Home Blog Page 288

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

0
Sidlaghatta Women Milk Producers Handiganala New Building

ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಗುರುವಾರ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘವು ಸ್ವಾವಲಂಬನೆಯ ದ್ಯೋತಕವಾಗಿ ಅತ್ಯುತ್ತಮ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದುತ್ತಿರುವುದು ಹೆಮ್ಮೆಯ ಸಂಗತಿ. ಸ್ತ್ರೀ ಸಬಲೀಕರಣದ ದ್ಯೋತಕವಾಗಿ ಇದು ತಾಲ್ಲೂಕಿನಲ್ಲಿ ಎದ್ದು ನಿಂತಿದೆ ಎಂದು ಅವರು ತಿಳಿಸಿದರು.

 ಮಹಿಳೆಯರ ಸ್ವಾವಲಂಬನೆ, ಉಪ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಪ್ರಾರಂಭಗೊಂಡ ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘವು ಹೈನುಗಾರರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಯಾವುದೇ ರೀತಿಯ ರಾಜಿಯಿಲ್ಲದೆ ವ್ಯವಹರಿಸುತ್ತಿದೆ ಎಂದು ಹೇಳಿದರು.

 ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿ, 2006 ರಲ್ಲಿ ಪ್ರಾರಂಭವಾದ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದುವುದರೊಂದಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ ಮೊಟ್ಟಮೊದಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಎಂಬುದಾಗಿ ಇತಿಹಾಸವನ್ನು ನಿರ್ಮಿಸಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿವೆ. ಇದೇ ಮಾದರಿಯಲ್ಲಿ ಇತರರೂ ಕಾರ್ಯತತ್ಪರರಾಗಬೇಕಿದೆ ಎಂದರು.

 ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಎಂ.ಆರ್.ಸುಜಾತ ನಾಗರಾಜು, ಕೋಚಿಮುಲ್ ನಿರ್ದೇಶಕಿ ಸುನಂದಮ್ಮ, ಉಪವ್ಯವಸ್ಥಾಪಕ ಬಿ.ವಿ.ಚಂದ್ರಶೇಖರ್, ಪ್ರಭು, ಗುಲಾಬ್ ಜಾನ್, ಎನ್.ಬಿ.ಜಯಚಂದ್ರ, ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಂಘದ ನಿರ್ದೇಶಕರಾದ ಬೈರಮ್ಮ, ಮುನಿರತ್ನಮ್ಮ, ಎಸ್.ಎನ್.ಕಲ್ಪನ, ಅನಿತಾ, ಪಾರಿಜಾತ, ಮಂಜುಳಮ್ಮ, ಅನಿತಾ ಪ್ರಕಾಶ್, ಚಿಕ್ಕಮ್ಮ, ಜಯಮ್ಮ, ವೆಂಕಟಲಕ್ಷ್ಮಮ್ಮ ಸಿಬ್ಬಂದಿ ರೂಪಮ್ಮ, ಲಕ್ಷ್ಮಮ್ಮ, ನಾಗವೇಣಿ, ಮುನಿನರಸಮ್ಮ ಹಾಜರಿದ್ದರು.

Sidlaghatta Cocoon Market-25/02/2021

0
Silk cocoon Sidlaghatta Market February 25 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 25/02/2021

CB Lots: 220
Qty: 11940 Kgs
Max: 425
Min: 312
Avg: 378

BV Lots: 03
Qty: 187 Kgs
Max: 434
Min: 418
Avg: 430

ಅಂಬೇಡ್ಕರ್ ಭವನ ನಿರ್ಮಿಸಬೇಕಿದ್ದ ಸ್ಥಳದಲ್ಲಿ ಬೇರೊಂದು ಕಟ್ಟಡ ನಿರ್ಮಾಣ : ದಲಿತ ಸಂಘಟನೆಗಳ ಪ್ರತಿಭಟನೆ

0
Ambedkar Bhavana Protest Sidlaghatta Horticulture Department

ನಗರದ ತೋಟಗಾರಿಕೆ ಇಲಾಖೆ ಆವರಣದ ಖಾಲಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಉಲ್ಲಂಘನೆ ಮಾಡಿ ಅಲ್ಲಿ ಬೇರೊಂದು ಕಟ್ಟಡ ನಿಮಾಣ ಮಾಡಲು ಮುಂದಾಗಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

 ದಸಂಸ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಶಿಡ್ಲಘಟ್ಟದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಲವಾರು ಹೋರಾಟ ನಡೆಸಲಾಗಿದೆ. ಈ ಬಗ್ಗೆ ಹಲವಾರು ಭಾರಿ ಅಧಿಕಾರಿಗಳ ಸಭೆ ಸಹ ನಡೆದು ವಿಫಲವಾಗಿತ್ತು. ಕಳೆದ ಜನವರಿ 28 ರಂದು ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಹಾಗೂ ದಲಿತ ಮುಖಂಡರ ಸಭೆ ನಡೆದಿತ್ತು. ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನ ನಿರ್ಮಾಣ ಮಾಡಲು ಉಪವಿಭಾಗಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್ ರಾಜೀವ್‌ರಿಗೆ ಸಂಸದರು ಸೂಚಿಸಿ ಮುಂಬರುವ ದಿನಗಳಲ್ಲಿ ಸ್ಥಳೀಯ ಶಾಸಕರನ್ನೊಳಗೊಂಡಂತೆ ಸಮುದಾಯದ ಮುಖಂಡರ ಸಭೆ ನಡೆಸಿ ಸ್ಥಳ ಮಂಜೂರಾದ ಕೂಡಲೇ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದಿದ್ದರು.

 ನಂತರದ ದಿನಗಳಲ್ಲಿ ಈ ಬಗ್ಗೆ ಅಧಿಕಾರಿಗಳು ಯಾವುದೇ ವಿಷಯ ಬಹಿರಂಗಪಡಿಸದೇ ಇರುವುದು ಹಾಗೂ ಇಂದು ಏಕಾಏಕಿ ಸದರಿ ಜಾಗದಲ್ಲಿ ಬೇರೊಂದು ಕಟ್ಟಡ ಕಟ್ಟಲು ಮುಂದಾಗಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿರುವ ಕೋಮುವಾದಿ ಮನಸ್ಥಿತಿಯನ್ನು ಸಾಬೀತು ಪಡಿಸಿದಂತಿದೆ ಎಂದರು.

 ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾದ ನಡಾವಳಿಗಳನ್ನೇ ಉಲ್ಲಂಘನೆ ಮಾಡುವುದಾದರೆ ಇಲ್ಲಿ ಕಾನೂನು ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ ಎಂದರು.

 ಕೂಡಲೇ ಸಂಸದರ ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾದಂತೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನ ನಿರ್ಮಾಣ ಮಾಡಲು ಸ್ಥಳ ಮೀಸಲಿಡುವುದು ಸೇರಿದಂತೆ ಸ್ಥಳದಲ್ಲಿ ಬೇರಾವುದೇ ಕಾಮಗಾರಿ ಮಾಡದಂತೆ ತಡೆಯಬೇಕು. ಸಭೆಯ ನಡಾವಳಿಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜಸ್ವ ನಿರೀಕ್ಷಕ ಅಮರೇಂದ್ರ ಮೂಲಕ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಈಧರೆ ಪ್ರಕಾಶ್, ನಾಗನರಸಿಂಹ, ಗುರುಮೂರ್ತಿ, ಕೃಷ್ಣಪ್ಪ, ರವಿ, ನಾರಾಯಣಸ್ವಾಮಿ, ವಿಜಯಕುಮಾರ್, ವೆಂಕಟೇಶಪ್ಪ, ಗೋವಿಂದಪ್ಪ, ರಾಜ್‌ಕುಮಾರ್, ತಿಮ್ಮರಾಜು ಹಾಜರಿದ್ದರು.

Sidlaghatta Cocoon Market-24/02/2021

0
Silk cocoon Sidlaghatta Market February 23 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 24/02/2021

CB Lots: 217
Qty: 11836 Kgs
Max: 438
Min: 122
Avg: 384

BV Lots: 08
Qty: 421 Kgs
Max: 452
Min: 392
Avg: 437

ನಿಧನ ವಾರ್ತೆ – ಎಚ್.ಟಿ.ಪ್ರಭು (ಪ್ರಭಣ್ಣ)

0
Obituary H T Prabhu Prabhanna Melur Kannada Movie Film Distributor

ಮೇಲೂರು ಗ್ರಾಮದ ಎಚ್.ಟಿ.ಪ್ರಭು (ಪ್ರಭಣ್ಣ)(78) ಮಂಗಳವಾರ ನಿಧನರಾಗಿದ್ದಾರೆ. ಮೇಲೂರಿನ ರೈತ ಕುಟುಂಬದ ಹಿನ್ನೆಲೆಯವರಾದ ಇವರು ಬೆಂಗಳೂರಿನಲ್ಲಿ “ಮಹೇಶ್ವರಿ ಪರಮೇಶ್ವರಿ ಕಂಬೈನ್ಸ್” ಎಂಬ ಚಲನಚಿತ್ರ ವಿತರಕಾ ಸಂಸ್ಥೆ ಸ್ಥಾಪಿಸಿ ಚಲನಚಿತ್ರಗಳಾದ ಓಂ, ಪುಟ್ನಂಜ, ಅಮ್ಮೂರು, ಅನ್ನಮಯ್ಯ ಮುಂತಾದ ನೂರಾರು ಚಲನಚಿತ್ರಗಳ ವಿತರಕರಾಗಿ ಹೆಸರು ಮಾಡಿದ್ದರು.

ಇವರು ಪತ್ನಿ, ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಮೇಲೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದವರು ಸಂತಾಪ ಸೂಚಿಸಿದರು.

ಅಪ್ಪೇಗೌಡನಹಳ್ಳಿಯಲ್ಲಿ ಸಿದ್ಧಗೊಂಡಿದೆ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್

0
Sidlaghatta Taluk appegowdanahalli Basketball court

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿ ಅತ್ಯಂತ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಗೊಂಡಿದೆ. ಕೇವಲ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸುವುದಷ್ಟೇ ಅಲ್ಲದೆ ಮಕ್ಕಳಿಗೆ ತರಬೇತಿ ಕೊಡಿಸಲು ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುವೊಬ್ಬರ ಮನವೊಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುಗಳು ಹೊರಹೊಮ್ಮಲು ವೇದಿಕೆ ಸಜ್ಜುಗೊಂಡಿದೆ.

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಬ್ಯಾಸ್ಕೆಟ್ ಬಾಲ್ ಕೋರ್ಟ್

 ಈ ಹಿಂದೆ ನರೇಗಾ ಯೋಜನೆಯಡಿ ಆಟದ ಮೈದಾನದ ಅಭಿವೃದ್ಧಿಗೆ ಹಣ ನೀಡುತ್ತಿರಲಿಲ್ಲ. ಹೊಸದಾಗಿ ಅದನ್ನು ಪರಿಚಯಿಸಲಾಯಿತು. ಈ ಯೋಜನೆಯ ಸದುಪಯೋಗವನ್ನು ಹಲವೆಡೆ ಹಲವು ರೀತಿಯಲ್ಲಿ ಮಾಡಿಕೊಂಡಿರುವರು. ಅಪ್ಪೇಗೌಡನಹಳ್ಳಿಯಲ್ಲಿ “ನಮ್ಮ ಮಕ್ಕಳು ಕಬಡ್ಡಿ, ಕೊಕ್ಕೊ ಮುಂತಾದ ಆಟಗಳ ಜೊತೆ ಬ್ಯಾಸ್ಕೆಟ್ ಬಾಲ್ ಆಟವನ್ನೂ ಕಲಿತು ರಾಜ್ಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಬೇಕು” ಎಂಬ ಆಶಯದೊಂದಿಗೆ ವಿಶಿಷ್ಟವಾಗಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಿದ್ದಾರೆ. ಉದ್ದ ನೂರು ಅಡಿ ಮತ್ತು ಅಗಲ 55 ಅಡಿ ಇರುವ ಈ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಲು ಖರ್ಚಾದ ಹಣ 8 ಲಕ್ಷ ರೂಗಳು.

