Home Blog Page 303

Sidlaghatta Cocoon Market Watch – 17/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 17/11/2020

CB lots: 393
Qty: 19149 Kgs
Max: 431
Min: 112
Avg: 290
BV Lots : NILL

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 2 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ಮಲ್ಲೇನಹಳ್ಳಿಯ 50 ವರ್ಷದ ಮಹಿಳೆ, 26 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ನಿಂತ ಟಬೂಬಿಯಾ ಅವಲಾನಿಡೇ ಮರಗಳು

0

ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕಾ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದೇ ಆಗಿಹೋಗಿವೆ. ಸರಣಿ ಹೂ ಬಿಡುವ ಮರಗಳೆಂದೇ ಇವನ್ನು ಬಣ್ಣಿಸಲಾಗಿದೆ. ಟಬೂಬಿಯಾ ಮರಗಳು ಹಲವು ಬಗೆಗಳಲ್ಲಿದ್ದು, ಕೆಲವು ಕೆಲವು ತಿಂಗಳಿನಲ್ಲಿ ಸುಂದರ ಬಣ್ಣ ಬಣ್ಣದ ಹೂವನ್ನು ಅರಳಿಸಿ ಪ್ರಕೃತಿಗೆ ಮೆರುಗನ್ನು ತರುತ್ತವೆ. ಈ ಹೂಗಳು ಮರಗಳ ಕೆಳಗೆ ಉದುರಿದಾಗ ಸುಂದರ ಕಾರ್ಪೆಟ್ ಹಾಸಿದಂತೆ ಕಾಣುತ್ತವೆ.

 ಟಬೂಬಿಯಾ ಅವಲಾನಿಡೇ ಮರಗಳು ನವೆಂಬರ್ ತಿಂಗಳಿನಲ್ಲಿ ಮೊಟ್ಟಮೊದಲು ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ಹೂಗಳ ಋತುವಿನ ಪ್ರಾರಂಭವನ್ನು ಸಾರುತ್ತವೆ. ಶಿಡ್ಲಘಟ್ಟ ತಾಲ್ಲೂಕಿನ ವಿವಿದೆಡೆ ಈ ಹೂಗಳ ಮರಗಳಿವೆ. ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಈ ಹೂಗಳ ಮೆರುಗನ್ನು ಇದೀಗ ನಾವು ಕಾಣಬಹುದಾಗಿದೆ.

  “1908ರಲ್ಲಿ ಲಾಲ್‌ಬಾಗ್‌ ಕ್ಯುರೇಟರ್‌ ಆಗಿ ಬಂದವರು ಕ್ರುಂಬಿಗಲ್‌. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಅಂದರೆ ಒಂದು ಜಾತಿಯ ಮರಗಳು ಹೂವರಳಿಸಿ ಬಾಡುವಷ್ಟರಲ್ಲಿ ಮತ್ತೊಂದು ಜಾತಿಯ ಮರಗಳು ಹೂವರಳಿಸಿರಬೇಕು. ಅವರು ಈ ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು. ನನ್ನ ಹುಟ್ಟೂರು ಭಕ್ತರಹಳ್ಳಿಯಲ್ಲಿ ಎರಡು ದಶಕಗಳ ಹಿಂದೆ ಟಬೂಬಿಯಾ ಅವಲಾನಿಡೇ ಗಿಡಗಳನ್ನು ನಾನೇ ನೆಟ್ಟಿದ್ದೆ. ಸಾಧ್ಯವಾದ ಕಡೆಗಳಲ್ಲೆಲ್ಲಾ ಟಬೂಬಿಯಾ ಜಾತಿಯ ಮರಗಳ ಬೀಜಗಳನ್ನು ಹಾಕುತ್ತಿರುತ್ತೇನೆ” ಎಂದು ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ತಿಳಿಸಿದರು.

