Home Blog Page 10

ಖಾಸಗೀಕರಣ ವಿರೋಧಿಸಿ BESCOM ನೌಕರರ ಪ್ರತಿಭಟನೆ

0
Sidlaghatta BESCOM Privatisation Protest

Sidlaghatta : BESCOM ವ್ಯಾಪ್ತಿಯಲ್ಲಿ ವಿದ್ಯುತ್ ಸೇವೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಶಿಡ್ಲಘಟ್ಟ ನಗರದಲ್ಲಿ BESCOM ನೌಕರರು, ಅಧಿಕಾರಿಗಳು ಹಾಗೂ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶಾಂತಿಯುತ ಪ್ರತಿಭಟನೆ ನಡೆಸಿದರು.

ನಗರದ ಬೆಸ್ಕಾಂ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯು ಶಿಡ್ಲಘಟ್ಟ ಉಪಭಾಗದ ಕೇಂದ್ರ ಸಮಿತಿ ಹಾಗೂ ಸ್ಥಳೀಯ ಸಮಿತಿಯ ನಿರ್ದೇಶನದಂತೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಜಿ.ಆರ್. ಶ್ರೀಧರ್ ಮಾತನಾಡಿ, ಟಾಟಾ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿರುವ ಅರ್ಜಿಯ ಮೂಲಕ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಖಾಸಗೀಕರಣದ ಮೂಲಕ ವಿದ್ಯುತ್ ಸೇವೆ ನೀಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಪ್ರಸ್ತುತ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲಾಗುತ್ತಿದೆ. ಖಾಸಗೀಕರಣ ಜಾರಿಯಾದರೆ ಸಾರ್ವಜನಿಕ ಸೇವೆಯ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಸಹಾಯಕ ಅಭಿಯಂತರ ವೇದಕಿರಣ್ ಮಾತನಾಡಿ, ಹಲವು ನೌಕರರ ತ್ಯಾಗ ಮತ್ತು ಪರಿಶ್ರಮದಿಂದ ಬೆಳೆದಿರುವ ಸರ್ಕಾರಿ ಸಂಸ್ಥೆಗಳನ್ನು ಡಿ-ಲೈಸೆನ್ಸಿಂಗ್ ಮೂಲಕ ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು. ಖಾಸಗಿ ಕಂಪನಿಗಳು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ ಹಾಗೂ ಬಡ ಜನರಿಗೆ ತೊಂದರೆ ಉಂಟಾಗಬಹುದು ಎಂದು ಎಚ್ಚರಿಸಿದರು.

ಖಾಸಗೀಕರಣದಿಂದ ಸರ್ಕಾರಿ ಸಂಸ್ಥೆಗಳ ಆದಾಯ ಕುಸಿದು ಮುಂದಿನ ದಿನಗಳಲ್ಲಿ ಬೆಸ್ಕಾಂ ಹಾಗೂ ಇತರ ಎಸ್ಕಾಂಗಳ ಸ್ಥಿತಿ ಬಿ.ಎಸ್.ಎನ್.ಎಲ್‌ನಂತಾಗುವ ಭೀತಿ ಇದೆ ಎಂದು ಹೇಳಿದರು.

ಪ್ರತಿಭಟನಾಕಾರರು, ಖಾಸಗೀಕರಣದಿಂದ ಸಾರ್ವಜನಿಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುವ ಸಾಧ್ಯತೆ ಇದ್ದು, ನೌಕರರ ಸೇವಾ ಭದ್ರತೆಯೂ ಹದಗೆಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಅಧ್ಯಕ್ಷ ಡಿ.ಎನ್. ಶ್ರೀನಿವಾಸ್, ಕಾರ್ಯದರ್ಶಿ ಜಿ.ಆರ್. ಶ್ರೀಧರ್, ಸಹಾಯಕ ಅಭಿಯಂತರ ವೇದಕಿರಣ್, ಆರ್.ಸಿ. ಅನಂತ್ ಗೌಡ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಿ. ಕೃಷ್ಣಪ್ಪ, ಕಾರ್ಯದರ್ಶಿ ನಾಗಪ್ಪ, ತಾಲ್ಲೂಕು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ಜಿ. ಶಶಿಕುಮಾರ್, ಕಾರ್ಯದರ್ಶಿ ನಾಗರಾಜ್, ಜಿಲ್ಲಾ ನಿರ್ದೇಶಕ ವಿ.ಕೆ. ಶ್ರೀನಿವಾಸ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-11/06/2026

0
Sidlaghatta Silk Cocoon Market-11/06/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 11/06/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 429
Qty: 24079 Kg
Mx : 765
Mn: 460
Avg: 681

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 14
Qty: 824 Kg
Mx : ₹ 832
Mn: ₹ 668
Avg: ₹ 747


For Daily Updates WhatsApp ‘HI’ to 7406303366

ಬಿಸಿಯೂಟ ಪೂರೈಕೆಗೆ ISKCON ಗೆ ಅವಕಾಶ ನೀಡಿರುವುದಕ್ಕೆ ವಿರೋಧ

0
Sidlaghatta ISKCON Mid day Meals Protest

Sidlaghatta : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟವನ್ನು ಪೂರೈಸಲು ISKCON ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್‌ ಗೆ ಅವಕಾಶ ಕೊಟ್ಟಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬಿಸಿಯೂಟ ತಯಾರಿಸುವ ನೌಕರರು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಶಾಲೆಗಳಿಗೆ ಸರ್ಕಾರೇತರ ಸಂಘ ಸಂಸ್ಥೆ, ಧರ್ಮಾಧಾರಿತ ಸಂಸ್ಥೆಗಳಿಂದ ಬಿಸಿಯೂಟ ಪೂರೈಸುವುದನ್ನು ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೂಡ ನಿಷೇಧಿಸಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತ್ರ ಧರ್ಮಾಧಾರಿತ ಸಂಸ್ಥೆ ಇಸ್ಕಾನ್‌ ಗೆ ಅನುಮತಿ ಕೊಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಮದ್ಯಾಹ್ನದ ಬಿಸಿಯೂಟ ಯೋಜನೆಯು ಯಾವುದೆ ಅಡ್ಡಿ ಆತಂಕವಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. 1,13,700 ಮಂದಿ ಮಹಿಳೆಯರು ಬಿಸಿಯೂಟ ತಯಾರಿಕೆಯಲ್ಲಿ ತೊಡಗಿದ್ದಾರೆ.

ಆರಂಭದಲ್ಲಿ ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಮುಖ್ಯ ಶಿಕ್ಷಕರಿಗೆ ಅಥವಾ ಇಲಾಖೆಯ ಅಧಿಕಾರಿಗಳಿಗೆ ಯಾವುದೆ ರೀತಿಯ ಅಡಚಣೆ ತೊಂದರೆ ಇಲ್ಲದೆ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸಲಾಗುತ್ತಿದೆ.

