Home Blog Page 302

ಶಿಡ್ಲಘಟ್ಟ ತಾಲೂಕಿನಾದ್ಯಂತ ನವೆಂಬರ್ 25ರಂದು ವಿದ್ಯುತ್ ವ್ಯತ್ಯಯ

0
Electricity Power Cut Sidlaghatta Chikkaballapur District

ದಿನಾಂಕ: 25.11.2020 ರಂದು ಗಂಜಿಗುಂಟೆ, ಪಲಿಚೇರ್ಲು, ಮೇಲೂರು, ಚೀಮಂಗಲ, ವೈ.ಹುಣಸೇನಹಳ್ಳಿ ಮತ್ತು ಶಿಡ್ಲಘಟ್ಟ ಉಪವಿದ್ಯುತ್ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಗಂಜಿಗುಂಟೆ, ಪಲಿಚೇರ್ಲು, ಮೇಲೂರು, ಚೀಮಂಗಲ, ವೈ.ಹುಣಸೇನಹಳ್ಳಿ ಮತ್ತು ಶಿಡ್ಲಘಟ್ಟ ಉಪವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ವೇಮಗಲ್, ಚಾಂಡ್ರಹಳ್ಳಿ, ನೆಲಮಾಚನಹಳ್ಳಿ, ಗಂಜಿಗುಂಟೆ, ಶೆಟ್ಟಿಹಳ್ಳಿ, ದ್ಯಾವರಪಲ್ಲಿ, ಮುಮ್ಮನಹಳ್ಳಿ, ಚೊಕ್ಕನಹಳ್ಳಿ, ಕೋರಲಪರ್ತಿ, ನಂದನಹೊಸಹಳ್ಳಿ, ಜಿ.ಕುರುಬರಹಳ್ಳಿ, ಪಾಪತಿಮ್ಮನಹಳ್ಳಿ, ಪಾಲೇನಹಳ್ಳಿ, ಕೆ.ದೇವಗನಹಳ್ಳಿ, ಕುತ್ತಾಂಡಹಳ್ಳಿ, ಸಾದಹಳ್ಳಿ, ಮರಿಹಳ್ಳಿ, ಚೌಡರೆಡ್ಡಿಹಳ್ಳಿ, ಮೇಲೂರು, ಕೇಶವಾರ, ಕಂಬದಹಳ್ಳಿ, ಭಕ್ತರಹಳ್ಳಿ, ಹೆಚ್.ಕ್ರಾಸ್, ಅತ್ತಿಗಾನಹಳ್ಳಿ, ಬಸವಾಪಟ್ಟಣ, ಕನ್ನಮಂಗಲ, ಚಿಕ್ಕದಾಸರಹಳ್ಳಿ, ಚೀಮಂಗಲ, ಚಿಂತಡಪಿ, ಸೀಗೆಹಳ್ಳಿ, ಕುಂದಲಗುರ್ಕಿ, ದೇವರಮಳ್ಳೂರು, ಗೊರಮಡಗು, ಪಿಂಡಿಪಾಪನಹಳ್ಳಿ, ಗೊಲ್ಲಹಳ್ಳಿ, ಕೊತ್ತನೂರು, ಕಡಶೇನಹಳ್ಳಿ, ಇದ್ಲೂಡು, ಅಬ್ಲೂಡು, ಆನೂರು, ತಿಪ್ಪೇನಹಳ್ಳಿ, ಹನುಮಂತಪುರ, ಲಕ್ಕೇನಹಳ್ಳಿ, ಹಂಡಿಗನಾಳ, ತುಮ್ಮನಹಳ್ಳಿ, ಗುಡಿಹಳ್ಳಿ, ಬೈರನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಮತ್ತು ಶಿಡ್ಲಘಟ್ಟ ಪಟ್ಟಣದಲ್ಲಿ ದಿ: 25.11.2020 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ನಾಗರಿಕರು ಸಹಕರಿಸಬೇಕೆಂದು ಶಿಡ್ಲಘಟ್ಟ ತಾಲ್ಲೂಕಿನ ಬೆಸ್ಕಾಂ ಇಲಾಖೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭು ತಿಳಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 6 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0
Covid-19 sidlaghatta coronavirus Covid Positive Cases Taluk village

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 6 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ನಗರದ ಮಾರುತಿ ನಗರದ 16 ವರ್ಷದ ಹುಡುಗಿ, 10 ವರ್ಷದ ಹುಡುಗಿ,
  2. ಕದರಿಪಾಳ್ಯದ 19 ವರ್ಷದ ಹುಡುಗಿ,
  3. ಗಂಜಿಗುಂಟೆಯ 13 ವರ್ಷದ ಹುಡುಗ,
  4. ಸೊಣ್ಣೇನಹಳ್ಳಿಯ 53 ವರ್ಷದ ಗಂಡಸು, 47 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch-24/11/2020

0
Sidlaghatta Silk cocoon Market Daily Price Update Raw Silk Filature Business Online Bivoltine Crossbreed Prices

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 24/11/2020

CB Lots: 311
Qty: 15328 Kgs
Max: 452
Min: 202
Avg: 320

BV Lots: 06
Qty: 582 Kgs
Max: 315
Min: 200
Avg: 261

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಅರಣ್ಯ ಇಲಾಖೆಯ ಸಿಬ್ಬಂದಿಗೆ ಮುಖ್ಯಮಂತ್ರಿಗಳ‌ ಚಿನ್ನದ ಪದಕ

0
Chief Minister of Karnataka Service Honorary Medal Shreekalshmi Forest Department Sidlaghattap

ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿಯಾಗಿದ್ದ ಎಚ್.ಎಸ್.ಶ್ರೀಲಕ್ಷ್ಮಿ ಅವರಿಗೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಘೋಷಿಸಲಾಗುವ ಮುಖ್ಯಮಂತ್ರಿಗಳ‌ ಚಿನ್ನದ ಪದಕವನ್ನು ಸೋಮವಾರ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪಡೆದರು.

ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರೊಂದಿಗೆ ಶಿಡ್ಲಘಟ್ಟ ಅರಣ್ಯ ರಕ್ಷಕ ಟಿ.ಡಿ.ಸಂದೀಪ್ ಮತ್ತು ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಎ.ಶ್ರೀರಾಮಯ್ಯ ಮುಖ್ಯಮಂತ್ರಿಗಳ ಗೌರವಕ್ಕೆ ಪಾತ್ರರಾದರು.

ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರು ತಮ್ಮ ಕೆಲವೇ ಸಿಬ್ಬಂದಿಯೊಂದಿಗೆ ತಾಲ್ಲೂಕಿನ ವರದನಾಯಕನಹಳ್ಳಿ ಸರ್ವೆ ನಂ 10 ರ ಅರಣ್ಯ ಭೂಮಿಯನ್ನು ರಾತ್ರೋ ರಾತ್ರಿ ಉಳಲು ಬಂದವರನ್ನು ಗಟ್ಟಿತನದಿಂದ ಎದುರಿಸಿದ್ದರು. ಹಲವು ಮುಖಂಡರಿಂದ ಬೆದರಿಕೆ ಕರೆಗಳು ಬಂದರೂ ಜಗ್ಗದೆ ಒಂದಿಂಚೂ ಅರಣ್ಯ ಜಮೀನನ್ನು ಬಿಡುವುದಿಲ್ಲ ಎಂದು ಹಠತೊಟ್ಟು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಇಲಾಖೆಯಿಂದ ಅಲ್ಲಿ ಗಿಡಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದರು. ಅವರ ಪರಿಶ್ರಮ, ಸೇವಾಕ್ಷಮತೆಯನ್ನು ಪಿ.ಸಿ.ಸಿ.ಎಫ್ ಪುನ್ನತಿ ಶ್ರೀಧರ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ಲಾಘಿಸಿದ್ದರು.

ಅರಣ್ಯ ರಕ್ಷಕ ಟಿ.ಡಿ.ಸಂದೀಪ್ ಮತ್ತು ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಎ.ಶ್ರೀರಾಮಯ್ಯ ಅವರು ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ವೆ ನಂ 10 ರ 25 ಹೆಕ್ಟೇರ್ ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯದಲ್ಲಿ ಸಕ್ಷಮವಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಅರಣ್ಯದಲ್ಲಿ ಅಪಘಾತಕ್ಕೀಡಾದ ಜಿಂಕೆಗಳನ್ನು ರಕ್ಷಿಸಿರುವುದಲ್ಲದೆ, ಅರಣ್ಯ ಒತ್ತುವರಿಗಳಿಗೆ ಸಂಬಂಧಿಸಿದಂತೆ ವಿಚಾರಣಾ ವರದಿಗಳನ್ನು ಅವರು ಸಲ್ಲಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 1 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0
Covid-19 sidlaghatta coronavirus Covid Positive Cases Taluk village


ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 1 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ನಗರದ ಕೋಟೆ ವೃತ್ತದ 23 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 23/11/2020

0
Sidlaghatta Silk cocoon Market Daily Price Update Raw Silk Filature Business Online Bivoltine Crossbreed Prices

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 23/11/2020

CB Lots: 483
Qty: 25463 Kgs
Max: 450
Min: 165
Avg: 312

BV Lots: 01
Qty: 37 Kgs
Max: 333
Min: 333
Avg: 333

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಅಥಿತಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

0
Teacher Tutor Vacancy Openings Jobs Schools Chikkaballapur

ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿ ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಇಲಾಖೆಯ ನಿರ್ದೇಶನದಂತೆ ಅಥಿತಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಆಯ್ಕೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂದರ್ಶನದ ಮುಖಾಂತರ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು (ನಿವೃತ್ತ ಹೊಂದಿರುವ ಅಥವಾ ಸದರಿ ವಿಷಯಗಳಲ್ಲಿ ಎಂ.ಎಸ್ಸಿ, ಬಿ.ಇಡಿ ಪದವಿಗಳನ್ನು ಹೊಂದಿರುವವರು) 2020ರ ನವೆಂಬರ್ 28 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಬಿಸಿಎಂ ಇಲಾಖೆಯಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08156-277053, 9731613955 ಅನ್ನು ಸಂಪರ್ಕಿಸಬಹುದೆಂದು ಎಂ.ಆರ್.ಡಿ. ಪಿಯು ಕಾಲೇಜಿನ ಪ್ರಾಂಶುಪಾಲರು ತಿಳಿಸಿರುತ್ತಾರೆ.