 “ಟಬೂಬಿಯಾ ಅವಲಾನಿಡೇ ಜಾತಿಯ ಮರ ನವೆಂಬರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ಗಾಢವಾದ ಗುಲಾಬಿ ಬಣ್ಣದ ಹೂಬಿಡುತ್ತದೆ. ಅದು ಮುಗಿಯುವಷ್ಟರಲ್ಲಿ ಟಬೂಬಿಯಾ ಅರ್ಜೆನ್ಷಿಯಾ ಗಾಢ ಹಳದಿ ಬಣ್ಣದ ಹೂವರಳಿಸಿಕೊಂಡು ಗಮನಸೆಳೆದರೆ, ಟಬೂಬಿಯಾ ಸ್ಪೆಕ್ಟಾಬಿಲಿಸ್ ತಿಳಿ ಹಳದಿ ಹೂವರಳಿಸುತ್ತವೆ. ಇವು ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಇರುತ್ತವೆ. ಹಳದಿ ಹೂಗಳು ಉದುರುವ ಸಮಯಕ್ಕೆ ಸರಿಯಾಗಿ ಅಂದರೆ, ಯುಗಾದಿಗೆ ಸ್ವಾಗತ ಕೋರುವುದೇ ಟಬೂಬಿಯಾ ರೋಸಿಯಾ. ಇದರ ಸೊಬಗು ಮತ್ತು ಬೆಡಗನ್ನು “ತಿಳಿಗುಲಾಬಿ ಸೀರೆಯನ್ನು ಧರಿಸಿರುವ ಸುಂದರ ಸ್ತ್ರೀ” ಎಂದು ಕರೆದಿದ್ದೇನೆ. ಸುಮಾರು ಏಪ್ರಿಲ್ ತಿಂಗಳವರೆಗೂ ಇರುವ ಈ ಹೂವಿನ ನಂತರ ಕತ್ತಿಕಾಯಿ ಮರ ಅಂದರೆ ಮೇ ಫ್ಲವರ್ ಹೂ ಬಿಡುತ್ತದೆ. ಹೀಗೇ ಟ್ಯುಲಿಪ್ ಮರ ಅಥವಾ ನೀರುಗಾಯಿಮರ ಚಂದದ ಹೂ ಬಿಡುತ್ತದೆ ಹೀಗೇ ಸಾಗಿ ದಸರಾ ಮರಗಳೆಂದು ಕರೆಯುವ ಕಲ್ವಿಲೇ ರೆಸಿಮೋಸಾ ಕೇಸರಿ ಬಣ್ಣದ ಹೂಬಿಡುವವರೆಗೂ ಸಾಗುತ್ತದೆ. ಈ ದಸರಾ ಮರಗಳನ್ನು ಕ್ರುಂಬಿಗಲ್ ಅವರು ಮೈಸೂರಿನಲ್ಲಿ ನೆಟ್ಟಿದ್ದಾರೆ. ಲಿಲ್ಲಿ ಹೂವರಳಿದಾಗ ಲಂಡನ್ನಿಗೆ ಭೇಟಿ ಕೊಡು ; ಟಬೂಬಿಯಾ ಹೂಬಿಟ್ಟಾಗ ಬೆಂಗಳೂರಿಗೆ ಭೇಟಿ ನೀಡು ಎಂಬ ಮಾತು ಚಾಲ್ತಿಯಲ್ಲಿದೆ” ಎಂದು ಅವರು ವಿವರಿಸಿದರು.

– ಡಿ.ಜಿ.ಮಲ್ಲಿಕಾರ್ಜುನ

Sidlaghatta Cocoon Market Watch – 16/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 16/11/2020

CB lots: 282
Qty: 13444 Kgs
Max: 450
Min: 192
Avg: 292
BV lots 02
Qty: 109 Kgs
Max: 396
Min: 333
Avg: 368

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಹಂಡಿಗನಾಳ ಪಂಚಾಯಿತಿಯ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮ

0

ತಾಲ್ಲೂಕಿನ ಹಂಡಿಗನಾಳ ಪಂಚಾಯಿತಿಯ ಗ್ರಂಥಾಲಯದಲ್ಲಿ ಶನಿವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಓದುವ ಬೆಳಕು ಕಾರ್ಯಕ್ರಮದಡಿ ಸಾಂಕೇತಿಕವಾಗಿ 20 ವಿದ್ಯಾರ್ಥಿಗಳನ್ನು ನೋಂದಾಯಿಸಿ ಪುಸ್ತಕಗಳನ್ನು ವಿತರಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳ ಓದುವ ಹವ್ಯಾಸದಿಂದ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಓದುವ ಬೆಳಕು ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಶಾಲಾ-ಕಾಲೇಜು ತೆರೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ನೀಡುತ್ತಿಲ್ಲ. ಅವರನ್ನು ಪುನಃ ಓದಿನ ಕಡೆ ಸೆಳೆಯಲು ಓದುವ ಬೆಳಕು ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಇದು ಉಪಯುಕ್ತವಾಗಲಿದೆ ಎಂದು ಅವರು ತಿಳಿಸಿದರು.
ಮಕ್ಕಳ ಮಾನಸಿಕ, ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಓದುವ ಬೆಳಕು ಕಾರ್ಯಕ್ರಮವನ್ನು ರೂಪಿಸಿದೆ. ಡಿ.15ರೊಳಗೆ ಪಂಚಾಯಿತಿಗಳ ಎಲ್ಲ ಮಕ್ಕಳೂ ಗ್ರಂಥಾಲಯದ ಸದಸ್ಯರಾಗಿರಬೇಕು. ಮಕ್ಕಳ ಸದಸ್ಯತ್ವ ಶುಲ್ಕವನ್ನು ಪಂಚಾಯಿತಿಗಳು ಸೆಸ್‌ನಿಂದ ಭರಿಸಲಾಗುವುದು ನವೆಂಬರ್‌ನಲ್ಲಿ ಮಕ್ಕಳ ಗ್ರಾಮಸಭೆ ನಡೆಸುವುದಕ್ಕಷ್ಟೆ ಸೀಮಿತಗೊಳ್ಳುತ್ತಿದ್ದ ಮಕ್ಕಳ ದಿನಾಚರಣೆಯನ್ನು ವಿಸ್ತರಿಸಿರುವ ಇಲಾಖೆಯು, ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ನವೆಂಬರ್ 14ರಿಂದ ಪ್ರಾರಂಭಿಸಿದೆ. 2021ರ ಜನವರಿ 24ರವರೆಗೆ ಹಮ್ಮಿಕೊಂಡಿದೆ. 10 ವಾರಗಳ ಕಾಲ ಎಲ್ಲ ಪಂಚಾಯಿತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳೂ ಸೇರಿದಂತೆ ಹಲವು ಚಟುವಟಿಕೆ ನಡೆಯಲಿದೆ. ಪುಸ್ತಕ ದಾನಿಗಳು ಮಕ್ಕಳಿಗೆ ಅಗತ್ಯವಾದ ಪುಸ್ತಕಗಳನ್ನು ನೀಡಬಹುದಾಗಿದೆ ಎಂದರು.
ಹಂಡಿಗನಾಳ ಗ್ರಾಮ ಪಂಚಾಯಿತಿಯ ಗ್ರಂಥಪಾಲಕ ಮುನಿರಾಜು, ಕಾರ್ಯದರ್ಶಿ ಶ್ರೀನಿವಾಸ್, ಮೋಹನ್, ನಾರಾಯಣಸ್ವಾಮಿ, ರಾಮಾಂಜಿ ಹಾಜರಿದ್ದರು.
Attachments area