ಆದರೂ ಇದೀಗ ಸುಪ್ರೀಂ ಕೋರ್ಟ್ ಸೂಚನೆಯನ್ನು ಉಲ್ಲಂಘಿಸಿ ಸರ್ಕಾರೇತರ ಸಂಸ್ಥೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಪೂರೈಸಲು ಅವಕಾಶ ಮಾಡಿಕೊಟ್ಟಿರುವುದು ಹತ್ತು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದರು.

ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವ ಬೆಳ್ಳುಳ್ಳಿ, ಈರುಳ್ಳಿಯನ್ನು ಇಸ್ಕಾನ್‌ ನ ಅಕ್ಷಯ ಪಾತ್ರೆ ತಯಾರಿಸುವ ಬಿಸಿಯೂಟದ ಅಡುಗೆಯಲ್ಲಿ ಬಳಸುವುದಿಲ್ಲ. ಇದು ಮಕ್ಕಳಲ್ಲಿ ಅಗತ್ಯ ಪೌಷ್ಟಿಕತೆ ಕುಗ್ಗಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಜತೆಗೆ ಅನೇಕ ವರ್ಷಗಳಿಂದಲೂ ಕೆಲಸ ಮಾಡಿಕೊಂಡು ಬಂದ ಬಿಸಿಯೂಟ ತಯಾರಿಸುವ ನೌಕರರ ಕೆಲಸಕ್ಕೂ ಕುತ್ತು ತರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮಿದೇವಮ್ಮ, ಮುಖಂಡರಾದ ಮುನಿಕೃಷ್ಣಪ್ಪ, ಮುನಿಯಪ್ಪ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಮಂಜುಳಮ್ಮ, ಗಾಯಿತ್ರಿ, ನಾಗಮಣಿ, ಸುಶೀಲ, ಚಂದ್ರಕಲ, ದ್ಯಾವಮ್ಮ, ಮಂಜುಳಬಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪಾಕಿಸ್ತಾನದ ಅಂಧಾಭಿಮಾನಿಗಳು ದೇಶ ಬಿಟ್ಟು ತೊಲಗಲಿ

0
BJP Narendra Modi PM Term Celebration

Sidlaghatta: ಭಾರತದಲ್ಲಿರುವ ಎಲ್ಲ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೆ. ಆದರೆ ಕೆಲ ಮುಸ್ಲೀಮರಿಗೆ ಪಾಕಿಸ್ತಾನದ ಬಗ್ಗೆ ಅಂಧ ಪ್ರೇಮವಿದೆ. ಅಂತಹವರು ಭಾರತವನ್ನು ಬಿಟ್ಟು ತೊಲಗಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿ. ಇಲ್ಲಿದ್ದ ಮೇಲೆ ಎಲ್ಲರೂ ವಿಕಸಿತ ಭಾರತಕ್ಕಾಗಿ ಕೈ ಜೋಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 12 ವರ್ಷ (4399 ದಿನಗಳು) ಪೂರೈಸಿ ಮುಂದುವರೆದಿರುವ ಅಂಗವಾಗಿ ಬಿಜೆಪಿಯಿಂದ ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಸ್ವಚ್ಚತಾ ಕಾರ್ಯ, ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ನೆಲೆಸಿ ಇಲ್ಲಿನ ನೀರು ಕುಡಿದು ಗಾಳಿ ಸೇವಿಸಿ ಅನ್ನ ತಿಂದ ಮೇಲೆ ಭಾರತಕ್ಕೆ ತಲೆ ಬಾಗಬೇಕು, ಭಾರತವನ್ನು ಪ್ರೀತಿಸಬೇಕು, ಭಾರತದ ಕಾನೂನನ್ನು ಗೌರವಿಸಬೇಕು. ಅದು ಬಿಟ್ಟು ಕೆಲವರಿಗೆ ಪಾಕಿಸ್ತಾನದ ಮೇಲೆ ಎಲ್ಲಿಲ್ಲದ ಮಮಕಾರ, ಪ್ರೀತಿ, ಅಂಧ ಪ್ರೇಮ ಇರುತ್ತದೆ. ಅಂತಹವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ನೆಲೆಸಲಿ ನಮ್ಮದೇನು ಅಭ್ಯಂತರ ಇಲ್ಲ ಎಂದರು.

ನಮ್ಮ ನೆರೆಯ ಆಂಧ್ರದ ಗಡಿಯಲ್ಲಿ ಕೃಷ್ಣಾ ನದಿ ನೀರು ಹರಿಯುತ್ತಿದ್ದು ಕೃಷ್ಣಾ ನದಿ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿಗೆ ಹರಿಸಬೇಕಿದೆ. ಆದರೆ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಹಿತಾಸಕ್ತಿಯೆ ಇಲ್ಲವಾಗಿದೆ ಎಂದು ದೂರಿದರು.

ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಎಲ್ಲ ನಾಯಕರು ಒಗ್ಗೂಡಿ ಕೃಷ್ಣಾ ನದಿ ನೀರನ್ನು ಈ ಭಾಗಕ್ಕೆ ಹರಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡುವುದು ಶತಸಿದ್ಧ ಎಂದರು.

ಇದೀಗ ರಾಜ್ಯದಲ್ಲಿರುವ ಮತ್ತು ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನ ಹಿತಕ್ಕಿಂತಲೂ ಸ್ವಾರ್ಥ, ಪಕ್ಷದ ಹಿತ ಮುಖ್ಯವಾಗಿತ್ತು. ಹಾಗಾಗಿ ದೇಶದ ಅಭಿವೃದ್ದಿ ಮಾಡಿದ್ದಕ್ಕಿಂತ ಸ್ವಂತ ಅಭಿವೃದ್ದಿ ಆಗಿದ್ದೇ ಹೆಚ್ಚು ಎಂದು ವ್ಯಂಗ್ಯವಾಡಿದರು.

ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ 370 ಕಾಯಿದೆಯನ್ನು ರದ್ದುಪಡಿಸಿ ಇಡೀ ದೇಶ ಒಂದು, ಒಂದೇ ಕಾನೂನು ಎಂಬುದನ್ನು ಜಗತ್ತಿಗೆ ಸಾರಲಾಯಿತು. ಹಾಗೆಯೆ ಇದೀಗ ಬಾಂಗ್ಲಾದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕುವ ದೃಢ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಬಿಜೆಪಿಗೆ ದೇಶ ಮುಖ್ಯ ಎಂದರು.

ನಾವೆಲ್ಲರೂ ಅಜಾತ ಶತೃ ವಾಜಪೇಯಿ ಅವರನ್ನು ಸ್ಮರಿಸಬೇಕು. ಅವರು ಅಂದು ಮೋದಿ ಅವರನ್ನು ಗುರ್ತಿಸಿ ಮೋದಿ ಅವರಲ್ಲಿನ ದೇಶ ಪ್ರೇಮ, ದೇಶ ಭಕ್ತಿಯನ್ನು ಗಮನಿಸಿ ಅವರನ್ನು ಅಂದು ಗುಜರಾತ್‌ ನ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.