ಯುವಸಂಪನ್ಮೂಲವನ್ನು ಸರ್ವಶ್ರೇಷ್ಟ ಮಟ್ಟದಲ್ಲಿ ಸನ್ನದ್ಧಗೊಳಿಸಬೇಕಿದೆ

0
Childrens day program sidlaghatta competition activities kids felicitation winners award

ತಾಲ್ಲೂಕಿನ ಸುಗಟೂರು ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಜಿಲ್ಲಾ ನೆಹರು ಯುವಕೇಂದ್ರ, ಬೆಂಗಳೂರಿನ ಗಾಂಧಿಭವನ ಕರ್ನಾಟಕ ಗಾಂಧಿಸ್ಮಾರಕ ನಿಧಿ, ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾಯೋಜನಾಕೋಶ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ, ರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ, ಆರೋಗ್ಯಕಾರ್ಯಕರ್ತೆಯರಿಗೆ ಕೊರೊನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ, ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವಿತರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.

ದೇಶದ ಅಭಿವೃದ್ಧಿಯು ಗುಣಮಟ್ಟದ ಮಾನವ ಸಂಪನ್ಮೂಲವನ್ನು ಅವಲಂಬಿಸಿದ್ದು, ಯುವಸಂಪನ್ಮೂಲವನ್ನು ಸರ್ವಶ್ರೇಷ್ಟ ಮಟ್ಟದಲ್ಲಿ ಸನ್ನದ್ಧಗೊಳಿಸಬೇಕಿದೆ. ಶೈಕ್ಷಣಿಕ, ನೈತಿಕ ಮೌಲ್ಯಗಳನ್ನು ಬೆಳೆಸಲು ಪೂರಕವಾದ ಸಹಪಠ್ಯಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಕ್ರಿಯಾಶೀಲತೆ, ಸೃಜನಶೀಲತೆಯನ್ನು ಬೆಳೆಸಬಹುದು ಎಂದು ಅವರು ತಿಳಿಸಿದರು.

ರಾಷ್ಟ್ರದ ಸಮಗ್ರ ಪ್ರಗತಿಯಲ್ಲಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳ ಪಾತ್ರವು ಮಹತ್ತರವಾದುದು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ವೃದ್ಧಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕಿದೆ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಸಂದರ್ಭೋಚಿತ ಮಾರ್ಗದರ್ಶನದ ಅಗತ್ಯವಿದೆ ಎಂದರು.

ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಮಕ್ಕಳಿಗೆ ಪೌಷ್ಟಿಕಾಂಶಯುತ ಆಹಾರ, ಉತ್ತಮ ಸಂಸ್ಕಾರ, ಚಟುವಟಿಕೆಯುತ ಶಿಕ್ಷಣ ನೀಡುವುದರೊಂದಿಗೆ ಬದುಕಿನ ಶಿಕ್ಷಣ ನೀಡಬೇಕು. ಆ ಮೂಲಕ ದೈಹಿಕ, ಮಾನಸಿಕ, ಸಾಂಸ್ಕೃತಿಕ ಸದೃಡತೆಯನ್ನು ಗಳಿಸಿಕೊಂಡು ಸ್ವಾವಲಂಬನೆಯಿಂದ ಬದುಕುವ ಗುಣವನ್ನು ಬೆಳೆಸಬೇಕು ಎಂದರು.

ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಲು ಪ್ರೇರೇಪಿಸಿ ಕರ್ನಾಟಕದ ನೆಲ, ಜಲ, ಸಾಹಿತ್ಯ, ಕಲೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸುಗಟೂರು ಶಾಲೆಯ ಶಿಕ್ಷಕರು ಶ್ರಮವಹಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕಾಲಘಟ್ಟಕ್ಕೆ ಅನುಗುಣವಾಗಿ ಆನ್‌ಲೈನ್ ಮೂಲಕ ನಡೆದ ಶಿಬಿರದಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಾಡುವ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ನಾಂದಿ ಹಾಡಲಾಗಿದೆ ಎಂದರು.

ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ ಅವರು ಶಾಲೆಗೆ 10 ಸಾವಿರ ರೂ.ಗಳ ಟೇಬಲ್‌ಗಳನ್ನು ಕೊಡಿಸಿದರು. ಮುಂದಿನ ವರ್ಷದಲ್ಲಿ ನಡೆಯುವ ಅಂತರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂಗಳ ಸಹಾಯಧನವನ್ನು ಘೋಷಿಸಿದರು.

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಸಂರಕ್ಷಣೆ ಕುರಿತ ಜಾಗೃತಿಯ ಭಿತ್ತಿಪತ್ರ, ಕಿರು ಹೊತ್ತಿಗೆಗಳನ್ನು ಬಿಡುಗಡೆಮಾಡಲಾಯಿತು. ಪುಣೆಯ ಅಂತರಭಾರತಿ ಮತ್ತು ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ವತಿಯಿಂದ ಅಕ್ಟೋಬರ್ 2 ರಿಂದ 30 ರವರೆಗೆ ಆಲ್‌ಲೈನ್‌ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಎಸ್.ಆರ್.ಮೋಹನ್, ಎಸ್.ಎನ್.ಅನುಷಾ, ಎಸ್.ಎನ್.ಹೇಮಾ, ಎಸ್.ಕೆ.ದಾಕ್ಷಾಯಿಣಿ, ಎಸ್.ಆರ್.ಮೊನಿಕಾ, ಎಸ್.ಆರ್, ಶಿವಪ್ರಸಾದಾರಾಧ್ಯ. ಎಸ್.ಪಿ.ಧನುಷ್‌ಗೌಡ, ನಯನಾ, ಲಾವಣ್ಯ, ಎಸ್.ಎಂ.ನಂದಿನಿ, ಎಸ್.ಎನ್.ನಂದು ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ಜಂಗಮಕೋಟೆ ಪ್ರಾಥಮಿಕ ಆರೋಗ್ಯಕೇಂದ್ರದ ಕಿರಿಯ ಶುಶ್ರೂಷಕಿ ಎನ್.ಆಶಾ, ಆರೋಗ್ಯಕಾರ್ಯಕರ್ತೆ ಭಾಗ್ಯಮ್ಮ, ಲಕ್ಷ್ಮಮ್ಮ ಅವರಿಗೆ ಕೊರೋನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಕ್ಕಳಶಿಬಿರದಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಪ್ರೇರೇಪಿಸಿದ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಗೆ ರಾಷ್ಟ್ರೀಯ ಯುವಯೋಜನೆ ವತಿಯಿಂದ ಶಿಕ್ಷಕಸಂಘಟಕ್ ಪ್ರಶಸ್ತಿ, ಫಲಕ ನೀಡಿ ಗೌರವಿಸಲಾಯಿತು.