covid-19 ಸಂಚಾರಿ ಸ್ವಾಬ್ ಪರೀಕ್ಷೆ

0

ಕೊರೊನಾ ಸೋಂಕಿತರ ಸಂಖ್ಯೆ ತಾಲ್ಲೂಕಿನಲ್ಲಿ ಇಳಿಮುಖವಾಗಿದೆ. ಆದರೂ ಸೋಂಕಿತರ ಸರಪಣಿ ಬೆಳೆಯದಂತೆ ನೋಡಿಕೊಳ್ಳಲು ನಗರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಖುದ್ದಾಗಿ ತಾವೇ ತೆರಳಿ ಸ್ವಾಬ್ ಪರೀಕ್ಷೆ ನಡೆಸುತ್ತಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.

 ನಗರದ ಹೊಸಮನೆ ಬೀದಿಯಲ್ಲಿ ಭಾನುವಾರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯಿಂದ ಸಾರ್ವಜನಿಕರ ಸ್ವಾಬ್ ಪರೀಕ್ಷೆ ನಡೆಸುತ್ತಿರುವೆಡೆ ತೆರಳಿ ಪರೀಕ್ಷಿಸಿದ ಅವರು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಮಾತನಾಡಿದರು.

 ಸಮುದಾಯದಲ್ಲಿ ಕೋವಿಡ್ ಹರಡದಂತೆ ಎಚ್ಚರವಹಿಸಲಾಗುತ್ತಿದೆ. ಅದಕ್ಕಾಗಿಯೇ ನಾವುಗಳೇ ಖುದ್ದಾಗಿ ತೆರಳಿ ಪರೀಕ್ಷೆ ನಡೆಸುತ್ತಿದ್ದೇವೆ. ಜನರು ಸಹಕಾರ ನೀಡಬೇಕು. ಯಾವುದೇ ರೀತಿಯ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಿ, ಸ್ವಾಬ್ ಪರೀಕ್ಷೆಗೆ ಒಳಪಡುವ ಮೂಲಕ ಸೋಂಕು ಇದೆಯೋ ಇಲ್ಲವೋ ದೃಢಪಡಿಸಿಕೊಳ್ಳಿ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ವಚ್ಛತೆ ರೂಢಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

Sidlaghatta Cocoon Market Watch – 15/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 15/11/2020

CB lots: 263
Qty: 13131 Kgs
Max: 418
Min: 253
AVG: 307
BV Lots: 05
Qty: 265 Kgs
Max: 344
Min: 257
AVG: 299

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಸ್ಕೌಟ್ ಮತ್ತು ಗೈಡ್ಸ್ ನಿಂದ ಪರಿಸರ ಸ್ನೇಹಿ ದೀಪಾವಳಿ

0

ತಾಲ್ಲೂಕಿನ ಸ್ಕೌಟ್ ಮತ್ತು ಗೈಡ್ಸ್ ಘಟಕದ ಮಕ್ಕಳು ಹಾಗೂ ಶಿಕ್ಷಕರು ವಿವಿಧ ಚಟುವಟಿಕೆಗಳ ಮೂಲಕ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಜನಜಾಗೃತಿ ಮೂಡಿಸುತ್ತಿದ್ದಾರೆ.

 ದೀಪಾವಳಿಗೆ ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಉಂಟಾಗಿ ಕೊರೊನ ಸೋಂಕು ಉಲ್ಬಣಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಸರ್ಕಾರದ ಆದೇಶಕ್ಕೂ ಮುನ್ನವೇ ಸ್ಕೌಟ್ ಮತ್ತು ಗೈಡ್ಸ್ ಪರಿಸರ ಸ್ನೇಹಿ ಆಚರಿಸುವ ನಿಟ್ಟಿನಲ್ಲಿ ಹಸಿರು ದೀಪಾವಳಿ ಸಪ್ತಾಹವನ್ನು ಹಮ್ಮಿಕೊಂಡಿದೆ.

