ ಅಂಟಿಕೊಂಡಂತೆ ಇರುವ ಈ ಬೆಟ್ಟದ ಮೇಲಿರುವ ಶ್ರೀ ವರದಾಂಜನೇಯಸ್ವಾಮಿ ದೇವಾಲಯ ಶಾಂತ ವಾತಾವರಣ ಮತ್ತು ಹಸಿರಿನಿಂದ ಕೂಡಿದ ಆಕರ್ಷಕ ತಾಣವಾಗಿದೆ. ಬೆಟ್ಟದ ಮೇಲಿರುವ ದೇವಾಲಯಕ್ಕೆ ಮೆಟ್ಟಿಲುಗಳ ಮೂಲಕ ಹೋಗುವ ವ್ಯವಸ್ಥೆಯಿದ್ದು, ತಪ್ಪಲಿನಲ್ಲಿ ಸಮುದಾಯ ಭವನವೂ ಇದೆ.

ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ನೂರಾರು ಭಕ್ತರು ಭಾಗವಹಿಸುತ್ತಾರೆ. ವಾರದ ಎಲ್ಲಾ ದಿನಗಳಲ್ಲೂ ನಿತ್ಯ ಪೂಜೆ ನಡೆಯುತ್ತದೆ.

ಬೆಟ್ಟದ ಸುತ್ತಲೂ ಹಸಿರು ಗಿರಿಧಾಮದ ಸೌಂದರ್ಯ ತುಂಬಿದ್ದು, ಇದು ಪ್ರಾಕೃತಿಕವಾಗಿ, ಧಾರ್ಮಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವಪೂರ್ಣ ತಾಣವಾಗಿದೆ.

ಕುಂದಲಗುರ್ಕಿಯ ಐತಿಹಾಸಿಕ ಉಲ್ಲೇಖ

ಕುಂದಲಗುರ್ಕಿಯ ಉಲ್ಲೇಖ ಕ್ರಿ.ಶ. 810ರ ನಂದಿ ತಾಮ್ರಶಾಸನದಲ್ಲಿ ದೊರೆಯುತ್ತದೆ. ರಾಣಿ ರತ್ನಾವಳಿಯು ಭೋಗನಂದೀಶ್ವರ ದೇವಾಲಯವನ್ನು ನಿರ್ಮಿಸಿದಾಗ ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಗೋವಿಂದನು ಕುಂದಲಗುರ್ಕಿ ಹಾಗೂ ಕನ್ನಮಂಗಲ ಸೇರಿದಂತೆ ಹಲವು ಪ್ರದೇಶಗಳನ್ನು ದಾನವಾಗಿ ನೀಡಿದ್ದಾನೆ. ಇದು ಆ ಕಾಲದ ಸಾಂಸ್ಕೃತಿಕ ವಿನಿಮಯ ಮತ್ತು ಧಾರ್ಮಿಕ ಶ್ರೀಮಂತಿಕೆಯ ಸಾಕ್ಷಿ.

ಕುಂದಲಗುರ್ಕಿ ಬೆಟ್ಟದ ವಿಶೇಷತೆಗಳು

  • ಬೆಟ್ಟದ ಮೇಲಿರುವ ಶ್ರೀ ವರದಾಂಜನೇಯಸ್ವಾಮಿ ದೇವಾಲಯ – ಶಾಂತ, ಆಕರ್ಷಕ ಮತ್ತು ಭಕ್ತಿಪರ ವಾತಾವರಣ
  • ವರ್ಷ ಪೂರ್ತಿ ಹಸಿರಿನಿಂದ ಕೂಡಿರುವ ನೈಸರ್ಗಿಕ ಸೌಂದರ್ಯ
  • ದೇವಾಲಯದಿಂದ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಕೆರೆಗಳ ಸುಂದರ ನೋಟ
  • ಇತಿಹಾಸ ಪ್ರಸಿದ್ಧ ಶಾಸನಗಳಲ್ಲಿ ಉಲ್ಲೇಖಿತ ಪ್ರಾಚೀನ ತಾಣ
  • ವಾರದ ಪ್ರತೀ ಶನಿವಾರ ವಿಶೇಷ ಪೂಜೆ ಮತ್ತು ಭಕ್ತರ ಮಹಾಪ್ರವಾಹ
Sidlaghatta Kundalagurki Hill Sri Varadanjaneya Swamy Temple

ಪ್ರವಾಸಿಗರಿಗೆ ಸಲಹೆ:

ಕುಂದಲಗುರ್ಕಿ ಬೆಟ್ಟಕ್ಕೆ ಭೇಟಿ ನೀಡುವವರು ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ಹತ್ತುವುದು ಉತ್ತಮ. ಬೆಟ್ಟ ಹತ್ತಲು ಸಾಕಷ್ಟು ಮೆಟ್ಟಿಲುಗಳಿವೆ ಮತ್ತು ಸ್ಥಳ ಶಾಂತವಾದುದರಿಂದ ಕುಟುಂಬ ಸಮೇತ ಭೇಟಿ ನೀಡಲು ಇದು ಆದರ್ಶ ಸ್ಥಳವಾಗಿದೆ.

For Daily Updates WhatsApp ‘HI’ to 7406303366

Namma Sidlaghatta WhatsApp Channel

Namma Sidlaghatta Telegram channel

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!