 ರಾಷ್ಟ್ರೀಯ ಯುವಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ತಲಾ 2500 ರೂ.ಗಳ ಗಿಫ್ಟ್ ಕೂಪನ್‌ಗಳನ್ನು ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಜಿಲ್ಲಾ ನೆಹರು ಯುವಕೇಂದ್ರದ ಯುವಪ್ರತಿನಿಧಿ ಎಚ್.ಸಿ.ಶ್ರೀಧರ್, ಸ್ವಯಂಸೇವಕ ವಿ.ಪ್ರಮೋದ್, ಗ್ರಾಮಪಂಚಾಯತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಭಾಗ್ಯಮ್ಮಅರುಣ್‌ಕುಮಾರ್, ಶಿವಶಂಕರಪ್ಪ, ಎಂ.ದೇವರಾಜು, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ್,ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್, ಸದಸ್ಯೆ ನರಸಮ್ಮ, ವಿನುತಾ, ಬಚ್ಚೇಗೌಡ, ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ನಾರಾಯಣಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಮ್ಮ, ಜಯಂತಿ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜು, ಲಕ್ಷ್ಮಯ್ಯ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಹಾಜರಿದ್ದರು.

ಎಲ್‌ಐಸಿ ಶಾಖೆಯ ಪ್ರತಿನಿಧಿಗಳಿಂದ ಗುರುವಂದನಾ ಕಾರ್ಯಕ್ರಮ

0
LIC Sidlaghatta Service Retirement Felicitation Guruvandana Program Farewell

ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಯದ ಆವರಣದಲ್ಲಿ ಭಾನುವಾರ ಎಲ್‌ಐಸಿ ಶಿಡ್ಲಘಟ್ಟ ಶಾಖೆಯ ಪ್ರತಿನಿಧಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಲ್‌ಐಸಿಯ ಚಿಂತಾಮಣಿ ವಿಭಾಗದ ಅಭಿವೃದ್ದಿ ಅಧಿಕಾರಿ ಎಚ್.ಜಿ.ಮೋಹನ್‌ದಾಸ್ ಅವರು ಯಾವುದೇ ಒಂದು ಕೆಲಸದಲ್ಲಿ ಮೊದಲು ಶ್ರದ್ದೆ ಇರಬೇಕು ಮತ್ತು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಪ್ರತಿಫಲ ಅದಾಗಿಯೇ ಬರುತ್ತದೆ ಎಂದರು.

ಸಮಾಜದಲ್ಲಿರುವ ಜನರಿಗೆ ಜೀವ ವಿಮೆ ಕಲ್ಪಿಸುವ ಜೊತೆಗೆ ಭ್ರಷ್ಟಚಾರ ರಹಿತ ವ್ಯವಸ್ಥೆಯಿರುವ ಏಕೈಕ ಸಂಸ್ಥೆಯೆಂದರೆ ಅದು ಭಾರತೀಯ ಜೀವ ವಿಮಾ ಸಂಸ್ಥೆ ಎಂದು ಅವರು ಹೇಳಿದರು.

 ಮನುಷ್ಯ ತನ್ನ ಜೀವನದಲ್ಲಿ ಸಂಪಾದನೆ ಮಾಡಲು ಹೇಗೆ ಆಸಕ್ತಿ ವಹಿಸುತ್ತಾನೋ ಅದರಂತೆಯೇ ಆತನನ್ನು ನಂಬಿಕೊಂಡಿರುವ ಸದಸ್ಯರ ಹಿತವನ್ನು ಸಹ ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಹೀಗಾಗಿ ಜೀವನದಲ್ಲಿ ಸಂಪಾದನೆ ಮಾಡುವ ಜೊತೆಗೆ ಜೀವ ವಿಮೆಯನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕಾಗಿದೆ ಇದರಿಂದ ಭವಿಷ್ಯದಲ್ಲಿ ಬಹಳ ಅನುಕೂಲಗಳು ಆಗುತ್ತದೆ ಎಂದರು.

 ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಆದರೆ ಎಲ್‌ಐಸಿ ಸಂಸ್ಥೆಯಲ್ಲಿ ಮಾತ್ರ ಜನರ ಆರೋಗ್ಯ ವಿಮೆ ಸೇವೆ ಒದಗಿಸುವ ಜೊತೆಗೆ ಪಾರದರ್ಶಕ ವ್ಯವಸ್ಥೆಯ ಮೂಲಕ ಭ್ರಷ್ಟಚಾರ ರಹಿತ ವ್ಯವಸ್ಥೆ ಇರುವ ಸಂಸ್ಥೆ ಎಂದರೆ ತಪ್ಪಾಗಲಾರದು. ನಾಗರಿಕರು ಉತ್ತಮ ಆರೋಗ್ಯ ಮತ್ತು ಭವಿಷ್ಯದ ಹಿತ ದೃಷ್ಟಿಯಿಂದ ಎಲ್‌ಐಸಿಯಲ್ಲಿ ವಿಮೆ ಮಾಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಕರೆ ನೀಡಿದರು.

 ಚಿಂತಾಮಣಿ ವಿಭಾಗದಲ್ಲಿ ಎಲ್‌ಐಸಿಯ ಅಭಿವೃದ್ದಿ ಅಧಿಕಾರಿಯಾಗಿ 31 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಈ ತಿಂಗಳು 30 ರಂದು ನಿವೃತ್ತಿ ಆಗುತ್ತಿರುವ ಹೆಚ್‌ಜಿ ಮೋಹನ್‌ದಾಸ್ ಅವರನ್ನು ಎಲ್‌ಐಸಿಯ ಪ್ರತಿನಿಧಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಅವರ ಪತ್ನಿ ನಳಿನಾಕ್ಷಿ ಮಗ ವಿಜಯ್ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಎಲ್‌ಐಸಿ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಅಶೋಕ್‌ಕುಮಾರ್, ಶಿವಕುಮಾರ್, ನರಸಿಂಹ, ಎಲ್‌ಐಸಿಯ ಶಾಖಾ ವ್ಯವಸ್ಥಾಪಕ ರಮೇಶ್, ಎಲ್‌ಐಸಿ ಪ್ರತಿನಿಧಿಗಳಾದ ಕೆಎಸ್ ಕನಕಪ್ರಸಾದ್, ನಾರಾಯಣಸ್ವಾಮಿ (ನಾಣಿ), ಸಾಬೀರ್, ಎಂ.ಎಸ್.ನಾಗರಾಜ್, ತಮ್ಮಣ್ಣ, ವೇಣು, ಜಯಂತಿ ಗ್ರಾಮ ದೇವು, ನಾಗರಾಜ್‌ರಾವ್, ರಾಮುಸ್ವಾಮಿ ಭಟ್ಟಚಾರಿ, ಸತೀಶ್, ರಮೇಶ್‌ಬಾಬು, ಚನ್ನಕೃಷ್ಣಪ್ಪ ಹಾಜರಿದ್ದರು.

Sidlaghatta Cocoon Market Watch – 22/11/2020

0
Sidlaghatta Silk cocoon Market Daily Price Update Raw Silk Filature Business Online Bivoltine Crossbreed Prices

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 22/11/2020

CB lots: 393
Qty: 20393 Kgs
Max: 480
Min: 182
Avg: 306

BV Lots: 05
Qty: 251 Kgs
Max: 372
Min: 310
Avg: 354

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
Sidlaghatta Kannada Rajyotsava Artists Felicitation Program

ಕಲಾವಿದರು ಸಮಾಜವನ್ನು ತಿದ್ದುವ ಪ್ರಕ್ರಿಯೆಯ ದೊಡ್ಡ ಭಾಗವಾಗಬೇಕು. ನೃತ್ಯ, ಸಂಗೀತ, ನಟನೆ ಕೇವಲ ಅಭಿವ್ಯಕ್ತಿಯಲ್ಲ, ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಲ್ಲ ಶಕ್ತಿಯಿರುವ ಕಲೆಯಿಂದ ಉತ್ತಮ ಸಮಾಜ, ಅಭಿರುಚಿಯುಳ್ಳ ಮನಸ್ಸುಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚಂದ್ರಶೇಖರ್ ತಿಳಿಸಿದರು.

 ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ಜನಪರ ವೇದಿಕೆಯ ಸಾಂಸ್ಕೃತಿಕ ಘಟಕದಿಂದ ಆಯೋಜಿಸಲಾಗಿದ್ದ 65 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ, ಸಾಂಸ್ಕೃತಿಕ ನೃತ್ಯ, ಗೀತ ಗಾಯನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಕಲೆ ಮತ್ತು ಸಾಹಿತ್ಯ ಮನಸ್ಸಿಗೆ ಸಂಸ್ಕಾರ ಕೊಡುವ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ. ಸಮಾಜದ ಶೋಷಿತರ, ದಮನಿತರ, ಕಷ್ಟಕ್ಕೊಳಗಾದವರ ದನಿಯಾಗಿಯೂ ಕಲೆ ಪ್ರದರ್ಶಿತವಾಗಬೇಕು. ಅನುಕರಣೆ ಮಾಡಬೇಡಿ, ಸ್ವಂತಿಕೆ ಬೆಳೆಸಿಕೊಳ್ಳಿ ಎಂದರು.

 ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಭಾಷಾ ಪ್ರೇಮ, ಕಲೆಯ ಅಭಿರುಚಿ ಹಿಂದಿನಿಂದಲೂ ಬೆಳೆಸಿಕೊಂಡು ಬರಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆಡುತ್ತಿದ್ದ ನಾಟಕಗಳು ಈಚೆಗೆ ಕಡಿಮೆಯಾಗಿವೆ. ಕಲೆಯು ದುಡಿವ ಜನರಿಗೆ ಮನರಂಜನೆ ಹಾಗೂ ಉತ್ಸಾಹ ತುಂಬುತ್ತದೆ ಎಂದರು.