ನಂತರ ಅವರ ಪರಿಶ್ರಮ, ದೇಶ ಪ್ರೇಮ ದೇಶ ಭಕ್ತಿಯಿಂದ ಪ್ರಧಾನ ಮಂತ್ರಿಯ ಸ್ಥಾನಕ್ಕೇರಿ ಸತತ 12 ವರ್ಷಗಳ ಕಾಲ ಸುದೀರ್ಘ, ಸುರಕ್ಷತೆಯ, ಸುಭದ್ರತೆಯ ಆಡಳಿತ ನೀಡುತ್ತಾ 12 ವರ್ಷ ಪೂರೈಸಿ ಪ್ರಧಾನಿಯಾಗಿ ಮುಂದುವರೆದ ಕೀರ್ತಿ ವಿಶ್ವ ಗುರು ನರೇಂದ್ರ ಮೋದಿ ಅವರದ್ದಾಗಿದೆ. ಇದಕ್ಕೆ ನಾವೆಲ್ಲರೂ ಕಾರಣ ಎಂದು ಹೆಮ್ಮೆ ಪಡಬೇಕು ಎಂದರು.

ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶದ ಸರ್ವತೋಮುಖ ಅಭಿವೃದ್ದಿಗೆ ಕೈಗೊಂಡ ಯೋಜನೆಗಳು, ದೇಶ ಕಟ್ಟುವ ಕೆಲಸದ ಪರಿ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಲಾಯಿತು. ಸ್ವಚ್ಚತಾ ಕಾರ್ಯ ಮಾಡಿ ಸಸಿಗಳನ್ನು ನೆಡಲಾಯಿತು.

ಶ್ರೀರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಸ್ವಚ್ಚತಾ ಕಾರ್ಯ ಮಾಡಿ ಸಸಿಗಳನ್ನು ನೆಡಲಾಯಿತು.

ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕೆ.ಬಿ.ಮುರಳಿ, ಮಧು, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ರಮೇಶ್‌ ಬಾಯಿರಿ, ಆಂಜನೇಯಗೌಡ, ಡಾ.ಸತ್ಯನಾರಾಯಣರಾವ್, ಬಿ.ಸಿ.ನಂದೀಶ್, ಪಿ.ವಿ.ಶ್ರೀನಿವಾಸ್, ದೊಣ್ಣಹಳ್ಳಿ ರಾಮಣ್ಣ, ರಾಮಕೃಷ್ಣ, ನರೇಶ್, ರೂಪಸಿ ರಮೇಶ್, ನರ್ಮದ ಇನ್ನಿತರೆ ಮುಖಂಡರು, ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಬಗೆಹರಿಯದ ಕಸ ಸಂಗ್ರಹಣೆ ಅವ್ಯವಸ್ಥೆ, ತಪ್ಪದ ಕಿರಿ ಕಿರಿ

0
Sidlaghatta Municipality Waste Management Crisis

Sidlaghatta : ನಗರಸಭೆ ಜನ ಪ್ರತಿನಿಧಿಗಳ ಅವಧಿ ಮುಗಿದು ಕೆಲವೇ ದಿನಗಳು ಕಳೆದಿದ್ದು, ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ಸರಿಯಾಗಿ ಕಾರ್ಯರೂಪಕ್ಕೆ ಬರದೇ ದಿನೇ ದಿನೇ ಒಂದಿಲ್ಲೊಂದು ಸಮಸ್ಯೆಗೆ ಕಾರಣವಾಗುತ್ತಿದೆ. ಮಂಗಳವಾರ ಬೆಳಗ್ಗೆ ತ್ಯಾಜ್ಯದ ವಿಲೇವಾರಿ ಕುರಿತಾಗಿ ಅಶೋಕ ರಸ್ತೆಯ ನಿವಾಸಿಗರು ಪೌರಾಯುಕ್ತೆ ಅಮೃತ ಅವರೊಡನೆ ವಾಗ್ವಾದ ನಡೆಸಿ, ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಈಗಾಗಲೇ ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಡಬೇಕೆಂದು ತಿಳಿಸಿದೆಯಾದರೂ ಅದು ಅನುಷ್ಠಾನಕ್ಕೆ ಬಾರದಾಗಿದೆ. ಮನೆಗಳಲ್ಲಿ ಬೇರ್ಪಡಿಸಿ ಕೊಟ್ಟರೂ ನಂತರ ಅದನ್ನು ಒಂದೇ ಸಂಗ್ರಹಣಾ ವಾಹನಕ್ಕೆ ಸುರಿಯಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಅದಲ್ಲದೆ ಕಸ ಸಂಗ್ರಹಣೆಗೆ ಕೆಲ ವಾರ್ಡುಗಳಲ್ಲಿ 11-12 ಗಂಟೆಗೆ ವಾಹನ ಬರುತ್ತಿದ್ದು, ಆ ಸಮಯದಲ್ಲಿ ಕೆಲಸ, ಕಾರ್ಯ, ವ್ಯಾಪಾರಕ್ಕೆಂದು ಹೋಗುವುದೋ ಅಥವಾ ಮನೆಯಲ್ಲಿ ಕಸದ ವಾಹನಕ್ಕಾಗಿ ಕಾಯಬೇಕೋ ಎಂದು ಪೌರಾಯುಕ್ತೆಯನ್ನು ಪ್ರಶ್ನಿಸಿದರು.

ಹಲವು ವಾರ್ಡುಗಳಲ್ಲಿ ವಾರಕ್ಕೆ ಎರಡು ಬಾರಿ ವಾಹನದ ಮೂಲಕ ಕಸದ ಸಂಗ್ರಹಣೆ ನಡೆಯುತ್ತಿದೆ. ಈಗಾಗಲೇ ಯುಜಿಡಿ, ಕುಡಿಯುವ ನೀರಿಗಾಗಿ ರಸ್ತೆ ಅಗೆದು ದುರಸ್ತಿಯಾಗಿ, ಮಳೆಯೂ ಆಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಯುಜಿಡಿ ತುಂಬಿ ರಸ್ತೆಗೆ ಹರಿದು ದುರಸ್ತಿ ಕಾರ್ಯಗಳು ಸಾಮಾನ್ಯವಾಗಿದ್ದು, ಆಗಾಗ್ಗೆ ಸಂಚಾರಕ್ಕೆ ಅಡ್ಡಿಯಾಗಿ ಕಸ ಸಂಗ್ರಹಣೆಗೆ ವಾಹನ ಬಾರದೆ ಮನೆಯಲ್ಲಿಯೇ ಕಸ ಉಳಿಯುವಂತಾಗುತ್ತಿದೆ.