 ಹಸಿರು ದೀಪಾವಳಿ ಆಚರಣೆಯಡಿ ಮಕ್ಕಳಿಗೆ ಆರು ಪ್ರಮುಖ ಚಟುವಟಿಕೆಗಳನ್ನು ನೀಡಿದ್ದು, ಜಾಗೃತಿ ಮೂಡಿಸುವುದು, ಕೌಶಲ ಪ್ರತಿಭೆ ಹೊರಹೊಮ್ಮಿಸುವುದು, ಪ್ರೀತಿ, ಶಾಂತಿ ಸಾರುವುದು, ಗ್ರೀಟಿಂಗ್ಸ್ ಹಂಚುವುದು, ಇತರರ ಬಗ್ಗೆ ಕಾಳಜಿ ವ್ಯಕ್ತಪಡಿಸುವುದು ಪ್ರಮುಖ ಆದ್ಯತೆಗಳಾಗಿವೆ ಎಂದು ತಾಲ್ಲೂಕಿನ ಸ್ಕೌಟ್ ಮತ್ತು ಗೈಡ್ಸ್ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.

 ಸಗಣಿ, ಮಣ್ಣು, ಅಕ್ಕಿಹಿಟ್ಟು ಹಾಗೂ ಅರಿಶಿನ ಬಳಸಿ ಹಣತೆ ತಯಾರಿಕೆ, ವಿದ್ಯುತ್ ದೀಪ ಬದಲು ಪೇಪರ್ ನಿಂದ ಆಕಾಶಬುಟ್ಟಿ ತಯಾರಿಸಿ ಬಳಸುವುದು ಹಾಗೂ ಅಕ್ಕಪಕ್ಕದವರಿಗೂ ತಯಾರಿಸಿ ನೀಡುವುದಕ್ಕೆ ಮತ್ತು ಸಾರ್ವಜನಿಕರು ಕೂಡ ಹಣತೆ, ಆಕಾಶಬುಟ್ಟಿ ತಯಾರಿಸುವಂತೆ ಪ್ರೇರೇಪಿಸುತ್ತಿರುವುದಾಗಿ ಅವರು ಹೇಳಿದರು.

 ದೀಪಾವಳಿ ಶುಭಾಶಯ ಕೋರಲು ಹಳೆಯ ಲಗ್ನಪತ್ರಿಕೆ ಇಲ್ಲವೇ ಡ್ರಾಯಿಂಗ್ ಶೀಟ್ ನಿಂದ ಗ್ರೀಟಿಂಗ್ ಕಾರ್ಡ್ಸ್ ರಚಿಸಿ ಬಂಧುಗಳು ಹಾಗೂ ಸ್ನೇಹಿತರಿಗೆ ನೀಡುವುದು, ದೀಪಾವಳಿಯಂದು ಪಟಾಕಿ ಬೇಡವೆಂಬ ಘೋಷವಾಕ್ಯವನ್ನು ಪ್ರಚುರಪಡಿಸಿದ್ದೇವೆ ಎಂದರು.

ಮಣ್ಣಿನ ಹಣತೆ ವಿತರಿಸಿ ಕಸಾಪ ವತಿಯಿಂದ ದೀಪಾವಳಿ ಆಚರಣೆ

0

ಪಟಾಕಿ ಬದಲು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಿ ಎಂಬ ಸಂದೇಶ ಸಾರುವುದು ನಮ್ಮ ಉದ್ದೇಶ. ರಾಷ್ಟ್ರಕವಿ ಜಿಎಸ್‌ಎಸ್ ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ ಮುಖ ನೀನು, ನೋಡಬಹುದೆಂಬ ಒಂದೇ ಒಂದು ಆಸೆಯಿಂದ’’ ಎಂಬ ಮಾತನ್ನು ನೆನೆಯೋಣ. ಪಟಾಕಿ ಬಿಡಿ, ದೀಪ ಬೆಳಗಿಸಿ ಎಂಬ ಸಂದೇಶ ಸಾರೋಣ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.

 ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಶ್ರೀ ತಿರುಮಲ ನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಶ್ವಿನಿ ಗೋವರ್ಧನ್ ಚಾರಿಟಬಲ್ ಟ್ರಸ್ಟ್ ( ರಿ.) ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ 500 ಮಣ್ಣಿನ ದೀಪಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಈ ಬಾರಿ ಮಕ್ಕಳಿಗೆ ಪಟಾಕಿ ಬದಲಾಗಿ ಮಣ್ಣಿನ ಹಣತೆ ಬೆಳಗಿಸಲು ಮನವೊಲಿಸಿ. ಮಣ್ಣಿನ ಹಣತೆಯಿಂದ ಮನೆ ಮುಂದೆ ಅಲಂಕಾರ ಮಾಡಿಸಿ, ಸಂಭ್ರಮದಿಂದ ದೀಪಾವಳಿ ಆಚರಿಸಿ. ದೇಶಿ ಮಣ್ಣಿನ ದೀಪ ಖರೀದಿಸಿ ಕುಂಬಾರಿಕೆ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ನುಡಿದರು.

 ಈ ಹಬ್ಬ ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ನಮ್ಮ ಮನೆ ಮನದಲ್ಲಿ ಪಸರಿಸುತ್ತದೆ. ದೀಪಾವಳಿ ಅಂದರೆ “ದೀಪಗಳ ಸಾಲು” ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ. ಮಣ್ಣಿನ ಹಣತೆಯ ಬೆಳಕಿನ ಸೌಂದರ್ಯದ ಎದುರು ಸೂರ್ಯನು ನಾಚಿ ನೀರಾಗುತ್ತಾನೆ. ಮಣ್ಣನ್ನು ಜನರು ದೇವರೆಂದು ಭಾವಿಸುವುದರಿಂದ ಹೆಚ್ಚಾಗಿ ಮಣ್ಣಿನ ದೀಪಗಳನ್ನು ಹಚ್ಚುತ್ತಾರೆ ಎಂದರು.