 “ನಮ್ಮ ಶಾಲೆಯ ಆವರಣದಲ್ಲಿ ಬಹುಕಾಲ ಬಾಳಿಕೆ ಬರುವ ಹಾಗೂ ಸುಂದರವಾದ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಬೇಕೆಂದು ನಾವು ಹೊಸಕೋಟೆಗೆ ಹೋಗಿ ನೋಡಿಕೊಂಡು ಬಂದೆವು. ಸಂಪೂರ್ಣ ಕಾಂಕ್ರೀಟ್ ನಲ್ಲಿ ಮಾಡಿದ ಕೋರ್ಟ್ ಮೇಲೆ ವಿಜಯ್ ಅವರಿಂದ ಬಣ್ಣವನ್ನು ಬಳಿಸಿದ್ದೇವೆ. ಈ ಹಿಂದೆ ಅವರೇ ನಮ್ಮ ಶಾಲೆಯ ಗೋಡೆಗಳ ಮೇಲೆ ರೈಲು, ಬಸ್ಸು, ಏರೋಪ್ಲೇನು ಮತ್ತು ಹಡಗನ್ನು ಚಿತ್ರಿಸಿದ್ದರು. ಇದಕ್ಕಾಗಿ ಬಳಸಿರುವ ಬಣ್ಣ ಮತ್ತು ಅದನ್ನು ಬಳಿಯಲು ನೀಡಿದ ಹಣವೇ ಸುಮಾರು 90 ಸಾವಿರ ರೂಗಳಷ್ಟಾಗಿದೆ. ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳದೆ ನಾವು ಕೆಲಸ ಮಾಡಿಸಿದ್ದೇವೆ” ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.

 “ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸಿದ್ದಾಗಿದೆ. ಈಗ ನಮ್ಮ ಮಕ್ಕಳಿಗೆ ತರಬೇತಿಯನ್ನು ನೀಡಲು ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಶಿಡ್ಲಘಟ್ಟದ ಮುನಿಕೃಷ್ಣ ಅವರನ್ನು ಮಾತನಾಡಿದ್ದೇವೆ. ಅವರು ವಾರಕ್ಕೆರಡು ಬಾರಿ ಬಂದು ತರಬೇತಿ ನೀಡುವುದಾಗಿ ತಿಳಿಸಿದ್ದಾರೆ” ಎಂದು ಅವರು ಹೇಳಿದರು.

-ಡಿ.ಜಿ.ಮಲ್ಲಿಕಾರ್ಜುನ

Sidlaghatta Cocoon Market-23/02/2021

0
Silk cocoon Sidlaghatta Market February 23 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 23/02/2021

CB Lots: 326
Qty: 18131 Kgs
Max: 440
Min: 313
Avg: 376

BV Lots: 01
Qty: 19 Kgs
Max: 420
Min: 420
Avg: 420

ಶಿಡ್ಲಘಟ್ಟದ ಶ್ರೀ ವೇಣುಗೋಪಾಲಸ್ವಾಮಿಯ ರಥೋತ್ಸವ

0
Sidlaghatta Venugopalaswamy temple chariot

ಶಿಡ್ಲಘಟ್ಟ ನಗರದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ ನಗರದಲ್ಲಿ ಶುಭಕಾರ್ಯಗಳು ಪ್ರಾರಂಭವಾಗುವ ಸಂಪ್ರದಾಯವಿದೆ.

“ಊರದೇವರು” ಎಂದೇ ಪ್ರಸಿದ್ಧ­ವಾದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿ­ಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇಗು­ಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

 ಶಾಸಕ ವಿ.ಮುನಿಯಪ್ಪ ಮತ್ತು ಶಿರಸ್ತೆದಾರ್ ಮಂಜುನಾಥ್ ರಥೋತ್ಸವಕ್ಕೆ ಚಾಲನೆ ನೀಡಿ­ದರು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡ­­ಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮಯೂರ ವೃತ್ತ­ದಲ್ಲಿ ಪಾನಕ ಮತ್ತು ಹೆಸರುಬೇಳೆ ಹಂಚಲಾಯಿತು.

 ವೇಣುಗೋಪಾಲಸ್ವಾಮಿ ದೇಗುಲ­ದಲ್ಲಿ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯ­ಗಳಲ್ಲಿ ಭಾಗಿಯಾಗುವುದು ವಿಶೇಷ­ವಾಗಿದೆ.

ಅರ್ಚಕ ವೈ.ಎನ್‌.ದಾಶರಥಿಭಟ್ಟಾಚಾರ್ಯ, ದೇಗುಲ ಸಮಿತಿ ಸದಸ್ಯರು, ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್‌ ಸದಸ್ಯರು ಹಾಜರಿದ್ದರು.

Sidlaghatta Cocoon Market-22/02/2021

0
Silk cocoon Sidlaghatta Market February 22 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 22/02/2021

CB Lots: 315
Qty: 17417 Kgs
Max: 435
Min: 150
Avg: 379

BV Lots: 02
Qty: 78 Kgs
Max: 455
Min: 452
Avg: 454

ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು – ಜಿಲ್ಲಾಧಿಕಾರಿ ಆರ್.ಲತಾ

0
Sidlaghatta Nehru Stadium Development Chikkaballapur District Commissioner R Latha Roller Skating Championship Bodaguru

ತಾಲ್ಲೂಕಿನ ಬೋದಗೂರು ಬಳಿಯ ಲೇಔಟ್ ನಲ್ಲಿ ಭಾನುವಾರ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಶಿಡ್ಲಘಟ್ಟ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ಜಿಲ್ಲಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿನ ಸ್ಕೇಟಿಂಗ್ ಟ್ರಾಕ್ ಉಪಯುಕ್ತವಾಗುವ ರೀತಿಯಲ್ಲಿ ಮಾಡಲು ಯೋಜನೆ ರೂಪಿಸಿ ಸ್ಕೇಟಿಂಗ್ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

 ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ವತಿಯಿಂದ ಮಾಡುತ್ತಿರುವ ಕೆಲಸಗಳು ಶ್ಲಾಘನೀಯ. ಕ್ರೀಡಾಂಗಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಿಮ್ಮೆಲ್ಲಾ ಯೋಜನೆಗಳು ಹಾಗೂ ರೂಪುರೇಷೆಗಳನ್ನು ತನ್ನಿ. ಕೂತು ಚರ್ಚಿಸಿ ಅಭಿವೃದ್ಧಿ ಕಾರ್ಯವನ್ನು ಮುನ್ನಡೆಸೋಣ. ನಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಮೂಲಕ ಅವರು ನಮ್ಮ ಜಿಲ್ಲೆಗೆ ಕೀರ್ತಿ ತರುವ ಸಾಧಕರಾಗಲಿ ಎಂದು ಹೇಳಿದರು.