ಮನೆಯಲ್ಲಿ ಸಂಗ್ರಹಣೆಯಾದ ಕಸವನ್ನು ಮುಖ್ಯ ರಸ್ತೆಗಳಲ್ಲಿ ಕಸ ಶೇಖರಿಸುವ ಸ್ಥಳದಲ್ಲಿ ಹಾಕುವುದು ಬಿಟ್ಟು ಜನರಿಗೆ ಬೇರೆ ಆಯ್ಕೆ ಇಲ್ಲದಾಗಿದೆ. ಹಾಗೆ ಕಸ ಹಾಕಲು ಬಂದರೆ, ನಗರಸಭೆ ಸಿಬ್ಬಂದಿ ದೂಷಿಸುತ್ತಾರೆ ಮತ್ತು ಫೈನ್ ಹಾಕುತ್ತೇವೆ ಎಂದು ಹೆದರಿಸುತ್ತಾರೆ. ಮೊದಲು ಈ ಸ್ಥಳದಲ್ಲಿ ಕಸ ಶೇಖರಿಸುವ ಗುಂಡಿಗಳು ಇರುತ್ತಿದ್ದವು, ವಾಹನ ಬರದೇ ಇದ್ದಾಗ, ಅಥವಾ ಕೆಲಸದಿಂದ ಬಂದು ಆ ನಿಗದಿತ ಸ್ಥಳದಲ್ಲಿ ಹಾಕುತ್ತಿದ್ದೆವು, ಮುಂಜಾನೆ ಕಸ ಸಂಗ್ರಹಿಸುವ ವಾಹನಗಳು ತೆಗೆದುಕೊಂಡು ಹೋಗುತ್ತಿದ್ದವು. ಈಗ ಕಸದ ಶೇಖರಣೆಗೆ ಗುಂಡಿಯೂ ಇಲ್ಲ, ನಿಗದಿತ ಸ್ಥಳವೂ ಇಲ್ಲ, ವಾರದಲ್ಲಿ 1-2 ದಿನ, 11-12 ಗಂಟೆಗೆ ವಾಹನ ಬರುವುದರಿಂದ ಕೆಲಸ, ಕಾರ್ಯಗಳಿಗೆ ಹೋದರೆ ವಾರವಿಡೀ ಕಸ ಶೇಖರಣೆಯಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದರು.

ನಗರಸಭೆ ಪೌರಾಯುಕ್ತೆ ಅಮೃತ ಮಾತನಾಡಿ, ವಾಹನಗಳನ್ನು ಜಿಪಿಎಸ್ ನಲ್ಲಿ ಟ್ರ್ಯಾಕ್ ಮಾಡುತ್ತೇವೆ, ಬರದಿದ್ದರೆ ಆಪ್ ನಲ್ಲಿ ದೂರು ನೀಡಿ ಎಂದು ಹೇಳಿದರು. ಆದರೆ ಪುನಃ ಜನರು ಪ್ರಶ್ನಿಸಿದಾಗ, ಸಿಬ್ಬಂದಿ ಕೊರತೆ ಇದೆ, ಕೆಲವೊಮ್ಮೆ ವಾಹನ ದುರಸ್ತಿಯಾಗಿದೆ ಎಂದು ಉತ್ತರಿಸಿದರು. ಈ ಸಮಸ್ಯೆಗೆ ಪರಿಹಾರವೇನೆಂದು ಕೇಳಿದರೆ ಸರಿಯಾದ ಉತ್ತರ ಇಲ್ಲದಿದ್ದರೂ, ಕಸ ಹಾಕಿದರೆ ಫೈನ್ ಹಾಕುವುದಾಗಿ ಮಾತ್ರ ಹೇಳಿದರು.

ಜನರಿಗಾಗಿ ಇರುವ ವ್ಯವಸ್ಥೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಬೇಕಾದ ಕರ್ತವ್ಯ ಅಧಿಕಾರಿಗಳದ್ದು. ಆದರೆ, ಅಧಿಕಾರಿ ತಮ್ಮ ಸೇವೆಗಿಂತ ದರ್ಪವನ್ನು ಪ್ರದರ್ಶಿಸುತ್ತಾರೆ. ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಬೇಸರ ತಂದಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-10/06/2026

0
Sidlaghatta Silk Cocoon Market-10/06/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 10/06/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 327
Qty: 18158 Kg
Mx : 763
Mn: 465
Avg: 676

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 25
Qty: 1488 Kg
Mx : ₹ 827
Mn: ₹ 626
Avg: ₹ 748


For Daily Updates WhatsApp ‘HI’ to 7406303366

ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

0
Horticulture Department Schemes Apply

Sidlaghatta : 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳಾದ ಹೊಸ ಪ್ರದೇಶ ವಿಸ್ತರಣೆ,(ದ್ರಾಕ್ಷಿ, ಬಾಳೆ, ಪಪ್ಪಾಯ, ಮಾವು, ದಾಳಿಂಬೆ, ಸೀಬೆ, ಬೆಣ್ಣೆ ಹಣ್ಣು, ಹಲಸಿನ ಹಣ್ಣು ಮತ್ತು ಗೋಡಂಬಿ), ಹೈಬ್ರಿಡ್ ತರಕಾರಿ, ಮಾವು ಪುನಶ್ಚೇತನ, ಪ್ಲಾಸ್ಟಿಕ್ ಹೊದಿಕೆ, ವಯುಕ್ತಿಕ ಕೃಷಿ ಹೊಂಡ, ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ, ಪಾಲಿಹೌಸ್, ಪಾರಂ ಗೇಟ್, ಪಕ್ಷಿ ನಿರೋಧ ಬಲೆ, ಸೋಲಾರ್ ಪಂಪ್‌ಸೆಟ್, ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ, ಪ್ಲಾಸ್ಟಿಕ್ ಕ್ರೇಟ್ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಶೇ 90ರಷ್ಟು ಸಹಾಯ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ಅರ್ಜಿಸಲ್ಲಿಸಬಹುದಿದ್ದು ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು(ಕಸಬಾ ಮತ್ತು ಬಶೆಟ್ಟಹಳ್ಳಿ ಹೋಬಳಿ-9591917957, ಜಂಗಮಕೋಟೆ ಹೋಬಳಿ-8105076125, ಸಾದಲಿ ಹೋಬಳಿ-9113614924 ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು-9449679432 ರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-09/06/2026

0
Sidlaghatta Silk Cocoon Market-09/06/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 09/06/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 359
Qty: 20290 Kg
Mx : 751
Mn: 455
Avg: 664

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 33
Qty: 2193 Kg
Mx : ₹ 813
Mn: ₹ 571
Avg: ₹ 701


For Daily Updates WhatsApp ‘HI’ to 7406303366

ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ರೈತರ ಗುಂಪು ಚರ್ಚೆ

0
sidlaghatta Farmers Group Discussion Programme

Sidlaghatta : “ರೈತರಿಗೆ ನೀಡುವ ಹನಿ ನೀರಾವರಿ ಸೌಲಭ್ಯ ಅಥವಾ ಇತರೆ ಕೃಷಿ ಪರಿಕರಗಳು ಕಾಲಕ್ರಮೇಣ ಹಾನಿಗೊಳಗಾಗುತ್ತವೆ. ಆದ್ದರಿಂದ, ಐದು ವರ್ಷಗಳ ನಂತರ ಸರ್ಕಾರ ಈ ಸೌಲಭ್ಯಗಳನ್ನು ಪುನಃ ಕಲ್ಪಿಸಬೇಕು,” ಎಂದು ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತರ ಗುಂಪು ಚರ್ಚೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.