 ಈ ಸಂದರ್ಭದಲ್ಲಿ ಹರಳಹಳ್ಳಿ ಗ್ರಾಮಸ್ಥರಿಗೆ ಕಸಾಪ ವತಿಯಿಂದ 500 ಮಣ್ಣಿನ ದೀಪಗಳನ್ನು ವಿತರಣೆ ಮಾಡಲಾಯಿತು.

 ಹರಳಹಳ್ಳಿ ಗ್ರಾಮದ ಹಿರಿಯ ಎಚ್.ಸೊಣ್ಣೇಗೌಡ, ಕೆ.ವಿ.ನಾರಾಯಣಸ್ವಾಮಿ, ಶಿಕ್ಷಕ ದೇವರಾಜ್, ಎಚ್.ಎಂ.ಶ್ರೀನಿವಾಸ್, ಎಚ್.ಎಂ.ಶ್ರೀನಾಥ್, ಎಚ್.ಆರ್.ಶಿವಕುಮಾರ್, ಎಚ್.ಪಿ.ಮನೋಜ್, ಪ್ರದೀಪ್, ಭುವನೇಶ್ವರಿ ಕನ್ನಡ ಯುವಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Sidlaghatta Cocoon Market Watch – 14/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 14/11/2020

CB Lots: 307
Qty: 14966 Kgs
Max: 356
Min: 116
Avg: 298
BV Lots: 10
Qty: 544 Kgs
Max: 361
Min: 225
Avg: 328

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

0

ವಿಶ್ವೇಶ್ವರಯ್ಯ ರವರಂತಹ ದಾರ್ಶನಿಕರು ಹುಟ್ಟಿದ ನಾಡಿನಲ್ಲಿ ಜನಿಸಿದ ನಾವೇ ಪುಣ್ಯವಂತರು. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಅದೆಷ್ಟೋ ಮಂದಿ ಸಾರ್ಥಕ ಜೀವನವನ್ನು ನಡೆಸುತ್ತಿದ್ದು, ಅವರಿಂದ ಪ್ರೇರಿತರಾಗಬೇಕು ಎಂದು ಶ್ರೀ ಸಾಯಿನಾಥ ಜ್ಞಾನ ಮಂದಿರದ ಮುಖ್ಯಸ್ಥ ಎಂ.ನಾರಾಯಣಸ್ವಾಮಿ ತಿಳಿಸಿದರು.

 ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಸಾಯಿನಾಥ ಜ್ಞಾನ ಮಂದಿರ ಇವರ ಸಹಯೋಗದಲ್ಲಿ 65 ನೇ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಸಾಧಕರನ್ನು ಗುರುತಿಸಿ ಗೌರವಿಸುವುದು ಉತ್ತಮ ಸಂಸ್ಕಾರ. ಹೆತ್ತ ತಾಯಿಯನ್ನು ಮತ್ತು ಬದುಕು ಕೊಟ್ಟ ನಾಡನ್ನು ನಾವು ಎಂದೂ ಮರೆಯಬಾರದು. ಸಮಾಜದ ಋಣವನ್ನು ನಾವು ತೀರಿಸಲೇಬೇಕು ಎಂದರು.

 ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಎಂ.ಎಸ್.ಮಹಿಮಾ, ಆರ್.ಅನುಷ, ಜನನಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ವಿ.ಮಾಲತಿ, ಎಸ್.ದಾವೂದ್ ಪಾಷಾ, ಮನೋರ್ ಮಣಿ, ನಾರಾಯಣ ಸ್ವಾಮಿ, ನಂಜಪ್ಪ ರೆಡ್ಡಿ, ಸುರೇಶ್, ಮುನಿನಂಜಪ್ಪ, ಮಂಜುನಾಥ, ಮುನಿರಾಜು ಅವರನ್ನು ಸನ್ಮಾನಿಸಲಾಯಿತು.

ವಸಾಪ ಗೌರವಾಧ್ಯಕ್ಷ ಕೆ.ಯೋಗಾನಂದ, ರಾಜ್ಯ ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ದೇವರಾಜ್, ಗಜೇಂದ್ರ, ವೆಂಕಟೇಶಪ್ಪ, ನರಸಿಂಹರಾಜು, ಮಂಜುನಾಥ, ನಾರಾಯಣ ಸ್ವಾಮಿ, ಸುರೇಂದ್ರ ಬಾಬು ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 1 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಮಯೂರ ವೃತ್ತದ 66 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 13/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 13/11/2020

CB lots: 468
Qty: 23265 Kgs
Max: 398
Min: 196
Avg: 298
BV Lots: 04
Qty: 253 Kgs
Max: 335
Min: 311
Avg: 330

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಕಾನೂನು ಸೇವಾ ಸಮಿತಿ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ

0

ಚಳಿಗಾಲ ಪ್ರಾರಂಭವಾಗುತ್ತಿದ್ದು ಕೊರೊನಾ ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಮಂಜುನಾಥ್ ತಿಳಿಸಿದರು.