 ಮಕ್ಕಳಲ್ಲಿ ಉತ್ಸಾಹ, ಪ್ರತಿಭೆ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಸ್ಕೇಟಿಂಗ್ ನಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದನ್ನು ಕಂಡು ಖುಷಿಯಾಗಿದೆ. ಈ ಮಕ್ಕಳಿಗೆ ಸೂಕ್ತವಾದ ಟ್ರಾಕ್ ಮಾಡಿಸಿಕೊಡೋಣ ಎಂದರು.

 ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಕೇಟಿಂಗ್ ಕೋಚ್ ರವೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು.

 ತಹಶೀಲ್ದಾರ್ ರಾಜೀವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡಿ, ತಾಲ್ಲೂಕು ಆರೋಗಾಧಿಕಾರಿ ಡಾ.ವೆಂಕಟೇಶಮೂರ್ತಿ, ಸಿಡಿಪಿಒ ನಾಗವೇಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ವಿಜಯೇಂದ್ರ, ಸದಸ್ಯೆ ಆನೂರು ಲತಾ ದೇವರಾಜು, ಎಚ್.ಆರ್.ವೆಂಕಟೇಶ್, ನಿರಂಜನ್, ಟಿ.ಟಿ.ನರಸಿಂಹಪ್ಪ, ಪ್ರಭಾಕರ್, ಪಿಡಿಒ ಕಾತ್ಯಾಯಿನಿ, ಶಿವಪ್ಪ ಹಾಜರಿದ್ದರು. 

Sidlaghatta Cocoon Market-21/02/2021

0
Silk cocoon Sidlaghatta Market February 21 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 21/02/2021

CB Lots: 233
Qty: 12628 kgs
Max: 430
Min: 310
Avg: 382

BV Lots: NILL

ಸರ್ಕಾರಿ ಶಾಲೆಗಳಿಗೆ ಇ ಪ್ರೊಜೆಕ್ಟರ್, ಟ್ಯಾಬ್ ಮತ್ತು ನೋಟ್ ಪುಸ್ತಕ ವಿತರಣೆ

0
Computer, Projector, Notebook distribution Rotary Club Ulsoor One World One Family Foundation Bangalore sidalghatta

ಚಿಕ್ಕಬಳ್ಳಾಪುರ ನವ ಜೀವನ ಸೇವಾ ಸಂಸ್ಥೆ, ರೋಟರಿ ಅಲಸೂರು ಬೆಂಗಳೂರು ಮತ್ತು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಇ ಪ್ರೊಜೆಕ್ಟರ್, ಟ್ಯಾಬ್ ಮತ್ತು ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು

 ತಾಲ್ಲೂಕಿನ ದೊಡ್ಡತೇಕಹಳ್ಳಿ ಪ್ರೌಢಶಾಲೆಗೆ ಒಂದು ಇ ಪ್ರೊಜೆಕ್ಟರ್ ಮತ್ತು 5 ಟ್ಯಾಬ್ ಗಳನ್ನು, ಬೆಳ್ಳೂಟಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಸ್ಟೇಷನರಿ ವಸ್ತುಗಳನ್ನು, ಮೇಲೂರಿನ ಪ್ರೌಢ ಶಾಲಾ ಮಕ್ಕಳಿಗೆ 3 ಟ್ಯಾಬ್ ಮತ್ತು ಪುಸ್ತಕ ಹಾಗೂ ಸ್ಟೇಷನರಿ ವಸ್ತುಗಳನ್ನು ವಿತರಣೆ ಮಾಡಲಾಯಿತು

ರೋಟರಿ ಕ್ಲಬ್ಬಿನ ಅಧ್ಯಕ್ಷ ಆರ್.ಪಿ. ಶೆಟ್ಟಿ, ನವಜೀವನ ಸೇವಾ ಸಂಸ್ಥೆ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಕಾರ್ಯದರ್ಶಿ ಕೆ.ಪಿ.ರವಿ, ಖಜಾಂಚಿ ರಾಮಚಂದ್ರ ಹಾಗೂ ವಿ.ಆರ್. ಡಬ್ಲ್ಯು ನಾಗೇಶ್, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಎಸ್ ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಬೆಳ್ಳೂಟಿ ಗ್ರಾಮ ಪಂಚಾಯಿತಿಯ ಸದಸ್ಯ ಸಂತೋಷ್, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಹಾಜರಿದ್ದರು

ಸರ್ಕಾರದ ಸೇವೆಗಳನ್ನು ಮನೆಮನೆಗೆ ತಲುಪಿಸಿದ ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ

0
Bodaguru Chikkaballapur District commissioner R Latha Sidlaghatta

“ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮದಡಿ ಜನರ ಬಳಿಗೆ ಅಧಿಕಾರಿಗಳು ಬಂದು ವಿವಿಧ ಸವಲತ್ತುಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ, ಈ ಕಾರ್ಯಕ್ರಮದಿಂದ ಗ್ರಾಮದ ಹಲವರಿಗೆ ವಿವಿಧ ಸವಲತ್ತುಗಳು ನೀಡಲಾಗುತ್ತಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.

 ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮೀಣರಿಗೆ ವಿವಿದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.

 ಸರ್ಕಾರದ ಸವಲತ್ತುಗಳು ಜನರಿಗೆ ತಲುಪಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

 ಗ್ರಾಮದ ಹಿರಿಯ ನಾಗರಿಕರಿಗೆ ಸಂದ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಆದೇಶ ಪತ್ರ ವಿತರಣೆ ಸೇರಿದಂತೆ 94 ಸಿ ಹಕ್ಕುಪತ್ರ ವಿತರಣೆ, ವಿಶೇಷ ಚೇತನರಿಗೆ ಪಿಂಚಣಿ ಆದೇಶ ಪತ್ರ, ಹಲವರಿಗೆ ಸಲಕರಣೆ ಸೇರಿದಂತೆ ೩೫ ಫೌತಿ ವರಸೆ ಖಾತೆ, 15 ಜನರಿಗೆ ಪಡಿತರ ಚೀಟಿ ಸೇರಿದಂತೆ ಹಲವರಿಗೆ ಭಾಗ್ಯ ಲಕ್ಷ್ಮಿ ಬಾಂಡ್ ವಿತರಿಸಲಾಯಿತು.