ರೈತರ ಬೇಡಿಕೆಗಳು:

ಗೋಪಾಲಗೌಡ ಅವರು ರೈತರ ಪರವಾಗಿ ಮಾತನಾಡುತ್ತಾ, ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಲು ಹಾಗೂ ಸಾವಯವ ಗೊಬ್ಬರ ತಯಾರಿಕೆಗೆ ಅಗತ್ಯವಿರುವ 20 ಎಚ್‌ಪಿ ಮೋಟಾರ್‌ಗಳನ್ನು ಸಬ್ಸಿಡಿ ದರದಲ್ಲಿ ಇಲಾಖೆಯ ವತಿಯಿಂದ ನೀಡಬೇಕೆಂದು ವಿನಂತಿಸಿದರು.

ರೈತರ ಅನುಭವಗಳ ವಿನಿಮಯ:

ಗುಂಪು ಚರ್ಚೆಯಲ್ಲಿ ರೈತರು ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಣೆ ಮನೆಯ ನಿರ್ವಹಣೆ, ಹಿಪ್ಪುನೇರಳೆ ತೋಟದ ಆರೈಕೆ ಹಾಗೂ ಯೂರಿಯಾದ ಮಿತ ಬಳಕೆ ಕುರಿತು ಸಮಾಲೋಚನೆ ನಡೆಸಿದರು. ರೈತರು ತಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಪರಸ್ಪರ ಅನುಭವಗಳನ್ನು ವಿನಿಮಯ ಮಾಡಿಕೊಂಡರು.

ಈ ಕಾರ್ಯಕ್ರಮದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ಭಾರತಿ ಸೇರಿದಂತೆ ಮುನಿರಾಜು, ಎಚ್.ಕೆ. ಸುರೇಶ್, ಮೋಹನ್, ರಾಮಕೃಷ್ಣಪ್ಪ, ಮುರಳಿ, ಪುಟ್ಟೇಗೌಡ, ದೇವೇಗೌಡ, ಬಿ. ಮಂಜು, ಕೇಶವಮೂರ್ತಿ, ಮುನಿಕೃಷ್ಣ ಮೊದಲಾದವರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಭಾರತಾಂಬೆ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಕಚೇರಿಗೆ ZP CEO ಭೇಟಿ

0
Sidlaghatta Kisan Producer Company

Sidlaghatta : ಶಿಡ್ಲಘಟ್ಟ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ‘ಭಾರತಾಂಬೆ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’ ಕಚೇರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ. ನವೀನ್ ಭಟ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಸ್ಥೆಗೆ ಮಾರ್ಗದರ್ಶನ

ಸಂಸ್ಥೆಯ ಒಟ್ಟಾರೆ ಕಾರ್ಯಚಟುವಟಿಕೆಗಳನ್ನು ಸಿಇಒ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ಸದಸ್ಯತ್ವವನ್ನು ಹೆಚ್ಚಿಸುವುದು, ವ್ಯವಹಾರವನ್ನು ವಿಸ್ತರಿಸುವುದು ಹಾಗೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ರೈತರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಕುರಿತು ಅವರು ಸಂಸ್ಥೆಯ ಪದಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.

ರೈತಪರ ಪರಿಕರಗಳ ಮಾಹಿತಿ

ಈ ಭೇಟಿಯ ವೇಳೆ ರೈತರಿಗೆ ಅವಶ್ಯಕವಿರುವ ಕೃಷಿ ಪರಿಕರಗಳ ಬಗ್ಗೆ ಸಿಇಒ ಮಾಹಿತಿ ಪಡೆದರು. ಟಾರ್ಪಲ್, ಮ್ಯಾಟ್, ಚಾಪ್ ಕಟ್ಟರ್, ಮಿಲ್ಕ್ ಮಿಷನ್ಸ್, ಶೇಡ್ ನೆಟ್ ಮತ್ತು ವೀಡ್ ಮ್ಯಾಟ್ ಸೇರಿದಂತೆ ವಿವಿಧ ಉಪಕರಣಗಳ ಲಭ್ಯತೆ ಮತ್ತು ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದರು.

ಈ ಪರಿಶೀಲನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಹಾಗೂ ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

NMMS ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಗೆ ಆಯ್ಕೆ

0
Sidlaghatta sugaturu s s kavana NMMS Scholarship recipient

Sidlaghatta : ರಾಷ್ಟ್ರೀಯ ಮೆರಿಟ್ ಮೀನ್ಸ್‌ ಸ್ಕಾಲರ್‌ಶಿಪ್ (NMMS) ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಎಸ್.ಎಸ್. ಕವನಾ ಉತ್ತಮ ಸಾಧನೆ ತೋರಿ ರಾಷ್ಟ್ರೀಯ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.

ಪರೀಕ್ಷೆಯ ಹಿನ್ನೆಲೆ

ನವದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯದ ಡಿ.ಎಸ್.ಇ.ಆರ್.ಟಿ. ಮಾರ್ಗದರ್ಶನದಲ್ಲಿ ಕಳೆದ ಫೆಬ್ರವರಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಎಂಟನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ಸುಗಟೂರು ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷವೂ ಈ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸುತ್ತಿರುವುದು ಗಮನಾರ್ಹ.

ಪೋಷಕರು ಮತ್ತು ವಿದ್ಯಾರ್ಥಿನಿಯ ಸಂತಸ

ಕವನಾ ಅವರ ಸಾಧನೆಯು ಮುಂದಿನ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಪೋಷಕರಾದ ರಾಧಾ ಮತ್ತು ಸುಬ್ರಮಣಿ ಸಂತಸ ಹಂಚಿಕೊಂಡಿದ್ದಾರೆ. ಇನ್ನು, ಮಾರ್ಗದರ್ಶಿ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಹಾಗೂ ಇತರ ಶಿಕ್ಷಕರು ನೀಡಿದ ವಿಶೇಷ ತರಬೇತಿಯು ಈ ಯಶಸ್ಸಿಗೆ ಕಾರಣವೆಂದು ವಿದ್ಯಾರ್ಥಿನಿ ಕವನಾ ತಿಳಿಸಿದರು. ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಶಾಲೆಯು ತುಂಬಿದೆ ಎಂದು ಅವರು ನುಡಿದರು.