 ನಗರದ ಬಸ್ ನಿಲ್ದಾಣದ ಬಳಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ಪ್ರಚಾರ ಆಂದೋಲನದ ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

 ಇತ್ತೀಚೆಗೆ ಕೊರೊನಾ ಮಹಾಮಾರಿ ಕಡಿಮೆಯಾಗಿದೆ ಎಂಬ ನಿರ್ಲಕ್ಷ್ಯದಿಂದ ಜನರು ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಗುಂಪುಗುಂಪಾಗಿ ಸೇರುವುದು ಹೆಚ್ಚುತ್ತಿದೆ. ಚಳಿಗಾಲದ ದಿನಗಳಲ್ಲಿ ಕೊರೊನಾ ಮಹಾ ಮಾರಿ ಹೆಚ್ಚಾಗುವ ಬಗ್ಗೆ ವರದಿಗಳು ಬಂದಿವೆ. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಾಪಾರಿಗಳು ತಮ್ಮ ಅಂಗಡಿಗೆ ಬರುವ ಗ್ರಾಹಕ ಮಾಸ್ಕ್ ಧರಿಸಿದ್ದರೆ ಮಾತ್ರ ವಸ್ತುಗಳನ್ನು ಕೊಡಿ ಇಲ್ಲವಾದಲ್ಲಿ ಯಾವುದೇ ವಸ್ತು ನೀಡಬಾರದು. ಅಂಗಡಿಗಳ ಮುಂಭಾಗ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಪಾಡಬೇಕು. ಮಾಸ್ಕ್ ಧರಿಸದೇ ಓಡಾಡುವವರು ಹಾಗೂ ಅಂಗಡಿಗಳ ಮುಂಭಾಗ ಗುಂಪು ಗುಂಪಾಗಿ ಸೇರಿದರೆ ಹೆಚ್ಚಿನ ದಂಡ ವಿಧಿಸುವ ಜೊತೆಗೆ ನಿಮ್ಮ ಮೇಲೆ ಅಗತ್ಯ ಕ್ರಮ ಜರುಗಿಸಲು ಮುಂದಾಗಬೇಕಾಗುತ್ತದೆ ಎಂದರು.

 ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಕೆಲವರಿಗೆ ಮಾಸ್ಕ್ ವಿತರಿಸುವ ಜೊತೆಗೆ ಅಂಗಡಿಗಳವರಿಗೆ ಬ್ಯಾನರ್ ವಿತರಿಸಲಾಯಿತು.

 ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಕೋವಿಡ್ ನೋಡಲ್ ಅಧಿಕಾರಿ ಶಿವಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ನಗರಠಾಣೆ ಪಿಎಸ್ಸೈ ಸತೀಶ್, ಆರೋಗ್ಯ ನಿರೀಕ್ಷಕಿ ಶೋಭ ಹಾಜರಿದ್ದರು.

ನರೇಗಾ ಯೋಜನೆಯ ಸದ್ಬಳಕೆ – ಶಿಡ್ಲಘಟ್ಟ ತಾಲ್ಲೂಕಿನ ಸುಂದರ ನೀರಿನ ಹೊಂಡಗಳು

0

ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಹಳೆಯ ಕುಂಟೆಗಳನ್ನು ಸುಂದರ ನೀರಿನ ಹೊಂಡಗಳಾಗಿ ನರೇಗಾ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ನೀರು ತುಂಬಿಕೊಂಡ ನೀರಿನ ಹೊಂಡಗಳು ಬೇಸಿಗೆ ಸೇರಿದಂತೆ ಇಡೀ ವರ್ಷ ಆಯಾ ಗ್ರಾಮಗಳ ಜನ ಜಾನುವಾರುಗಳಿಗೆ ಜಲಮೂಲಗಳಾಗಿ ಅಕ್ಷಯ ನೀರಿನ ಪಾತ್ರೆಗಳಾಗಿವೆ.

 ತಾಲ್ಲೂಕಿನ ಬೆಳ್ಳೂಟಿ, ಚೀಮಂಗಲ, ಸದ್ದಹಳ್ಳಿ, ಮಳಮಾಚನಹಳ್ಳಿ, ಈ.ತಿಮ್ಮಸಂದ್ರ, ಸುಂಡ್ರಹಳ್ಳಿ, ಎದ್ದಲತಿಪ್ಪೇನಹಳ್ಳಿ, ಹೊಸಪೇಟೆ, ಹಿರೇಬಲ್ಲ, ಚೌಡಸಂದ್ರ, ಕೊತ್ತನೂರು, ವೀರಾಪುರ, ಬಳುವನಹಳ್ಳಿ, ಭಕ್ತರಹಳ್ಳಿ, ದೊಡ್ಡಚೊಕ್ಕಂಡಹಳ್ಳಿ, ಹಾರಡಿ, ಕಾಳನಾಯಕನಹಳ್ಳಿ, ಮಲ್ಲೇನಹಳ್ಳಿ ಮುಂತಾಡೆ ಈಗಾಗಲೇ ನಿರ್ಮಾಣಗೊಂಡು ಮಳೆನೀರು ತುಂಬಿಕೊಂಡ ನೀರಿನ ಹೊಂಡಗಳು ತಮ್ಮ ಉಪಯುಕ್ತತೆಯನ್ನು ಸಾರುವಂತಿವೆ.