“ಯು ಡಿಸರ್ವ್ ದ ಸಸ್ಪೆಂಶನ್. ಯಾವೂರು ನಿಂದು. ಮನೆಗೆ ಕಳಿಸಿಬಿಡುತ್ತೇನೆ. ನನ್ನವರೆಗೂ ಈ ಚಿಕ್ಕ ಸಮಸ್ಯೆ ಬರಬೇಕೇನ್ರಿ. ಇವರನ್ನು ನೋಡಿದರೆ ಗೊತ್ತಾಗಲ್ವ ಪಿಂಚಣಿ ಮಾಡಿಕೊಡಬೇಕು ಅಂತ” ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಗ್ರಾಮ ಲೆಕ್ಕಿಗ ನಾಗರಾಜ್ ಅವರನ್ನು ಗದರಿದರು.

ಪಿಂಚಣಿಗಾಗಿ ಜಿಲ್ಲಾಧಿಕಾರಿಗಳ ಮೊರೆ ಹೋದ ಬೋದಗೂರು ಮಂಜುನಾಥ್

 ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರಿಗೆ ಗ್ರಾಮದ ಮಂಜುನಾಥ ಎಂಬುವವರು ತಮ್ಮ ಪರಿಸ್ಥಿತಿಯನ್ನು ವಿವರಿಸಿ ಪಿಂಚಣಿ ಮಾಡಿಕೊಡದಿರುವ ಅಧಿಕಾರಿಗಳ ಬಗ್ಗೆ ದೂರಿದಾಗ ಅವರು ಗ್ರಾಮ ಲೆಕ್ಕಿಗರಿಗೆ ಇವತ್ತೇ ಅವರಿಗೆ ಪಿಂಚಣಿ ಪ್ರಮಾಣಪತ್ರ ವಿತರಿಸುವಂತೆ ತಾಕೀತು ಮಾಡಿದರು.

 “ನೋಡಯ್ಯ ಈ ರೀತಿಯ ಜನರಿಗೆ ತೊಂದರೆ ಕೊಡಬಾರದು. ಇಂಥ ವಿಷಯಗಳು ನಮ್ಮ ವರೆಗೂ ಬರಬಾರದು. ಇವರಿಗೆ ಕೆಲಸ ಆಗದಿದ್ದರೆ ನೀನು ಖಂಡಿತ ಮನೆಗೆ ಹೋಗುತ್ತೀಯ. ಟ್ರಾನ್ಸ್ ಫರ್ ಅಲ್ಲ, ಸೀದಾ ಮನೆಗೆ ಅಷ್ಟೇ. ನೀವು ಏನು ಕೆಲಸ ಮಾಡುತ್ತಿದ್ದೀರ. ಸರ್ಕಾರದಿಂದ ಕೊಡುವ ಹಣ ಅವರಿಗೆ ಸಿಗುವುದು ಬೇಡವಾ. ಅವರನ್ನು ನೋಡಿದರೆ ನಿಮಗೇನೂ ಅನ್ನಿಸಲ್ವಾ. ಮನೆಮನೆಗೆ ಹೋದಾಗ ಇವರು ಹೇಗೆ ನಿಮ್ಮ ಕಣ್ಣಿಗೆ ಬೀಳಲಿಲ್ಲ. ಸಂಜೆ ಹೊತ್ತಿಗೆ ಸ್ಯಾಂಕ್ಷನ್ ಆರ್ಡರ್ ಕೊಡಬೇಕು” ಎಂದು ತರಾಟೆಗೆ ತೆಗೆದುಕೊಂಡರು.


ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಮನೆಯೊಂದಕ್ಕೆ ಭೇಟಿ ನೀಡಿದಾಗ ಅವರು ಮನೆಯ ಬಳಿ ಇರುವ ಟ್ರಾನ್ಸ್ ಫಾರ್ಮರ್ ನಿಂದ ತೊಂದರೆಯಾಗಿದೆ ದೂರ ಹಾಕಿಸಿ ಎಂದು ವಿನಂತಿಸಿದರು

ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮಹಿಳೆಯೊಬ್ಬರು ತಮ್ಮ ಮನೆಗೆ ಹೋಗಲು ದಾರಿ ಇಲ್ಲವೆಂದು ದೂರು ಸಲ್ಲಿಸಿದರು

ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಗುಡಿಸಲು ಮನೆಯವರು ನಿವೇಶನ ಕೋರಿದರು

ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಶಾಲೆಗೆ ಹೆಚ್ಚುವರಿ ಕೊಠಡಿ ಮಂಜೂರು ಮಾಡುವಂತೆ ಮಾನವಿ ಮಾಡಿದರು. ಗ್ರಾಮದ ಅಂಗನವಾಡಿ ಕಟ್ಟಡ ಚಿಕ್ಕದಾಗಿದ್ದು ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿಸಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿ ಆರ್.ಲತಾ ನೀಡಿದರು.

Sidlaghatta Cocoon Market-20/02/2021

0
Silk cocoon Sidlaghatta Market February 20 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 20/02/2021

CB Lots: 289
Qty: 15545 Kgs
Max: 430
Min: 300
Avg: 382

BV Lots: 02
Qty: 37 Kgs
Max: 471
Min: 395
Avg: 429

ಸವಿತಾ ಮಹರ್ಷಿ ಜಯಂತ್ಯುತ್ಸವ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ

0
Savita Maharshi Sidlaghatta Taluk Office

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಮಂಜುನಾಥ್ ಮಾತನಾಡಿದರು.

ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು ತಿಳಿದುಬರುತ್ತದೆ. ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿರುವುದರಿಂದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದ್ದಾರೆ ಎಂದು ಅವರು ತಿಳಿಸಿದರು.

 ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಅದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್‌ ವ್ಯಕ್ತಿಗಳ ತತ್ವ-ಸಂದೇಶಗಳು ಸರ್ವಕಾಲಿಕವಾಗಿದ್ದು ಅದರ ಹಲವು ಭಾಗವನ್ನಾದರೂ ಜನರು ಜೀವನದಲ್ಲಿ ಅಳವಡಿಸಿಕೊಂಡಾಗ, ಉತ್ತಮ ಸಮಾಜ ನಿರ್ಮಾಣದೊಂದಿಗೆ ಸದೃಢ ಭಾರತ ಹೊರಹೊಮ್ಮಲು ಸಾಧ್ಯವಿದೆ ಎಂದರು.