ವಿದ್ಯಾರ್ಥಿನಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಚ್. ಪ್ರಸನ್ನಕುಮಾರ್, ಶಿಕ್ಷಣ ಸಂಯೋಜಕ ಎಂ.ಸಿ. ವೆಂಕಟರೆಡ್ಡಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ. ವೆಂಕಟರೆಡ್ಡಿ ಹಾಗೂ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ISKCONನಿಂದ ಬೆಳ್ಳೂಟಿ ಗ್ರಾಮದಲ್ಲಿ ಅಕ್ಷಯ ಪಾತ್ರೆಯ 81ನೇ ಅಡುಗೆಮನೆ ಆರಂಭ

0
Sidlaghatta ISKCON Akshaya Patra 81 Branch Inauguration

Belluti, sidlaghatta : “ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ.” ಹೀಗೆಂದು ಶಾಸಕ ಡಾ. ಎಂ.ಸಿ. ಸುಧಾಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ದಿವಂಗತ ಎನ್.ವಿ. ಕೃಷ್ಣಮೂರ್ತಿ ರಾವ್ ಮತ್ತು ಪದ್ಮಾವತಮ್ಮ ಅವರ ಸ್ಮರಣಾರ್ಥ ನಿರ್ಮಿಸಿದ ’ಅಕ್ಷಯ ಪಾತ್ರೆ’ ಅಡುಗೆಮನೆಯನ್ನು ಅವರು ಉದ್ಘಾಟಿಸಿದರು. ಇನ್ಫೋಸಿಸ್‌ನ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ನೆರವಿನಿಂದ ಈ ಘಟಕ ಸ್ಥಾಪನೆಯಾಗಿದೆ.

ಆಧುನಿಕ ತಂತ್ರಜ್ಞಾನದೊಂದಿಗೆ ಸೇವೆ

ಇಸ್ಕಾನ್ ಅಕ್ಷಯ ಪಾತ್ರೆ ಸಂಸ್ಥೆಯು ಶಿಡ್ಲಘಟ್ಟದ 50 ಸರ್ಕಾರಿ ಶಾಲೆಗಳ 2,350 ಮಕ್ಕಳಿಗೆ ಬಿಸಿಯೂಟ ಒದಗಿಸಲಿದೆ. ಅಡುಗೆ ತಯಾರಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಪರಿಣಾಮವಾಗಿ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. ಇದು ಗುಣಮಟ್ಟದ ಆಹಾರ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು. ಅಲ್ಲದೆ, ಇದು ಲಾಭದ ಉದ್ದೇಶವಿಲ್ಲದ ಸೇವಾ ಕಾರ್ಯಕ್ರಮವೆಂದು ಅವರು ಶ್ಲಾಘಿಸಿದರು.

‘ಪಿಎಂ ಪೋಷಣ್’ ಯೋಜನೆಯಡಿ ಅನುಷ್ಠಾನ

ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ. ನವೀನ್ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ‘ಪಿಎಂ ಪೋಷಣ್’ ಯೋಜನೆಯಡಿ ‘ವಿಕಸಿತ ಭಾರತಕ್ಕಾಗಿ ಪೌಷ್ಟಿಕ ಆಹಾರ’ ಎಂಬ ಆಶಯದೊಂದಿಗೆ ಈ ಅಡುಗೆಮನೆ ಆರಂಭವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಬಿಸಿಯೂಟ ಒದಗಿಸುವ ಮೂಲಕ ಹಸಿವನ್ನು ನೀಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಜಾಗತಿಕ ಮಟ್ಟದಲ್ಲಿ ಅಕ್ಷಯ ಪಾತ್ರೆ

ಅಕ್ಷಯ ಪಾತ್ರೆಯ ಸಹ-ಸಂಸ್ಥಾಪಕ ಶ್ರೀ ಚಂಚಲಪತಿ ಪ್ರಭು ಮಾಹಿತಿ ನೀಡಿದರು. ಈ ಘಟಕವು ಪ್ರತಿದಿನ 5,000ಕ್ಕೂ ಹೆಚ್ಚು ಮಕ್ಕಳಿಗೆ ತಾಜಾ ಮತ್ತು ಬಿಸಿ ಆಹಾರ ನೀಡಲು ಸಜ್ಜಾಗಿದೆ. 2000ನೇ ಇಸವಿಯಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಅಕ್ಷಯ ಪಾತ್ರೆ ಇಂದು ಬೃಹತ್ ಚಳವಳಿಯಾಗಿದೆ. ಸದ್ಯ, ದೇಶದ 16 ರಾಜ್ಯಗಳಲ್ಲಿ 23.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸಂಸ್ಥೆಯು ಪೌಷ್ಟಿಕ ಆಹಾರ ಒದಗಿಸುತ್ತಿದೆ.

ಕಾರ್ಯಕ್ರಮದ ವೇಳೆ ಅಡುಗೆಮನೆಯ ಸ್ವಚ್ಛತೆ ಹಾಗೂ ದಾಸ್ತಾನು ಕೊಠಡಿಯನ್ನು ಅಧಿಕಾರಿಗಳು ಪರಿಶೀಲಿಸಿದರು. ನಂತರ, ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗುಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಜಿ. ಪ್ರಭು, ತಹಶೀಲ್ದಾರ್ ಗಗನ ಸಿಂಧು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

KSRTC ಡಿಪೋದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

0
Sidlaghatta KSRTC Depot World Tobacco day Awareness

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯಿರುವ KSRTC ಡಿಪೋ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯದ ಮೇಲೆ ತಂಬಾಕಿನ ದುಷ್ಪರಿಣಾಮಗಳ ಅರಿವು:

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಷನ್ ಷಾ, “ತಂಬಾಕು ಸೇವನೆಯು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಶ್ವಾಸಕೋಶದ ಗಂಭೀರ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಇದು ಸೇವಿಸುವ ವ್ಯಕ್ತಿಗೆ ಮಾತ್ರವಲ್ಲದೆ, ಪರೋಕ್ಷವಾಗಿ ಸುತ್ತಮುತ್ತಲಿನವರಿಗೂ ಹಾನಿಕಾರಕವಾಗಿದೆ,” ಎಂದು ಎಚ್ಚರಿಸಿದರು.