Lakes Sidlaghatta MNREGA Chikkaballapur District

 ಹಳ್ಳಿಗಳಲ್ಲಿ ಪಾಳುಬಿದ್ದ ಕುಂಟೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿ ಮಳೆ ನೀರು ಸಮರ್ಪಕವಾಗಿ ಶೇಕರಣೆಯಾಗುವಂತೆ ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ಇವುಗಳಿಂದ ಒಂದೆಡೆ ಅಂತರ್ಜಲ ವೃದ್ಧಿ, ಮತ್ತೊಂದೆಡೆ ಜನ ಜಾನುವಾರುಗಳಿಗೆ ನಿರಂತರವಾಗಿ ನೀರು ಸಿಗುವಂತಾಗಿದೆ. ಹಿಂದೆಲ್ಲಾ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಿದ್ದ ಹಲವಾರು ಹಳ್ಳಿಗಳಿಗೆ ಈ ನೀರಿನ ಹೊಂಡಗಳು ವರದಾನವಾಗಿ ಪರಿಣಮಿಸಿವೆ.

Lakes Sidlaghatta MNREGA Chikkaballapur District

 ತಾಲ್ಲೂಕಿನ ಹಾರಡಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಹೊಂಡವು ಷಡ್ಭುಜ ಆಕಾರದಲ್ಲಿದೆ. ಅದರ ಸುತ್ತ ಪಾದಚಾರಿಗಳು ನಡೆದಾಡಲು ಪಥವನ್ನು ನಿರ್ಮಿಸಲಾಗಿದೆ. ಇದು ಸುಮಾರು 64 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕಾಳನಾಯಕನಹಳ್ಳಿಯಲ್ಲಿನ ನೀರಿನ ಹೊಂಡವು 85 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಹೊಸಪೇಟೆ ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿನ ನೀರಿನ ಹೊಂಡವು ಈಜುಕೊಳದಂತೆ ಸುಂದರವಾಗಿದ್ದು, 76 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಪ್ಪೇಗೌಡನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಹೊಂಡವು 27 ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು, ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ನೀರಿನ ಹೊಂಡವಾಗಲಿದೆ.

ಸೋಲಾರ್ ದೀಪ ಅಳವಡಿಕೆ : ತಾಲ್ಲೂಕಿನ ಹಾರಡಿ ಮತ್ತು ಕಾಳನಾಯಕನಹಳ್ಳಿಯಲ್ಲಿನ ನೀರಿನ ಹೊಂಡದ ಸುತ್ತ ಸೋಲಾರ್ ದೀಪಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಲಾಗಿದೆ. ರಾತ್ರಿ ವೇಳೆ ದೂರದಿಂದ ನೋಡಿದರೆ ಕ್ರಿಕೆಟ್ ಸ್ಟೇಡಿಯಮ್ ರೀತಿ ಇವು ಕಾಣುತ್ತವೆ.

– ಡಿ.ಜಿ.ಮಲ್ಲಿಕಾರ್ಜುನ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 1 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ಹುಜೂಗೂರಿನ 20 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 12/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 12/11/2020

CB lots: 537
Qty: 27879 Kgs
Max: 465
Min: 206
Avg: 312
BV Lots: 01
Qty: 77 Kgs
Max: 316
Min: 316
Avg: 316

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

2019-20 ನೇ ಸಾಲಿನ NTSE ಪರೀಕ್ಷೆ (ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) 10 ನೇ ತರಗತಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಹಾಗೂ NMMS ಪರೀಕ್ಷೆ (ನ್ಯಾಷನಲ್ ಮಿನ್ಸ್ – ಕಮ್ – ಮೇರಿಟ್ ಸ್ಕಾಲರ್ಷಿಪ್ ಪರೀಕ್ಷೆ) 8 ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗಾಗಿ ದಿನಾಂಕ: 24/01/2021 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಈ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ NTSE ಮತ್ತು NMMS ಪರೀಕ್ಷೆಗೆ http://kseeb.kar.nic.in/ ವೆಬ್ ಸೈಟ್ ನಲ್ಲಿ ತಮ್ಮ ಶಾಲೆಯ UDISE ಮೂಲಕ ಮುಖ್ಯ ಶಿಕ್ಷಕರು Login ಅಗಿ ವಿದ್ಯಾರ್ಥಿಗಳ ಅರ್ಜಿಗಳನ್ನು ದಿನಾಂಕ 30/11/2020ರ ಒಳಗೆ ಸಲ್ಲಿಸಲು ಮಂಡಳಿಯ ಪ್ರಕಟಣೆ ತಿಳಿಸಿದೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಪಾವತಿ ಮತ್ತು ಇತರೆ ಎಲ್ಲಾ ಮಾಹಿತಿಯು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. NTSE ಮತ್ತು NMMS ಪರೀಕ್ಷೆಗೆ ಸಂಬಂಧಿಸಿದಂತೆ ತಾಲ್ಲೂಕು ಹಂತದಲ್ಲಿ ತಮ್ಮ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಹಂತದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಉಪನಿರ್ದೇಶಕರ ಕಛೇರಿ ಚಿಕ್ಕಬಳ್ಳಾಪುರ ಇಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಗೆ ತರಬೇತಿಗಾಗಿ ಅರ್ಜಿ ಆಹ್ವಾನ