  ಅಧಿಕಾರಿ ವಸಂತ್ ಮಾತನಾಡಿ, ಭಾರತ ದೇಶ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಒಬ್ಬರು.  ಭಾರತದಲ್ಲಿ ಅತ್ಯಂತ ಧೈರ್ಯಶಾಲಿ ಪುರುಷರು ಮಾತ್ರವಲ್ಲ, ಕೆಲವೊಂದು ಮಹಿಳೆಯರು ಕೂಡ ಆಡಳಿತ ನಡೆಸಿದ ಇತಿಹಾಸವಿದೆ. ಈ ಧೈರ್ಯಶಾಲಿ ಸಾಮ್ರಾಜ್ಯದ ಅಧಿಪತಿಗಳು ತಮ್ಮ ತಾಯಿನಾಡು ಮತ್ತು ಸ್ವರಾಜ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಜಿಸಿದ್ದಾರೆ. ಅಂತಹ ಮಹಾನ್‌ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು ಎಂದು ಹೇಳಿದರು.

 ಸವಿತಾ ಸಮಾಜದ ನಾರಾಯಣಸ್ವಾಮಿ, ಬಾಲರಾಜು, ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ, ಕೃಷ್ಣಪ್ಪ ಹಾಜರಿದ್ದರು.

ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

0
SKDRDP Gnana Vikasa Sidlahgatta

ತಾಲ್ಲೂಕಿನ ಬಸವಾಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವರಾಜು ಮಾತನಾಡಿದರು.

ಪ್ರತಿಯೊಬ್ಬರು ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಿರಿ. ಬ್ಯಾಂಕಿನಲ್ಲಿ ನಾನಾ ರೀತಿಯ ಪ್ರಯೋಜನಗಳಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅವರು ತಿಳಿಸಿದರು.

 ಹಿಂದೆ ಮಹಿಳೆಯರು ಮನೆಯಿಂದ ಹೊರಗೆ ಬಂದು ಮಾಹಿತಿ ಕೊಡಲು ಕೂಡ ತುಂಬಾ ಭಯಪಡುತ್ತಿದ್ದರು. ಧರ್ಮಸ್ಥಳದ ಜ್ಞಾನವಿಕಾಸ ಕಾರ್ಯಕ್ರಮದ ದಿಸೆಯಿಂದ ಮಹಿಳೆಯರು ಎಲ್ಲಾ ರೀತಿಯಲ್ಲಿ ಮುಂದೆ ಬಂದಿದ್ದು, ಜೊತೆಯಲ್ಲಿ ಆಟೋಟ ಸ್ಪರ್ಧೆಯಲ್ಲಿ ಕೂಡ ತಮ್ಮ ವಯಸ್ಸನ್ನು ಮರೆತು ಸಕ್ರಿಯವಾಗಿ ಭಾಗವಹಿಸಿದ್ದನ್ನು ಕಂಡು ತುಂಬಾ ಹೆಮ್ಮೆಯೆನಿಸುತ್ತಿದೆ ಎಂದರು.

 ಜಿಲ್ಲಾ ನಿರ್ದೇಶಕರಾದ ಬಿ.ವಸಂತ್ ಮಾತನಾಡಿ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನವಿಕಾಸ  ಕಾರ್ಯಕ್ರಮ ತಾಲೂಕಿನಲ್ಲಿ ಪ್ರಾರಂಭವಾಗಿ 7 ವರ್ಷಗಳನ್ನು ಪೂರೈಸಿದ್ದು, ಇದರ ಪ್ರಯಕ್ತ ಮಹಿಳಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಸವಾಪಟ್ಟಣ ಗ್ರಾಮದಲ್ಲಿ ಹಮ್ಮಿಕೊಂಡು ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಬಹುಮಾನ ವಿತರಿಸುತ್ತಿದ್ದೇವೆ ಎಂದು ಹೇಳಿದರು..

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯಾದ್ಯಂತ ಸಹಸ್ರಾರು ಸಂಘಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೇವಲ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಗುರಿ ನಮ್ಮದಲ್ಲ. ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಕುಟುಂಬ ನಿರ್ವಹಣೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಂತೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.

 ಸಂಘದ ವತಿಯಿಂದ ಮದ್ಯವರ್ಜನ ಶಿಬಿರ, ಸಂಪೂರ್ಣ ಸುರಕ್ಷಾ ಕಾರ್ಯಕ್ರಮ, ಆಯುಷ್ಮಾನ್ ಕಾರ್ಯಕ್ರಮ, ಆರೋಗ್ಯ ರಕ್ಷ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಅವರಿಗೆ ಧೈರ್ಯ, ನಂಬಿಕೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂದಿನ ದಿನ ನೀವೆಲ್ಲಾ ಇಷ್ಟು ಬದಲಾವಣೆಯಾಗಲು ಕಾರಣ ಜ್ಞಾನ ವಿಕಾಸ ಕಾರ್ಯಕ್ರಮ ಎಂದರು.

ಈ ಸಂದರ್ಭದಲ್ಲಿ ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಬಾಂಬ್ ಬ್ಲಾಸ್ಟ್, ನಿಂಬೆಹಣ್ಣು ಓಟ,  ಆಟಗಳನ್ನು ಏರ್ಪಡಿಸಿ ವಿಜೇತರಾದ ಮಹಿಳೆಯರಿಗೆ ಬಹುಮಾನವನ್ನು ಸಂಸ್ಥೆ ವತಿಯಿಂದ ನೀಡಲಾಯಿತು.

 ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್ ಅಧಿಕಾರಿ ಜಂಗಮಪ್ಪ,  ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಕ್ಷಿ, ವಲಯದ ಮೇಲ್ವಿಚಾರಕ ನಾರಪ್ಪ,  ಸೇವಾಪ್ರತಿನಿಧಿ ಚೈತ್ರ ಹಾಗೂ ನಲವತ್ತು ಜನ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.

ಸರ್ಕಾರಿ ಶಾಲೆಯಲ್ಲೊಂದು ಪುಟಾಣಿ ವಿಜ್ಞಾನ ಪ್ರಯೋಗಾಲಯ

0
Sidlaghatta Tatahalli Government School Science Laboratory

ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್, ಸಿಟ್ರಿಕ್ಸ್ ಸಂಸ್ಥೆ, ಸ್ಟೆಮ್ ಸಂಸ್ಥೆ ಸಹಯೋಗದಲ್ಲಿ ಪ್ರಾರಂಭವಾದ ಪುಟಾಣಿ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಗ್ರಾಮಾಂತರ ಟ್ರಸ್ಟ್ ನ ಪಿ.ಉಷಾಶೆಟ್ಟಿ ಮಾತನಾಡಿದರು.

ವಿಜ್ಞಾನ ಕಲಿಕೆಯಲ್ಲಿ ಪ್ರಯೋಗಾಲಯ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಜಿಲ್ಲೆಯಲ್ಲಿ ಮೊದಲ ಬಾರಿಗೆ 2 ಸರ್ಕಾರಿ ಶಾಲೆಗಳು ಎಸ್‌ಟಿಇಎಂ ಸೈನ್ಸ್ ಲ್ಯಾಬ್‌ಗಳ ಸೌಲಭ್ಯವನ್ನು ಹೊಂದುತ್ತಿವೆ. ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆ ಮತ್ತು ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪುಟಾಣಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಅನುಕೂಲವಾಗುವ 75 ವಿಜ್ಞಾನ ಪರಿಕಲ್ಪನೆಗಳ ಮಾದರಿಗಳನ್ನು ನೀಡಲಾಗುತ್ತಿದೆ. ಎರಡೂ ಶಾಲೆಗಳ ವಿಜ್ಞಾನ ಮತ್ತು ಗಣಿತದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ದಾನಿಗಳಾದ ಸಿಟ್ರಿಕ್ಸ್ ಆರ್ & ಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗ್ರಾಮಂತರ ಟ್ರಸ್ಟ್ ಸಹಯೋಗದಲ್ಲಿ ಪ್ರಯೋಗಾಲಯಗಳನ್ನು ಮಾಡಿದೆ ಎಂದರು.

 ಈ ಸಂದರ್ಭದಲ್ಲಿ ಆರ್.ಟಿ.ಇ ಕಾರ್ಯಪಡೆಯ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳು ಮತ್ತು ರ‍್ಯಾಕ್ ಕೊಡುಗೆಯಾಗಿ ನೀಡಲಾಯಿತು. ಶಾಲಾ ಮಕ್ಕಳೇ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನಾರ್ಪಣೆ ನಡೆಸಿದ್ದು ವಿಶೇಷವಾಗಿತ್ತು. ತಾತಹಳ್ಳಿ ಸರ್ಕಾರಿ ಶಾಲೆಯ ಮೊಟ್ಟಮೊದಲ ಯೂಟ್ಯೂಬ್ ಚಾನಲ್ “ಅವಲಕ್ಕಿ ಪವಲಕ್ಕಿ”ಯನ್ನು ಉದ್ಘಾಟಿಸಲಾಯಿತು.

 ಒರಾಕಲ್ ಸಂಸ್ಥೆಯ ಶ್ರೀನಿವಾಸಗೌಡ, ಆರ್.ಟಿ.ಇ ಕಾರ್ಯಪಡೆಯ ಸತೀಶ್, ಪೀಣ್ಯ ಜ್ಯೂನಿಯರ್ ಕಾಲೇಜ್ ಉಪಪ್ರಾಂಶುಪಾಲರಾದ ನಾಗರತ್ನಮ್ಮ, ಅಬ್ಲೂಡು ಸಿ.ಆರ್.ಸಿ ಸಂಪನ್ಮೂಲ ವ್ಯಕ್ತಿ ಸುರೇಶ್ ಬಾಬು, ಮುಖ್ಯಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಎಸ್.ಕಲಾಧರ್, ಡಿ.ಎಸ್.ಶ್ರೀಕಾಂತ್, ಕೆ.ಎ.ನಾಗರಾಜ್ ಹಾಜರಿದ್ದರು.

Sidlaghatta Cocoon Market-19/02/2021

0
Silk cocoon Sidlaghatta Market February 18 2021

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 19/02/2021

CB Lots: 234
Qty: 12526 Kgs
Max: 430
Min: 280
Avg: 382

BV Lots: 01
Qty: 52 Kgs
Max: 468
Min: 468
Avg: 468

ನಲ್ಲಿಮರದಹಳ್ಳಿಯ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪನಾ ಮಹೋತ್ಸವ

0
sidlaghatta Nallimaradahalli Temple Rejuvenation

ನಗರದ ಹೊರವಲಯದ ನಲ್ಲಿಮರದಹಳ್ಳಿಯ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯವನ್ನು ವಿನೂತನವಾಗಿ ನಿರ್ಮಿಸಿದ್ದು, ಕಳೆದ ಮೂರು ದಿನಗಳಿಂದ ನೂತನ ದೇವಾಲಯದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಸ್ಥಿರಬಿಂಬ, ಶಿವಲಿಂಗ, ನಾಗರಾಜ, ಧ್ವಜಸ್ಥಂಬ, ವಿಮಾನಗೋಪುರ ಕಲಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

 ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯವನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು ಒಗ್ಗೂಡಿ ಇದೀಗ  ಹಳೆಯ ವಿಗ್ರಹವನ್ನು ಹಾಗೆಯೇ ಇದ್ದ ಸ್ಥಳದಲ್ಲಿಯೇ ಉಳಿಸಿಕೊಂಡು ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ.

 ಶಿವಾರಪಟ್ಟಣದ ಶಿಲ್ಪಿಗಳು ಕೆತ್ತಿರುವ ಆರು ಅದಿ ಎತ್ತರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ವಿಗ್ರಹ ಮತ್ತು 22 ಅಡಿ ಎತ್ತರದ ಧ್ವಜಸ್ಥಂಭ ದೇವಾಲಯದ ಮುಕುಟಪ್ರಾಯವಾಗಿದೆ. ದೇವಾಲಯದ ಮೇಲೆ ದಶಾವತಾರದ ಶಿಲ್ಪಗಳು, ಗೋಪುರದ ಬಳಿ ಆಂಜನೆಯ, ಗರುಡ ಮತ್ತು ಲಕ್ಷ್ಮೀನರಸಿಂಹಸ್ವಾಮಿ, ದೇವಸ್ಥಾನದ ಒಳಗೆ ಜಯ ವಿಜಯರ ಮೂರ್ತಿಗಳು, ಧ್ವಾರದಲ್ಲಿನ ಸಿಂಹಗಳು, ಕಂಬಗಳ ಮೇಲೆ ಮಂಗಳ ವಾದ್ಯಗಳನ್ನು ನುಡಿಸುವವರ ಶಿಲ್ಪಗಳಿಗೆ ಬಣ್ಣಗಳನ್ನು ಬಳಿಯುವ ಮೂಲಕ ಆಕರ್ಷಕಗೊಳಿಸಲಾಗಿದೆ. ದೇವಾಲಯದ ಪಕ್ಕದಲ್ಲಿದ್ದ ಪುರಾತನ ಅತ್ತಿ ಮರವನ್ನು ಸಂರಕ್ಷಿಸಿದ್ದಾರೆ.

 ಕಲ್ಲಿನ ಮುಖ್ಯಧ್ವಾರದ ಚೌಕಟ್ಟು, ಗರ್ಭಗುಡಿ, ಧ್ವಜಸ್ಥಂಭವನ್ನು ಕಾರ್ಕಳದ ಶಿಲ್ಪಿಗಳು ಕೆತ್ತಿದ್ದರೆ, ಗೋಪುರದ ಶಿಲ್ಪಗಳನ್ನು ಸಿಮೆಂಟಿನಲ್ಲಿ ನಾಗಪಟ್ನಂ ಶಿಲ್ಪಿಗಳು ರೂಪಿಸಿರುವರು. ದಕ್ಷಿಣ ಕನ್ನಡ ಶೈಲಿಯ ದೇವಾಲಯದಂತೆ ಗರ್ಭಗುಡಿಗೆ ಒಂಬತ್ತು ಮೆಟ್ಟಿಲು ಹತ್ತಿ ಹೋಗುವಂತೆ ಕಟ್ಟಿಸಲಾಗಿದೆ.

 ವಿವಿಧ ಹೋಮ, ಪೂಜೆಗಳನ್ನು ನಡೆಸಿ ಅನ್ನಸಂತರ್ಪಣೆಯನ್ನು ಸಹ ಶ್ರೀಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು.

ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಾಲಯ ಜೀರ್ಣೋದ್ಧಾರದ ಪೂಜಾ ಕಾರ್ಯಕ್ರಮ

0
Sidlaghatta Varadanayakanahalli Sri Patalamma sri Veersonnamma Devi Temple Rejuvenation

ತಾಲ್ಲೂಕಿನ ವರದನಾಯಕನಹಳ್ಳಿಯ ಅತ್ಯಂತ ಪುರಾತನ ದೇವಿಯರಾದ ಶ್ರೀಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯರ ಶಿಲಾ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಜೀರ್ಣೋದ್ಧಾರದ ಪೂಜಾ ಕಾರ್ಯಕ್ರಮವನ್ನು ಬುಧವಾರದಿಂದ ಶುಕ್ರವಾರದವರೆಗೂ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತಿದೆ.

 ತಾಲ್ಲೂಕಿನ ವರದನಾಯಕನಹಳ್ಳಿಯ ಗ್ರಾಮದೇವತೆಯರಾದ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯರು ಶಕ್ತಿ ದೇವಿಯರಾಗಿ ಪ್ರಸಿದ್ಧರು. ಈ ಸಹೋದರಿ ದೇವಿಯರ ರಥೋತ್ಸವ ಮತ್ತು ಜೋಡಿ ಉಟ್ಲು ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತದೆ.

 ವರದನಾಯಕನಹಳ್ಳಿ ಎಂಬ ಹೆಸರು ವರದನಾಯಕ ಎಂಬ ಪಾಳೇಗಾರ ಸ್ಥಾಪಿಸಿದ್ದರಿಂದ ಬಂದಿದೆ ಎಂದು ಹಿರಿಯರು ಹೇಳುತ್ತಾರೆ. ಆತನ ಕನಸಿನಲ್ಲಿ ಬಂದ ಗ್ರಾಮದೇವತೆಯರು, ಗ್ರಾಮದಲ್ಲಿ ತಮಗಿರುವ ಗುಡಿ ಸಣ್ಣದು, ದೊಡ್ಡದಾಗಿ ಕಟ್ಟಿಸುವಂತೆ ಆಜ್ಞಾಪಿಸಿದಾಗ ಆತ ಈಗಿರುವ ಸ್ಥಳದಲ್ಲಿ ದೇವಿಯರಿಗೆ ಗುಡಿಯನ್ನು ಕಟ್ಟಿಸಿದನಂತೆ. ಭೂಮಿ ಆಗಸ ಒಂದಾಗುವಂತೆ ಕಂಡ ದೇವಿಯರ ದರ್ಶನದಿಂದ ಆತ ಅವರ ದಾಸಾನುದಾಸನಾದ ಎಂದು ಕಥೆಯನ್ನು ಗ್ರಾಮಸ್ಥರು ಹೇಳುತ್ತಾರೆ.

 ಈ ಶಕ್ತಿದೇವತೆಗಳ ರಥೋತ್ಸವವನ್ನು ಗ್ರಾಮಸ್ಥರು ಒಗ್ಗೂಡಿ ನೆಂಟರನ್ನೆಲ್ಲಾ ಕರೆಸಿ ಆಚರಿಸುತ್ತಾರೆ. ಅನ್ನಸಂತರ್ಪಣೆ, ಪಾನಕ ಸೇವೆ, ದೀಪೋತ್ಸವ, ಮೆರವಣಿಗೆ, ಕಲಾಪ್ರದರ್ಶನ ಮುಂತಾದವುಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.

 ಶ್ರೀಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಾಲಯ ಟ್ರಸ್ಟ್ ವತಿಯಿಂದ ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ದೇವರ ವಿಗ್ರಹಗಳು ಹಾಗೂ ವಿನೂತನ ರೀತಿಯಲ್ಲಿ ದೇವಸ್ಥಾನವನ್ನು ಕಟ್ಟಲು ಯೋಜನೆ ರೂಪಿಸಿದ್ದು, ಅದರ ಪ್ರಯುಕ್ತ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.