ತಂಬಾಕು ನಿಯಂತ್ರಣ ಕಾನೂನುಗಳ ಕುರಿತು ಮಾಹಿತಿ:

ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸಿದ ಅವರು, “ಭಾರತ ಸರ್ಕಾರವು ತಂಬಾಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ‘ಕೋಟ್ಪಾ’ (COTPA) ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಆರೋಗ್ಯ ಎಚ್ಚರಿಕೆಯ ಸಂದೇಶಗಳನ್ನು ಪ್ರತಿಯೊಂದು ಪ್ಯಾಕೆಟ್ ಮೇಲೆ ಮುದ್ರಿಸುವುದು ಕಡ್ಡಾಯ,” ಎಂದು ವಿವರಿಸಿದರು. ಅಲ್ಲದೆ, ಪ್ರತಿಯೊಬ್ಬರೂ ತಂಬಾಕು ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ದಂತವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳು ತಂಬಾಕು ಸೇವನೆಯಿಂದ ಬರುವ ರೋಗಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶೆ ರಂಜಿತಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಭಾಸ್ಕರ್, ಎಪಿಪಿ ಮೊಹಮ್ಮದ್ ಖಾಜಾ, ವಕೀಲ ರಾಘವೇಂದ್ರ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಜಗನ್ನಾಥ್, ದಂತವೈದ್ಯ ಡಾ. ಅಂಬಾದಾಸ್, ಡಾ. ನುಸಿಭಾ ಪರ್ಹೀನಾ, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಹಾಗೂ ನಗರ ಆರೋಗ್ಯ ಕೇಂದ್ರ ಮತ್ತು ಐಸಿಟಿಸಿ (ICTC) ಕೇಂದ್ರದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-08/06/2026

0
Sidlaghatta Silk Cocoon Market-08/06/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 08/06/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 416
Qty: 22644 Kg
Mx : 743
Mn: 430
Avg: 642

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 16
Qty: 1052 Kg
Mx : ₹ 806
Mn: ₹ 626
Avg: ₹ 743


For Daily Updates WhatsApp ‘HI’ to 7406303366

ಚಿಕ್ಕತೇಕಹಳ್ಳಿಯಲ್ಲಿ ಜನಪದ ಕಲೆಗಳ ಸಂಭ್ರಮ: ಯುವಕರಿಂದ ಮನಸೆಳೆದ ಕೋಲಾಟ ಪ್ರದರ್ಶನ

0
Sidlaghatta Chikkatekahalli Kolata folk art

Chikkatekahalli, Sidlaghatta : “ಜನಪದ ನೃತ್ಯ ಕಲೆಗಳು ನಮ್ಮ ಹಿರಿಯರು ನಮಗೆ ನೀಡಿರುವ ಅಮೂಲ್ಯವಾದ ಬಳುವಳಿ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ” ಎಂದು ಆಂಧ್ರಪ್ರದೇಶದ ಕೋಲಾಟ ತರಬೇತುದಾರ ಭೋಗ ನಾಗರಾಜ್ ಅಭಿಪ್ರಾಯಪಟ್ಟರು.

ಎರಡು ತಿಂಗಳ ತರಬೇತಿ ನಂತರ ಪ್ರದರ್ಶನ:

ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ಕೋಲಾಟ ತಂಡದ ಕಲಾವಿದರು ಕಳೆದ ಎರಡು ತಿಂಗಳಿಂದ ತರಬೇತಿ ಪಡೆದು, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಅತ್ಯಾಕರ್ಷಕ ಕೋಲಾಟ ಪ್ರದರ್ಶನ ನೀಡಿದರು. ಪ್ರದರ್ಶನವನ್ನು ವೀಕ್ಷಿಸಿದ ತರಬೇತುದಾರ ಭೋಗ ನಾಗರಾಜ್, “ಜನಪದ ಕಲೆ ವೈವಿಧ್ಯಮಯವಾಗಿದೆ. ಕೋಲಾಟವು ಕೇವಲ ನೃತ್ಯವಲ್ಲ, ಅದು ಗುಂಪಿನಲ್ಲಿ ಬಾಂಧವ್ಯವನ್ನು ಬೆಳೆಸುತ್ತಾ ವೀಕ್ಷಕರಿಗೆ ಸಂತೋಷ ನೀಡುವ ನೈಪುಣ್ಯತೆಯ ಕಲೆ,” ಎಂದು ಶ್ಲಾಘಿಸಿದರು.

ಗ್ರಾಮದಲ್ಲಿ ಜನಪದ ಕಲೆಗೆ ಮರುಜೀವ:

ಪ್ರಸ್ತುತ ಮೊಬೈಲ್ ರೀಲ್ಸ್‌, ಟಿವಿ ಮತ್ತು ಸಿನಿಮಾ ಲೋಕದಲ್ಲಿ ಮಗ್ನರಾಗಿರುವ ಇಂದಿನ ದಿನಗಳಲ್ಲಿ, ಗ್ರಾಮದಲ್ಲಿ ನಡೆದ ಈ ಕೋಲಾಟ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಜಮಾಯಿಸಿದ್ದ ಗ್ರಾಮಸ್ಥರು, ಮಕ್ಕಳು ಮತ್ತು ಮಹಿಳೆಯರು ಗ್ರಾಮದ ಯುವಕರು ಹಾಗೂ ಕಲಾವಿದರು ಪ್ರದರ್ಶಿಸಿದ ಈ ಸಾಂಪ್ರದಾಯಿಕ ಕಲಾ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕೋಲಾಟ ಕಲಾವಿದರು ಮತ್ತು ತರಬೇತುದಾರರಾದ ಭೋಗ ನಾಗರಾಜ್, ವೇಮು ಮಾಸ್ಟರ್, ಸಂಗೀತ ನಿರ್ದೇಶಕ ಇನಿಮಿಂಚೇನಹಳ್ಳಿ ಶ್ರೀನಿವಾಸ್, ಜನಪದ ಕಲಾವಿದ ಈಧರೆ ಪ್ರಕಾಶ್ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ಶ್ರೀರಾಮ ಶೋಭಾಯಾತ್ರೆ: ಜೈ ಶ್ರೀರಾಮ್ ಘೋಷಣೆಯೊಂದಿಗೆ ಸಂಭ್ರಮಾಚರಣೆ

0
sidlaghatta Srirama shobhayatre Procession

Sidlaghatta : ರೇಷ್ಮೆನಗರ ಶಿಡ್ಲಘಟ್ಟದಲ್ಲಿ ಭಾನುವಾರ ಶ್ರೀರಾಮ ಶೋಭಾಯಾತ್ರೆಯು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಜರುಗಿತು. ಹನುಮಂತಪುರ ಗೇಟ್‌ನ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಯಾತ್ರೆಯು ಸಾರಿಗೆ ಬಸ್ ನಿಲ್ದಾಣದವರೆಗೆ ಸಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡರು.

ಹನುಮಂತಪುರ ಗೇಟ್‌ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಯಾತ್ರೆಯಲ್ಲಿ 12 ಅಡಿ ಎತ್ತರದ ಶ್ರೀ ಕೋದಂಡರಾಮನ ಮೂರ್ತಿ ಮತ್ತು 12 ಅಡಿ ಎತ್ತರದ ಶಿವನ ವಿಗ್ರಹದ ರಥಗಳು ವಿಶೇಷ ಆಕರ್ಷಣೆಯಾಗಿದ್ದವು. ಕೇರಳದ ಚಂಡೆ ವಾದ್ಯ, ಸ್ಥಳೀಯ ಟಮಟೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನವು ಭಕ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿತು. ಕೈಯಲ್ಲಿ ಭಗವಾಧ್ವಜ ಹಿಡಿದ ಭಕ್ತರು ‘ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು.