0

ಕರ್ನಾಟಕ ಮಾಧ್ಯಮ ಅಕಾಡೆಮಿಯ 2020-21ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ (ಎಸ್.ಸಿ.ಪಿ./ ಟಿ.ಎಸ್.ಪಿ) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಸ್ನಾತಕೋತ್ತರ ಪದವೀಧರರಿಗೆ ವೃತ್ತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ತಿಂಗಳ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿಯ 25 ಮಂದಿ ಹಾಗೂ ಪರಿಶಿಷ್ಟ ಪಂಗಡದ 10 ಮಂದಿ ಅಭ್ಯರ್ಥಿಗಳನ್ನು ಗರಿಷ್ಠ ಅಂಕಗಳ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರಿಕಾಲಯ / ವಾಹಿನಿಗಳಲ್ಲಿ ತರಬೇತಿ ನೀಡಿ ಮಾಹೆಯಾನ ರೂ. 15,000/- ಗಳ ಸ್ಟಿಫೆನ್ಡ್ ನೀಡಲಾಗುವುದು.
ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿದ್ದು ಕನ್ನಡ ಭಾಷೆಯಲ್ಲಿ ಪರಿಣಿತರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು.
ಅರ್ಜಿಯೊಂದಿಗೆ SSLC ಅಂಕಪಟ್ಟಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳೊಂದಿಗೆ ಜಾತಿ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇನ್ನಿತರೆ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ Email ವಿಳಾಸ traineekma2020@gmail.com ಮೂಲಕ ಅಥವಾ ಅಂಚೆ ಮೂಲಕ ದಿನಾಂಕ : 27/11/2020 ರ ಒಳಗೆ ತಲುಪುವಂತೆ ಕಳುಹಿಸಬೇಕು.
ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆ/ಸಂಸ್ಥೆಗಳಲ್ಲಿ ಫಲಾನುಭವಿಗಳಾಗಿದ್ದರೆ ಅಂತಹವರು ಅರ್ಜಿ ಸಲ್ಲಿಸುವಂತಿಲ್ಲ. ಸರ್ಕಾರದಿಂದ ಈಗಾಗಲೇ ಸೌಲಭ್ಯ ಪಡೆದ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ಹೂಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-22860164 ಕಾರ್ಯದರ್ಶಿಗಳು, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ.ಅಂಬೇಡ್ಕರ್ ರಸ್ತೆ, ಬೆಂಗಳೂರು – 560001 ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

0

Chikkaballapur: ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಹನುಮೇಗೌಡ ಮಾತನಾಡಿ, ಸರಕಾರ ಎಲ್ಲ ಹೊರಗುತ್ತಿಗೆ ನೌಕರರಿಗೆ ಕೋವಿಡ್ ಲಾಕ್‌ಡೌನ್ ಅವಧಿಯ ವೇತನವನ್ನು ನೀಡಲು ಆದೇಶ ಹೊರಡಿಸಿದ್ದರೂ, ಜಿಲ್ಲೆಯ ಹೊರಗುತ್ತಿಗೆ ನೌಕರರಿಗೆ ಇದುವರೆಗೂ ವೇತನ ನೀಡದೆ ತಾರತಮ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರು ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟಿಸಿದರು.
ಕೋವಿಡ್ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ನೌಕರರು ಜೀವನೋಪಾಯಕ್ಕಾಗಿ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಸರಕಾರ ಕೂಡಲೇ ಎಲ್ಲ ಹೊರಗುತ್ತಿಗೆ ನೌಕರರಿಗೆ ಲಾಕ್‌ಡೌನ್ ಅವಧಿಯ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ವಿರೋಧಿ ತಿದ್ದುಗಳನ್ನು ರದ್ದುಗೊಳಿಸಬೇಕು, ೨೫ ಸಾವಿರ ವೇತನ ನಿಗಧಿ, ಕೋವಿಡ್ ರಜಾ ದಿನಗಳ ವೇತನ ಹಾಗೂ ಆಹಾರ ಸಾಮಗ್ರಿ ಕಿಟ್ ವಿತರಣೆ, ಬಿಡುಗಡೆ, ನೌಕರರಿಗೆ ನಿವೃತ್ತಿಯವರೆಗೆ ಸೂಕ್ತ ಭದ್ರತೆ ಒದಗಿಸುವುದು, ಸಂಪೂರ್ಣ ವೇತನವನ್ನು ಖಾತೆಗೆ ಜಮಾಯಿಸುವುದು, ಪಿಎಫ್-ಇಎಸ್‌ಐ ಕಾರ್ಡ್‌ನಲ್ಲಿನ ಲೋಪ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಸಿಐಟಿಯು ಜಿಲ್ಲಾಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಬಿ.ಮುನಿಕೃಷ್ಣಪ್ಪ, ಮುನಿಯಪ್ಪ, ಪುಷ್ಪ, ಕದಿರಪ್ಪ, ಸುಮಿತ್ರಮ್ಮ, ನಾರಾಯಣಪ್ಪ, ಚಂದ್ರಪ್ಪ, ವಿಮಲಮ್ಮ, ಮಂಜುಳಮ್ಮ ಇತರರು ಉಪಸ್ಥಿತರಿದ್ದರು.