 ನಗರಸಭೆ ಸದಸ್ಯ ಎಂ.ಮುನಿರಾಜು ಮಾತನಾಡಿ, ಸ್ಥಳೀಯ ಕಲಾವಿದರು, ಎಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಈಗಿನ ತಾಂತ್ರಿಕ ಯುಗದಲ್ಲಿ ಕಲಿಕೆಗೆ ನೂರಾರು ಮಾರ್ಗಗಳಿವೆ ಹಾಗೆಯೇ ಕಲಾ ಪ್ರದರ್ಶನಕ್ಕೂ ಹಲವು ಮಾರ್ಗಗಳಿವೆ. ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಹೆಚ್ಚಬೇಕು ಎಂದರು.

 ಕರ್ನಾಟಕ ಜನಪರ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ರೈತ ಸಂಘದ ತಾದೂರು ಮಂಜುನಾಥ್, ಬೆಳ್ಳೂಟಿ ಮುನಿಕೆಂಪಣ್ಣ, ಪ್ರತೀಶ್, ನಗರ ಸಭೆ ಸದಸ್ಯರಾದ ಅನಿಲ್ ಕುಮಾರ್, ನಾರಾಯಣಸ್ವಾಮಿ,  ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜು, ರಾಜೇಶ್ವರಿ, ಮುನಿಂದ್ರ, ಮನೋಹರ್, ದೀಪಿಕಾ, ಮುನಿರಾಜು ಹಾಜರಿದ್ದರು.

ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದಯುತವಾಗಿ ಬಾಳಬೇಕು

0
Sidlaghatta Harmony BEO Education

ವೈವಿಧ್ಯವಾದ ಭಾಷೆ, ವೇಷ, ಆಹಾರ, ಸಂಸ್ಕೃತಿವುಳ್ಳ ಭಾರತದಲ್ಲಿ ಸೌಹಾರ್ದತೆ ಏಕತೆಗೆ ಮನ್ನಣೆ ನೀಡಲಾಗಿದೆ. ಇದರಿಂದಾಗಿ ನಮ್ಮ ದೇಶ ಜಗತ್ತಿನಲ್ಲಿಯೇ ವಿಶಿಷ್ಟವೆನಿಸಿದ್ದು, ಸುಸಂಸ್ಕೃತಿಗೆ ಹೆಸರಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ತಿಳಿಸಿದರು. 

 ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ನಗರದ ಬಿ.ಆರ್.ಸಿ ಕೇಂದ್ರದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ “ಭಾಷಾ ಸೌಹಾರ್ದತಾ ದಿನ” ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ರಾಷ್ಟ್ತ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ ಮೂಲಕ ನಮ್ಮೊಳಗಿನ ಭಿನ್ನತೆಗಳಿಗೆ ತೆರೆ ಹಾಡಿ ಸೌಹಾರ್ದ ಭಾರತದ ಕನಸನ್ನು ಮಾದರಿಯಾಗಿಸಬೇಕಾಗಿದೆ. ನಮ್ಮ ದೇಶದ ಸಂಸ್ಕೃತಿಯೇ ಸೌಹಾರ್ದಕ್ಕೆ ಹೆಸರಾದುದು. ಅದರಲ್ಲೂ ಕನ್ನಡಿಗರೂ ಇಡೀ ದೇಶದಲ್ಲಿಯೇ ಸೌಹಾರ್ದಕ್ಕೆ ಹೆಸರಾದವರು ಎಂದರು.

 ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ ಮಾತನಾಡಿ, ಕನ್ನಡದ ಪರಿಶುದ್ಧತೆಯೊಂದಿಗೆ ಅನ್ಯ ಭಾಷೆ ಕಲಿಯಲು ತೊಡಕಿಲ್ಲ. ಆದರೆ ನಮ್ಮ ಭಾಷೆ ಪ್ರೀತಿ ಇರಲಿ, ಪರಭಾಷೆಯ ದ್ವೇಷ ಬೇಡ. ಭಾಷೆ ಜಾತಿಯ ಹೆಸರಿನಲ್ಲಿ ವ್ಯಾಜ್ಯಗಳಾಗಿ ನೆಮ್ಮದಿ ಕದಡುವುದು ಬೇಡ ಎಂದು ಹೇಳಿದರು.

 ಮುಖ್ಯ ಭಾಷಣಕಾರ ಶಿಕ್ಷಕ ಕೆಂಪಣ್ಣ ಮಾತನಾಡಿ, ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆಯನ್ನು ಕಾಪಾಡಲು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸ ಬೇಕು. ಭಾರತ ಮಾತೆಯ ಸುಪುತ್ರರಾದ ನಾವು ಭೇದ ಭಾವ ಬಿಸಾಕಿ ಏಕತೆಯ ಡಿಂಡಿಮ ಬಾರಿಸಬೇಕು. ಐಕ್ಯತಾ ಸಪ್ತಾಹದ ನಿಮಿತ್ತ ಅಲ್ಪ ಸಂಖ್ಯಾತರ ಕಲ್ಯಾಣ ದಿನ, ಭಾಷಾ ಸೌಹಾರ್ದತಾ ದಿನ, ದುರ್ಬಲ ವರ್ಗಗಳ ದಿನ, ಸಾಂಸ್ಕೃತಿಕ ಏಕತಾ ದಿನ, ಮಹಿಳಾ ದಿನ, ಪರಿಸರ ರಕ್ಷಣಾ ದಿನಗಳ ಕುರಿತು ಚರ್ಚೆ ಸಂವಾದ ಏರ್ಪಡಿಸುವುದರ ಮೂಲಕ ಏಕತೆಯ ಬೆಸುಗೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದರು.

