ವಾಸ್ತು ಶಾಸ್ತ್ರ:
ವಾಸ್ತು ಮೂಲತಃ ಸಂಸ್ಕೃತ ಪದವಾಗಿದ್ದು ‘ವಾಸ್’ ಅಂದರೆ ವಾಸ, ‘ತು’ ಎಂದರೆ ನೀವು ಎಂಬ ಅರ್ಥ ಬರುತ್ತದೆ. ನಾವು ವಾಸಿಸುವ ಸ್ಥಳದ ಜ್ಞಾನ ಅಥವಾ ಸೂಚನೆಗಳನ್ನು ಒಳಗೊಂಡಿರುವ ಪಠ್ಯ. ಸರಳವಾಗಿ ಹೇಳುವುದಾದರೆ ವಾಸ್ತು ಶಾಸ್ತ್ರ ಎಂದರೆ ಕಟ್ಟಡವನ್ನು ನಿರ್ಮಿಸಲು ಸೂಚಿಸಲಾದ ಸೂಚನೆಗಳು.
ಇತಿಹಾಸ:
ವಾಸ್ತು ಶಾಸ್ತ್ರವು ವೈದಿಕ ಕಾಲದಿಂದಲೂ ರೂಡಿಯಲ್ಲಿದೆ, ಹಲವಾರು ಪ್ರಾಚೀನ ಗ್ರಂಥಗಳಲ್ಲಿ ವಾಸ್ತುವಿನ ಉಲ್ಲೇಖವಿದ್ದರೂ, ಮಾಯಮತ ಮತ್ತು ಮಾನಸಾರ ಗ್ರಂಥಗಳು ಪ್ರಮುಖವಾದವು. ವಾಸ್ತು ತಾಂತ್ರಿಕ ವಿಷಯವಾಗಿರುವುದರಿಂದ ಸ್ಥಪಾತಿ ಅಥವಾ ವಾಸ್ತುಶಿಲ್ಪಿಗಳಿಗೆ ಸೀಮಿತವಾಗಿ ಅವರು ಪ್ರಕೃತಿಯ ಐದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಟ್ಟಡವನ್ನು ನಿರ್ಮಿಸಲು ಹಲವಾರು ತತ್ವಗಳನ್ನು ಹಾಕಿದರು
ಅಗತ್ಯವಾದ ಅಂಶಗಳು:
ವಾಸ್ತು ಶಾಸ್ತ್ರವು ಪ್ರಮುಖವಾಗಿ ಪ್ರಕೃತಿಯ 5 ಅಂಶಗಳಾದ ಗಾಳಿ, ನೀರು, ಭೂಮಿ, ಬೆಂಕಿ ಮತ್ತು ಆಕಾಶ ಹಾಗೂ 4 ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದ ಮೇಲೆ ಆಧರಿಸಿದೆ. ಈ ಅಂಶಗಳಿಗೆ ಅನುಗುಣವಾಗಿ ನಿರ್ಮಿಸದ ಅಥವಾ 4 ದಿಕ್ಕುಗಳೊಂದಿಗೆ ಹೊಂದಿಕೆಯಾಗದ ಯಾವುದೇ ಕಟ್ಟಡವು ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಕಟ್ಟಡ ನಿರ್ಮಾಣದಲ್ಲಿ ವಾಸ್ತುವಿನ ಪ್ರಾಮುಖ್ಯತೆ:
ಸಂಕ್ಷಿಪ್ತವಾಗಿ ವಾಸ್ತುವಿನಿಂದ ಬಹಳಷ್ಟು ರೀತಿಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ, ವಾಸ್ತುವಿನಿಂದ ಕೂಡಿದ ಮನೆಗಳಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಹಾಗು ವಾಸ್ತು ತತ್ವಗಳ ಮೇಲೆ ನಿರ್ಮಿಸಲಾದ ಕಚೇರಿಗಳು, ಮಾಲ್‌ಗಳು, ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಮಾರಾಟದಲ್ಲಿ ಮತ್ತು ಉತ್ಪಾದಕತೆಯಲ್ಲಿ ಉತ್ತೇಜನವನ್ನು ಕಾಣಬಹುದು.