ಯಾತ್ರೆಯುದ್ದಕ್ಕೂ ದಣಿದ ಭಕ್ತರಿಗಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಮಜ್ಜಿಗೆ, ನೀರು ಮತ್ತು ತಂಪು ಪಾನೀಯವನ್ನು ವಿತರಿಸಿ ಸೇವೆ ಸಲ್ಲಿಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‌ನ ಅಧ್ಯಕ್ಷ ಬಿ. ವೆಂಕಟೇಶ್, ಗೌರವಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್ ಜಿ.ಕೆ., ಭರತ್, ರವಿಚಂದ್ರ, ನಾಗೇಶ್, ಲಕ್ಷ್ಮೀಪತಿ, ಕಿರಣ್, ರಾಮಾಂಜಿನೇಯ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-07/06/2026

0
Sidlaghatta Silk Cocoon Market-07/06/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 07/06/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 457
Qty: 24670 Kg
Mx : 750
Mn: 380
Avg: 628

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 18
Qty: 1040 Kg
Mx : ₹ 786
Mn: ₹ 561
Avg: ₹ 688


For Daily Updates WhatsApp ‘HI’ to 7406303366

ವೃಕ್ಷಗಳ ವೇಷದಲ್ಲಿ ಮಿಂಚಿದ ಪುಟ್ಟ ಮಕ್ಕಳು: ಗರುಡಾದ್ರಿ ಶಾಲೆಯಿಂದ ಪರಿಸರ ದಿನಾಚರಣೆ

0
Garudadri School Environment Day awareness

Sidlaghatta : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮರಗಳು, ಚಿಟ್ಟೆಗಳು ಮತ್ತು ವಿವಿಧ ಪ್ರಕೃತಿ ರೂಪದ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದರು. ಸಣ್ಣ ಮಕ್ಕಳ ಈ ಕಲಾತ್ಮಕ ವೇಷಗಳು ಪರಿಸರದ ಮೇಲಿನ ಕಾಳಜಿಯನ್ನು ಎತ್ತಿ ತೋರಿಸಿದವು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಒಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ತಾಲ್ಲೂಕು ಕಚೇರಿ ಮತ್ತು ಬಸ್ ನಿಲ್ದಾಣದ ಬಳಿ ನಡೆದ ವಿಶೇಷ ಅಭಿಯಾನದಲ್ಲಿ, ವಿದ್ಯಾರ್ಥಿಗಳು “ಮರಗಳನ್ನು ನೆಡಿ, ಮಕ್ಕಳನ್ನು ಉಳಿಸಿ, ಪಕ್ಷಿಗಳನ್ನು ರಕ್ಷಿಸಿ ಹಾಗೂ ಪ್ರಕೃತಿಯನ್ನು ಕಾಪಾಡಿ” ಎಂಬ ಘೋಷಣೆಗಳನ್ನು ಕೂಗಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಪ್ರಕೃತಿಯ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಶಿಕ್ಷಕವರ್ಗದವರಾದ ಮಂಜುನಾಥ್ ಡಿ., ರೂಪಾ ಕೆ., ಶಿವರಾಜ್ ಆರ್., ಪದ್ಮಲತಾ, ರಜಿನಿ, ರಶ್ಮಿ, ವಹೀದಾ, ಲಕ್ಷ್ಮಿ, ಫಾತಿಮಾ ಮತ್ತು ದೀಪಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಕ್ಕಳ ಪರಿಸರ ಕಾಳಜಿಯ ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶ್ರೀರಾಮ ಶೋಭಾಯಾತ್ರೆಗೆ ಆಹ್ವಾನವಿಲ್ಲ: ಟ್ರಸ್ಟ್ ಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಅಸಮಾಧಾನ

0
sidlaghatta sri rama shobhayatre press meet

Sidlaghatta : ನಗರದಲ್ಲಿ ಶ್ರೀ ರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳನ್ನು ಕಡೆಗಣಿಸಿರುವುದಕ್ಕೆ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಅಧ್ಯಕ್ಷ ವಿ. ಚೆಲುವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಳೆದ ಮೂರು ವರ್ಷಗಳಿಂದ ವಿಹಿಂಪ ಮತ್ತು ಭಜರಂಗದಳದ ನೇತೃತ್ವದಲ್ಲಿ ಶೋಭಾಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಈಗ ಟ್ರಸ್ಟ್ ಮೂಲಕ ಶೋಭಾಯಾತ್ರೆ ಆಯೋಜಿಸುತ್ತಿರುವುದು ಸ್ವಾಗತಾರ್ಹವೇ ಆದರೂ, ಹಿಂದೂಪರ ಸಂಘಟನೆಗಳ ಮುಖಂಡರಿಗೆ ಕನಿಷ್ಠ ಸೌಜನ್ಯಕ್ಕಾದರೂ ಆಹ್ವಾನ ನೀಡದಿರುವ ಹಿಂದಿನ ಮರ್ಮವೇನು?” ಎಂದು ಪ್ರಶ್ನಿಸಿದರು.

“ಈ ಟ್ರಸ್ಟ್‌ನ ಅಧ್ಯಕ್ಷರು ಹಿಂದೆಯೂ ನಮ್ಮೊಂದಿಗೆ ಕಾರ್ಯನಿರ್ವಹಿಸಿದ್ದರು. ಇದೀಗ ಹೊಸದಾಗಿ ಟ್ರಸ್ಟ್ ಸ್ಥಾಪಿಸಿ ಶೋಭಾಯಾತ್ರೆ ಮಾಡುತ್ತಿದ್ದಾರೆ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹಿಂದೂ ಧರ್ಮದ ಆಚರಣೆಗಳನ್ನು ಟೀಕಿಸುವ ಕಾಂಗ್ರೆಸ್ ಮುಖಂಡರಿಗೆ ಆಹ್ವಾನ ನೀಡುವವರು, ಹಿಂದೂ ಸಂಘಟನೆಗಳ ಮುಖಂಡರನ್ನು ಕಡೆಗಣಿಸಿರುವುದು ಬೇಸರ ತಂದಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರದ ಭರವಸೆ:

ವಿವಾದಗಳ ಹೊರತಾಗಿಯೂ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ವಿಹಿಂಪ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದ ಚೆಲುವರಾಜ್, “ನಾವು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸಬಾರದು ಎಂಬುದಷ್ಟೇ ನಮ್ಮ ಉದ್ದೇಶ,” ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ವಿಹಿಂಪ ಕಾರ್ಯದರ್ಶಿ ಡಿ.ಆರ್. ನಾರಾಯಣಸ್ವಾಮಿ, ಕಾರ್ಯಕರ್ತರಾದ ಮಂಜುನಾಥ್ ಮತ್ತು ಪ್ರಕಾಶ್ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-06/06/2026

0
Sidlaghatta Silk Cocoon Market-06/06/2026

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 06/06/2026

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 421
Qty: 23314 Kg
Mx : 733
Mn: 465
Avg: 651

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 16
Qty: 1003 Kg
Mx : ₹ 793
Mn: ₹ 627
Avg: ₹ 730


For Daily Updates WhatsApp ‘HI’ to 7406303366