 ವಕೀಲರಾದ ಲೋಕೇಶ್, ಸುಬ್ರಮಣ್ಯಪ್ಪ, ಆರ್.ವಿ.ವೀಣಾ, ರಾಮಕೃಷ್ಣ, ಶಿಕ್ಷಣ ಸಂಯೋಜಕರಾದ ಭಾಸ್ಕರ್ ಗೌಡ, ಪರಿಮಳ, ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಹಾಜರಿದ್ದರು.

ಮನೆಗಳ್ಳತನ ತಡೆಯಲು LHMS ಚಿಕ್ಕಬಳ್ಳಾಪುರ ಪೊಲೀಸ್ App

0
Chikkaballapur District Sidlaghatta Taluk Home security LHMS Mobile app

ಮದುವೆ, ಆಸ್ಪತ್ರೆ, ಪ್ರವಾಸ ಅಥವ ಇನ್ನಿತರ ಕಾರ್ಯಕ್ರಮಗಳಿಗೆ ಮನೆ ಮಂದಿಯೆಲ್ಲಾ ತೆರಳುವ ಸಮಯದಲ್ಲಿ ಕಳ್ಳತನ ಅಥವಾ ಮನೆ ಸುರಕ್ಷತೆಯ ಬಗ್ಗೆ ಆತಂಕಪಡುವ ಬದಲಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ ಆರಂಭಿಸಿರುವ ಎಲ್ ಎಚ್ ಎಂ ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಆಪ್‌ನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಿ ಎಂದು ನಗರಠಾಣೆ ಪಿಎಸ್ಸೈ ಸತೀಶ್ ಮನವಿ ಮಾಡಿದರು.

ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಾದ್ಯಂತ ಕಳ್ಳತನ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಎಲ್ ಎಚ್ ಎಂ ಎಸ್ ಸೇವೆ ಪಡೆಯಲು ಬಯಸುವ ನಾಗರಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಎಲ್ ಎಚ್ ಎಂ ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಆಪ್‌ನ್ನು ಅಳವಡಿಸಿಕೊಂಡು ಪೂರ್ಣ ಮಾಹಿತಿ ಸಮೇತ ಹೆಸರು ನೋಂದಾಯಿಸಿಕೊಂಡಲ್ಲಿ ಅಂತಹವರ ಮನೆಗಳಲ್ಲಿ ಇಲಾಖೆಯಿಂದ ಮೋಷನ್ ಸೆನ್ಸಾರ್ ಕೆಮೆರಾ ಅಳವಡಿಸುವ ಮೂಲಕ ಕಳ್ಳತನಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

ಎಲ್ ಎಚ್ ಎಂ ಎಸ್ ಸೇವೆ ಸೇವೆಗೆ ಕೋರಿಕೆ ಸಲ್ಲಿಸಿದ ನಾಗರಿಕರ ಮನೆಗೆ ಇಲಾಖೆ ನೀಡುವ ಕಣ್ಗಾವಲು ಸೇವೆ ಸಂಪೂರ್ಣ ಉಚಿತವಾಗಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಠಾಣೆಯ ಮಹಿಳಾ ಪಿಎಸ್ಸೈ ಪದ್ಮಾವತಿ, ಎಎಸ್ಸೈ ನವಾಜ್ ಅಹಮ್ಮದ್, ಪೇದೆ ರಾಜಶೇಖರ್, ಕೃಷ್ಣ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 4 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0
Covid-19 sidlaghatta coronavirus Covid Positive Cases Taluk village

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 4 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ನಗರದ 30 ವರ್ಷದ ಗಂಡಸು,
  2. C R ಲೇಔಟ್ ನ 28 ವರ್ಷದ ಮಹಿಳೆ,
  3. ನಲ್ಲರಾಳ್ಳಹಳ್ಳಿಯ 30 ವರ್ಷದ ಗಂಡಸು,
  4. H-Cross ನ 26 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 21/11/2020

0
Sidlaghatta Silk cocoon Market Daily Price Update Raw Silk Filature Business Online Prices

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 21/11/2020

CB lots: 358
Qty: 18834 Kgs
Max: 400
Min: 150
Avg: 300

BV Lots: 02
Qty: 118 Kgs
Max: 380
Min: 333
Avg: 368

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ರೈತ ಮುಖಂಡ ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ ನಿಧನ

0
Sonnenahalli Narayanaswamy Sidlaghatta Taluk Demise

ಜಿಲ್ಲಾ ರೈತ ಹೋರಾಟಗಾರ ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ(76) ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಮಂಡಲ್ ಅಧ್ಯಕ್ಷರಾಗಿದ್ದ ಇವರು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಿದ್ದರು. ಪ್ರಗತಿ ಮಾನಸಿಕ ಅಸ್ವಸ್ಥರ ಚಿಕಿತ್ಸಾ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಇಬ್ಬರು ಪತ್ನಿಯರು, ಒಂದು ಗಂಡು 5 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸ್ವಗ್ರಾಮ ಸೊಣ್ಣೇನಹಳ್ಳಿಯಲ್ಲಿ ಬುಧವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಎಸ್.ಎಂ.ನಾರಾಯಣಸ್ವಾಮಿ ಅವರು 1987 ರಲ್ಲಿ ಕುಂದಲಗುರ್ಕಿ ಮಂಡಲ್ ಅಧ್ಯಕ್ಷರಾಗಿ, ನಂತರ ಶಿಡ್ಲಘಟ್ಟ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 2002 ರಲ್ಲಿ ಚಿಕ್ಕಬಳ್ಳಾಪುರ ಎಪಿಎಮ್‌ಸಿ ಅಧ್ಯಕ್ಷರಾಗಿ, 2010 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಹಾಗೂ ಕನ್ನಡಪರ ಸಂಘಟನೆಗಳು, ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜ ಮುಖಿ ಕೆಲಸ ಮಾಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹಾಗೂ ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡುವ ರಿಚ್ಮಂಡ್  ಫೆಲೋಶಿಪ್ ಅಧ್ಯಕ್ಷರಾಗಿ ಸಮಾಜ ಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

 ಅಂತ್ಯ ಸಂಸ್ಕಾರದಲ್ಲಿ ಮಾಜಿ ಲೋಕಸಭಾ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಮುನೇಗೌಡ, ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್, ಪಿ.ಎನ್.ರಘುನಾಥರೆಡ್ಡಿ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ರೈತ ಮುಖಂಡರು ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿಕೋರಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ತಾಲ್ಲೂಕಿನ ಬಳುವನಹಳ್ಳಿಯ 21 ವರ್ಷದ ಮಹಿಳೆ,
  2. ದಬರಗಾನಹಳ್ಳಿಯ 32 ವರ್ಷದ ಗಂಡಸು, 16 ವರ್ಷದ ಗಂಡಸು,
  3. ದಿಬ್ಬೂರಹಳ್ಳಿಯ 32 ವರ್ಷದ ಗಂಡಸು, 21 ವರ್ಷದ ಗಂಡಸು,
  4. ವರದನಾಯಕನಹಳ್ಳಿಯ 18 ವರ್ಷದ ಗಂಡಸು,
  5. ನಾರಾಯಣದಾಸರಹಳ್ಳಿಯ 21 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 18/11/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 18/11/2020

CB lots: 450
Qty: 22157 Kgs
Max: 455
Min: 130
Avg: 286
BV Lots: 16
Qty: 816 Kgs
Max: 380
Min: 222
Avg: 346

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಕಾಲೇಜು ಪುನರಾರಂಭ; ವಿದ್ಯಾರ್ಥಿಗಳ ಗಂಟಲುದ್ರವ ಪರೀಕ್ಷೆ

0

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಆಸ್ಪತ್ರೆಯ ವತಿಯಿಂದ ನಡೆಸಲಾಗುತ್ತಿದ್ದ ಸ್ವಾಬ್ ಪರೀಕ್ಷೆಯನ್ನು ಪರಿಶೀಲಿಸಿ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿದರು.

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ದಿನ ಕಾಲೇಜಿಗೆ ಆಗಮಿಸುತ್ತಿದ್ದು, ಪ್ರತಿಯೊಬ್ಬರ ಗಂಟಲುದ್ರವ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

 ತಾಲ್ಲೂಕಿನಲ್ಲಿ ಕೊರೊನಾ ಹಾವಳಿ ತಗ್ಗಿರುವಂತೆಯೇ ಕಾಲೇಜು ಪುನರಾರಂಭಗೊಳ್ಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬೋಧಕರು ಹಾಗೂ ಸಿಬ್ಬಂದಿಗಳಿಗೆ ಮೂರು ದಿನ ಮೊದಲೇ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಈ ದಿನ ಪರೀಕ್ಷೆ ಮಾಡಿಸಲಾಗುತ್ತಿದೆ. ಕಾಲೇಜಿನ ಕಟ್ಟಡ, ಶೌಚಾಲಯ, ಎಲ್ಲ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇವೆ. ಒಂದು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ಕೂರುವಂತೆ ವ್ಯವಸ್ಥೆ ಮಾಡಿದ್ದೇವೆ. ನಗರದ ಡಾಲ್ಫಿನ್ ಕಾಲೇಜನ್ನು ಶುಕ್ರವಾರದಿಂದ ಪ್ರಾರಂಭಿಸಲಿದ್ದು, ಅಲ್ಲಿನ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಈ ದಿನ ಸ್ವಾಬ್ ಪರೀಕ್ಷೆ ಮಾಡಿಸಿದ್ದೇವೆ ಎಂದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಆಂಡ್ರಾಯಿಡ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆಪ್ ಡೌನ್ ಕಡ್ಡಾಯವಾಗಿ ಲೋಡ್ ಮಾಡಿಕೊಳ್ಳಲೇಬೇಕು. ಇದರಿಂದಾಗಿ ಅವರ ಹತ್ತಿರ ಪಾಸಿಟೀವ್ ಇದ್ದವರು ಬಂದಾಗ ಮಾಹಿತಿ ತಿಳಿಯುತ್ತದೆ ಎಂದು ನುಡಿದರು.

ಶಿಡ್ಲಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ 118 ವಿದ್ಯಾರ್ಥಿಗಳಿದ್ದಾರೆ. ಕಾಲೇಜು ಪುನರಾರಂಭಗೊಂಡ ಮೊದಲ ದಿನವಾದ ಮಂಗಳವಾರ ಹಾಜರಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 20.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 0 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi